ETV Bharat / bharat

ಪ್ಯಾಂಗಾಂಗ್​​ನಲ್ಲಿ ಸೇನೆ ಹಿಂತೆಗೆತ ಪೂರ್ಣ: ಚೀನಿ ಹುತಾತ್ಮ ಸೈನಿಕರ ಮಾಹಿತಿ ಬಹಿರಂಗ - Pangong lake disengagement

ಚೀನಾ ಮತ್ತು ಭಾರತದ ನಡುವೆ ಮುಂದಿನ ಮಾತುಕತೆಗಳ ನಂತರ ಹಾಟ್​ಸ್ಪ್ರಿಂಗ್ಸ್​, ಗೋಗ್ರಾ, ದೆಪ್ಸಾಂಗ್ ಪ್ರದೇಶಗಳಲ್ಲಿಯೂ ಕೂಡಾ ಸೇನೆ ಹಿಂತೆಗೆತ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.

India, China to 'take stock' in Moldo as PLA discloses Galwan dead
ಭಾರತ, ಚೀನಾ ಮಾತುಕತೆ
author img

By

Published : Feb 19, 2021, 11:40 PM IST

ನವದೆಹಲಿ: ಪೂರ್ವ ಲಡಾಖ್ ಪ್ಯಾಂಗಾಂಗ್ ಸರೋವರದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ನಿಯೋಜನೆಯಾಗಿದ್ದ ಚೀನಾ ಮತ್ತು ಭಾರತದ ಸೇನೆಯ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಭಯ ರಾಷ್ಟ್ರಗಳ ನಡುವಿನ 10ನೇ ಸುತ್ತಿನ ಮಾತುಕತೆ ಶನಿವಾರ ನಡೆಯಲಿದೆ.

ಶನಿವಾರ ಬೆಳಗ್ಗೆ 10 ಗಂಟೆಗೆ ಮೋಲ್ಡೋದಲ್ಲಿ ಮಾತುಕತೆ ನಡೆಯಲಿದ್ದು, ಮೊದಲ ಮಾತುಕತೆಿಗಿಂತ ತುಂಬಾ ಕಡಿಮೆ ಸಮಯದಲ್ಲಿ ಮುಗಿಯುವ ಸಾಧ್ಯತೆಯಿದೆ ಎಂದು ