ETV Bharat / bharat

ಚೇತರಿಸಿಕೊಳ್ಳುತ್ತಿರುವ ಭಾರತ.. ಇನ್ನೂ ಅಸ್ತಿತ್ವದಲ್ಲಿರುವ ಸವಾಲುಗಳು ಯಾವುವು..? - worst health and economic crises

ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ಮಾಸಿಕ ಬುಲೆಟಿನ್‌ನಲ್ಲಿ ಭಾರತೀಯ ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ಭರವಸೆಯನ್ನು ವ್ಯಕ್ತಪಡಿಸಿದ್ದು, ಚೇತರಿಕೆಯತ್ತ ಸಾಗುತ್ತಿದೆ ಎಂದು ಹೇಳಿದೆ. ಭಾರತ ನಿಧಾನವಾಗಿ ಪ್ರಗತಿಯನ್ನು ಮತ್ತೆ ದಾಖಲಿಸ ತೊಡಗಿದ್ದು, ಇನ್ನೂ ಅಸ್ತಿತ್ವದಲ್ಲಿರುವ ಸವಾಲುಗಳು ಯಾವುವು ಎಂದು ಇಲ್ಲಿದೆ ನೋಡಿ...

budget
budget
author img

By

Published : Jan 31, 2021, 3:50 PM IST

ಇದುವರೆಗೆ ಕಂಡ ಅತ್ಯಂತ ಕೆಟ್ಟ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ನಂತರ ಭಾರತ ನಿಧಾನವಾಗಿ ಪ್ರಗತಿಯನ್ನು ಮತ್ತೆ ದಾಖಲಿಸ ತೊಡಗಿದೆ. ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಮತ್ತು ದೇಶಾದ್ಯಂತ ಲಸಿಕೆ ವಿತರಣೆಯಾಗತೊಡಗಿರುವುದು ಆರ್ಥಿಕ ಪುನರುಜ್ಜೀವನಕ್ಕೆ ಹೊಸ ಭರವಸೆಯನ್ನು ನೀಡ ತೊಡಗಿದೆ.

ಆರ್ಥಿಕ ಬೆಳವಣಿಗೆಯ ಕೆಲವು ಸೂಚಕಗಳ ಅಂಕಿ ಅಂಶಗಳು ಕೂಡ ಇದನ್ನೇ ಸೂಚಿಸುತ್ತಿವೆ. ಉದಾಹರಣೆಗೆ, 2020ರ ಡಿಸೆಂಬರ್‌ನಲ್ಲಿ ಉತ್ಪಾದನಾ ಚಟುವಟಿಕೆ ಬಲಗೊಳ್ಳುವುದು ಮುಂದುವರೆದಿತ್ತು. ದಾಸ್ತಾನುಗಳನ್ನು ಪುನರ್ ​ನಿರ್ಮಿಸುವ ಪ್ರಯತ್ನಗಳ ನಡುವೆಯೇ ವ್ಯವಹಾರಗಳು ಉತ್ಪಾದನೆಯನ್ನು ಹೆಚ್ಚಿಸಿದ್ದವು. ಸಮಯಕ್ಕೆ ಸೂಕ್ತವಾಗುವಂತೆ ಮರು ಹೊಂದಿಕೆ ಮಾಡಲಾಗಿದ್ದ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕವು ನವೆಂಬರ್‌ನಲ್ಲಿ 56.3ಕ್ಕಿಂತ ಸ್ವಲ್ಪ ಹೆಚ್ಚು, ಅಂದರೆ, 56.4ರಷ್ಟಿತ್ತು.

ಮತ್ತೊಂದೆಡೆ, ಆರ್ಥಿಕತೆಯ ಬೇಡಿಕೆಯ ಪ್ರಮುಖ ಸೂಚಕಗಳ ಪೈಕಿ ಒಂದಾಗಿರುವ ಪ್ರಯಾಣಿಕ ವಾಹನಗಳ ಮಾರಾಟವು 2019ರ ಅವಧಿಗೆ ಹೋಲಿಸಿದರೆ, 2020ರ ಡಿಸೆಂಬರ್‌ನಲ್ಲಿ ಶೇಕಡಾ 14ರಷ್ಟು ಹೆಚ್ಚಾಗಿದೆ. ಮಾರುಕಟ್ಟೆಗಳು ಸಹ ಭಾರಿ ಪ್ರಮಾಣದ ತೇಜಿಗೆ ಸಾಕ್ಷಿಯಾದವು. ಜನವರಿ 21, 2021ರಂದು ಮೊದಲ ಬಾರಿಗೆ ಸೆನ್ಸೆಕ್ಸ್‌ ತನ್ನ ಸಾರ್ವಕಾಲಿಕ ಗರಿಷ್ಠ 50,000 ಮಾನ ದಂಡವನ್ನು ದಾಟಿತು. 2020ರ ಏಪ್ರಿಲ್‌ನಲ್ಲಿ ದೇಶವು ಮೊದಲ ಬಾರಿ ಲಾಕ್‌ಡೌನ್‌ಗೆ ಹೋದಾಗ ಇದ್ದ ಮೌಲ್ಯಕ್ಕೆ ಹೋಲಿಸಿದರೆ, ಇದು ಸುಮಾರು ಶೇಕಡಾ 70ರಷ್ಟು ಹೆಚ್ಚಾಗಿದೆ.

ಇವೆಲ್ಲವುಗಳ ಜೊತೆಗೆ ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ಮಾಸಿಕ ಬುಲೆಟಿನ್‌ನಲ್ಲಿ ಭಾರತೀಯ ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ಭರವಸೆಯನ್ನು ವ್ಯಕ್ತಪಡಿಸಿದ್ದು, ಚೇತರಿಕೆಯತ್ತ ಸಾಗುತ್ತಿದೆ ಎಂದು ಹೇಳಿದೆ. ಸ್ವಾತಂತ್ರ್ಯ ನಂತರದ ಭಾರತದ ಬೆಳವಣಿಗೆಯ ಅತ್ಯಂತ ನಕಾರಾತ್ಮಕ ಬೆಳವಣಿಗೆ 2020ರ ಮೊದಲ ತ್ರೈಮಾಸಿಕದಲ್ಲಿ ದಾಖಲಾಗಿದ್ದು, ಆ ಅವಧಿಯಲ್ಲಿ ಶೇಕಡಾ 23.9ರಷ್ಟು ಹಿನ್ನಡೆ ಅನುಭವಿಸಿದ ದೇಶದ ಆರ್ಥಿಕತೆಗೆ ಮೇಲೆ ತಿಳಿಸಿದ ಸೂಚಕಗಳ ಕಾರ್ಯಕ್ಷಮತೆ ಮತ್ತು ಮಾರುಕಟ್ಟೆಗಳ ಪ್ರತಿಕ್ರಿಯೆಯು ಸಾಕಷ್ಟು ನೆಮ್ಮದಿ ತಂದಿದೆ.

ಆರ್ಥಿಕತೆಯ ಕಾರ್ಯಕ್ಷಮತೆ ಪ್ರಗತಿಯತ್ತ ಸಾಗಿದೆ ಎಂಬುದನ್ನು ಬಿಂಬಿಸುವ ಈ ಸಕಾರಾತ್ಮಕ ಸುದ್ದಿಗಳು ಸ್ವಾಗತಾರ್ಹವಾದರೂ, ಬೆಳವಣಿಗೆಯ ಮುಂಚೂಣಿಯಲ್ಲಿ ನಾವು ಸಾಧಿಸತೊಡಗಿದ ಪ್ರಗತಿಯನ್ನು ಹದಗೆಡಿಸುವಂತಹ ಶಕ್ತಿಗಳ ವಿರುದ್ಧ ನಮ್ಮ ನೀತಿ ನಿರೂಪಕರು ಹೊಂದಿರುವ ಹೋರಾಟವನ್ನು ಸಡಿಲಗೊಳಿಸುವುದನ್ನು ಅವು ಮಾಡುವಂತಿರಬಾರದು. ಒಂದೆರಡು ದಿನಗಳಲ್ಲಿ ಬಜೆಟ್ ಮಂಡಿಸಲು ಹಣಕಾಸು ಸಚಿವರು ಸಜ್ಜಾಗಿರುವ ಈ ಸಮಯದಲ್ಲಿ ಇನ್ನೂ ಸುಪ್ತವಾಗಿಯೇ ಇರುವ ಆರ್ಥಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಸಂದರ್ಭ ಇದಾಗಿದ್ದು, ಇದಕ್ಕೆ ಆದ್ಯತೆಯ ಆಧಾರದ ಮೇಲೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.

ಸವಾಲುಗಳು ಇನ್ನೂ ಹಾಗೇ ಉಳಿದಿವೆ:

ಮೊದಲ ಮತ್ತು ಪ್ರಮುಖ ಸವಾಲು ಎಂದರೆ ಕೋವಿಡ್-19 ಸಾಂಕ್ರಾಮಿಕವು ಇಡೀ ದೇಶವನ್ನು ಆವರಿಸಿಕೊಂಡ ನಂತರ ಗಾಢವಾಗಿರಬಹುದಾದ ಹಾಗೂ ವಿಸ್ತಾರಗೊಂಡಿರಬಹುದಾದ ಆದಾಯದ ಅಸಮಾನತೆಗಳು. ಸಾಂಕ್ರಾಮಿಕವನ್ನು ಹಾಗೂ ಆದಾಯದ ಪರಿಣಾಮಗಳನ್ನು ನಿಭಾಯಿಸುವ ಸಾಮರ್ಥ್ಯವು ಸಮಾಜದ ವಿವಿಧ ವರ್ಗಗಳಿಗೆ ಭಿನ್ನವಾಗಿರುತ್ತದೆ ಎಂಬ ವಾಸ್ತವವೇ ಇದಕ್ಕೆ ಕಾರಣ. ಒಂದೆಡೆ ಕಾರ್ಮಿಕ ವರ್ಗವು ಉದ್ಯೋಗಗಳನ್ನು ಕಳೆದುಕೊಂಡು, ಅವರ ಉಳಿತಾಯವು ಕ್ಷೀಣಿಸುತ್ತ ಸಾಗಿದ್ದರೆ, ಇನ್ನೊಂದೆಡೆ ಅದೇ ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದ ಮತ್ತೊಂದು ವರ್ಗವಿದೆ.

ಆಕ್ಸ್‌ಫ್ಯಾಮ್‌ ವರದಿಯಿಂದ ಈ ಬೆಳವಣಿಗೆ ಸ್ಪಷ್ಟವಾಗಿದ್ದು, ಕಳೆದ 10 ತಿಂಗಳಲ್ಲಿ ಭಾರತೀಯ ಕೋಟ್ಯಾಧಿಪತಿಗಳ ಸಂಪತ್ತು ಶೇಕಡಾ 35ರಷ್ಟು ಹೆಚ್ಚಾಗಿದೆ ಎಂದು ಅದು ಸೂಚಿಸುತ್ತದೆ. ಈ ವರದಿಯ ಪ್ರಕಾರ, ಸದರಿ ಅವಧಿಯಲ್ಲಿ ಅಗ್ರ 100 ಶತಕೋಟ್ಯಾಧಿಪತಿಗಳ ಸಂಪತ್ತಿನಲ್ಲಾದ ಹೆಚ್ಚಳ ಪ್ರಮಾಣ ಎಷ್ಟಿದೆ ಎಂದರೆ, ಆ ಮೊತ್ತದಲ್ಲಿ ನರೇಗಾ ಯೋಜನೆಯನ್ನು ಹತ್ತು ವರ್ಷಗಳವರೆಗೆ ನಿಭಾಯಿಸಬಹುದು.

ಮತ್ತೊಂದೆಡೆ, ಕಾರ್ಪೊರೇಟ್‌ಗಳ ಸಂಪತ್ತಿನ ಹೆಚ್ಚಳವು ಉದ್ಯೋಗ ಅವಕಾಶಗಳನ್ನು ಅದೇ ಪ್ರಮಾಣದಲ್ಲಿ ಸುಧಾರಿಸಿದಂತೆ ಕಾಣುತ್ತಿಲ್ಲ. ಹೊಸ ನೇಮಕಾತಿಗಳು ನಿರೀಕ್ಷಿತ ವೇಗವನ್ನು ಇನ್ನೂ ಪಡೆದುಕೊಂಡಿಲ್ಲ ಹಾಗೂ ಅನೇಕ ಕ್ಷೇತ್ರಗಳಲ್ಲಿ ಈಗ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕಡಿಮೆಗೊಳಿಸಿದ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ ಎಂಬ ವಾಸ್ತವಾಂಶವೇ ಇದಕ್ಕೆ ಕಾರಣ. ಒಟ್ಟಾರೆ ಬೇಡಿಕೆಯ ಬೆಳವಣಿಗೆಯ ಮೇಲೆ ಇದು ಗಂಭೀರ ಪರಿಣಾಮ ಬೀರುವಂಥದಾಗಿದ್ದು, ಆರ್ಥಿಕ ಬೆಳವಣಿಗೆಯನ್ನು ಸಾಧಿಸುವಲ್ಲಿ ಹಾಗೂ ಅದನ್ನು ಉಳಿಸಿಕೊಳ್ಳುವಲ್ಲಿ ಹಾನಿಕಾರಕವಾಗಿದೆ.

ಎರಡನೆಯ ವಿಷಯವೆಂದರೆ, 2014-15ರಿಂದ 2018-19ರ ನಡುವೆ ಕೃಷಿ ಕ್ಷೇತ್ರದ ಕಡಿಮೆ ಬೆಳವಣಿಗೆಯ ದರದಿಂದಾಗಿ ಗ್ರಾಮೀಣ ವೇತನದಲ್ಲಿ ಉಂಟಾಗಿರುವ ನಿಶ್ಚಲತೆ. ಈ ಉದ್ಯೋಗಿಗಳು ದೇಶದ ಅಂದಾಜು ಶೇಕಡಾ 43 ರಷ್ಟಿದ್ದು, ಗ್ರಾಮೀಣ ಭಾರತದಲ್ಲಿ ವೇತನದಲ್ಲಿನ ನಿಶ್ಚಲತೆಯು ಒಟ್ಟಾರೆ ಬೇಡಿಕೆಯಲ್ಲಿ ಇಳಿಕೆಗೆ ಕಾರಣವಾಯಿತು. ಹೆಚ್ಚಾಗಿ ನಗರ ಪ್ರದೇಶಗಳಲ್ಲಿನ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ಕೈಗಾರಿಕಾ ವಸ್ತುಗಳ ಬೇಡಿಕೆ ಹಾಗೂ ಎಂಎಸ್‌ಎಂಇಗಳ ಕುಸಿತಕ್ಕೂ ಇದೇ ಕಾರಣವಾಯಿತು. ನಗರ ಭಾರತದಲ್ಲಿ ಮತ್ತು ಎಂಎಸ್‌ಎಂಇಗಳಲ್ಲಿ ಉತ್ಪಾದನೆ ಕುಸಿತ ಹಾಗೂ ಕೆಲಸದಿಂದ ತೆಗೆದುಹಾಕುವಿಕೆಗೆ ಇದು ಕಾರಣವಾಯಿತು.

ಇದರ ಪರಿಣಾಮವಾಗಿ, ಆದಾಯದ ನಷ್ಟದಿಂದ ಬೇಡಿಕೆ ಮತ್ತಷ್ಟು ಕುಸಿಯಿತಲ್ಲದೇ ಅದು ನಿಧಾನಗತಿಯತ್ತ ಸಾಗಿತು. ಕೊರೊನಾ ವೈರಸ್‌ನ ಆಗಮನ ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿಬಿಟ್ಟಿತು. ಆದ್ದರಿಂದ ಕೃಷಿ ಮತ್ತು ಎಂಎಸ್‌ಎಂಇ ವಲಯವನ್ನು ಆದ್ಯತೆಯ ಆಧಾರದ ಮೇಲೆ ಪುನರುಜ್ಜೀವನಗೊಳಿಸುವುದು ತಕ್ಷಣ ನಡೆಯುವ ಕೆಲಸವಾಗಬೇಕಿದ್ದು, ಇದು ದೇಶದ ಶೇಕಡಾ 80ರಷ್ಟು ಉದ್ಯೋಗಿಗಳನ್ನು ಜಂಟಿಯಾಗಿ ಪೋಷಿಸುತ್ತದೆ.

ಏನನ್ನು ಮಾಡಲು ಸಾಧ್ಯ?

ಆದಾಯದ ಅಸಮಾನತೆಗಳನ್ನು ಪರಿಹರಿಸಬೇಕೆಂದರೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಜನರ ಆದಾಯವನ್ನು ಹೆಚ್ಚಿಸುವುದು ಸೂಕ್ತ. ನಾವು ನೋಡುತ್ತಿರುವ ನಿರುದ್ಯೋಗವು COVID-19 ನಿಂದಷ್ಟೇ ಪ್ರಚೋದಿಸಲ್ಪಟ್ಟಿಲ್ಲ ಎಂಬುದನ್ನು ಗಮನಿಸಬೇಕು. ವಾಸ್ತವವಾಗಿ, ಈಗಾಗಲೇ ಕಠೋರವಾಗಿದ್ದ ಪರಿಸ್ಥಿತಿಯನ್ನು ಈ ಸಾಂಕ್ರಾಮಿಕವು ಮತ್ತಷ್ಟು ಉಲ್ಬಣಗೊಳಿಸಿತು.

ಆದ್ದರಿಂದ ಇದು ಪುನರಾವರ್ತಿತ ಸಮಸ್ಯೆಯ ಬದಲಾಗಿ ರಚನಾತ್ಮಕ ಸಮಸ್ಯೆ ಆಗಿದೆ. ಇಂತಹ ಸನ್ನಿವೇಶದಲ್ಲಿ ಅಸ್ತಿತ್ವದಲ್ಲಿರುವ ಉದ್ಯೋಗಿಗಳು ಹಾಗೂ ಹೊಸ ನೇಮಕಾತಿಗಳಿಗೆ ವೇತನ ಸಹಾಯಧನವನ್ನು ನೀಡುವ ಆಯ್ಕೆಯನ್ನು ನಿರ್ದಿಷ್ಟ ಅವಧಿಗೆ ಪರಿಗಣಿಸಬಹುದು. ಅಂತಹ ಉಪಕ್ರಮವು ಉದ್ಯೋಗ ನಷ್ಟವನ್ನು ತಪ್ಪಿಸುತ್ತದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗಿಗಳಿಗೆ ಸ್ಥಿರವಾದ ಆದಾಯವನ್ನು ಖಾತರಿಪಡಿಸುತ್ತದೆ.

ಮತ್ತೊಂದೆಡೆ ಉದ್ಯೋಗಿಗಳ ಪೈಕಿ ಶೇಕಡಾ 97ರಷ್ಟಿರುವ ಅಸಂಘಟಿತ ಕಾರ್ಮಿಕರ ಸಮಸ್ಯೆಯನ್ನು ಸಹ ತುರ್ತಾಗಿ ಪರಿಹರಿಸಬೇಕಾಗಿದೆ. ಅವರ ವಿವರಗಳನ್ನು ಸಂಗ್ರಹಿಸುವ ಪ್ರಯತ್ನಗಳನ್ನು ಮಾಡಲಾಗಿದ್ದರೂ, ನಗದು ವರ್ಗಾವಣೆ ಅವರಿಗೆ ಬೇಗ ತಲುಪುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸೂಕ್ತವಾಗಿದೆ. ಇದು ಅವರ ಜೀವನವನ್ನಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಅವರ ಆರ್ಥಿಕತೆಯನ್ನು ಸಹ ಸ್ಥಿರಗೊಳಿಸಬಲ್ಲದು.

ನರೇಗಾ ಹಾಗೂ ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹಂಚಿಕೆಗಳನ್ನು ಮಾಡಬೇಕು. ಇದು ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುವ ಜೊತೆಗೆ ಬೇಡಿಕೆಯ ಬೆಳವಣಿಗೆಗೆ ವೇಗ ತರಲಿದ್ದು, ಪ್ರಸಕ್ತ ಸಂದರ್ಭದಲ್ಲಿ ಇದು ತುಂಬಾ ಅಗತ್ಯವಾಗಿದೆ. 2020-21ರ ವಿತ್ತೀಯ ವರ್ಷದಲ್ಲಿ ಹಣಕಾಸಿನ ಕೊರತೆಯು ಶೇಕಡಾ 6.2ರಿಂದ 6.5ರ ವ್ಯಾಪ್ತಿಯಲ್ಲಿರುವ ನಿರೀಕ್ಷೆ ಇರುವುದರಿಂದ ಹಾಗೂ ನಾವೀಗ ಅಸಾಧಾರಣ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದನ್ನು ನಿರ್ವಹಿಸಲು ಹೆಚ್ಚುವರಿ ಸಾಮಾನ್ಯ ನೀತಿಗಳು ಬೇಕಾಗುತ್ತವೆ ಎಂಬ ವಾಸ್ತವಾಂಶವನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ವೆಚ್ಚ ಮಾಡುವುದಕ್ಕೆ ಸರ್ಕಾರ ಹಿಂಜರಿಯಬಾರದು.

ಲೇಖಕರು : ಡಾ. ಮಹೇಂದ್ರ ಬಾಬು ಕುರುವಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.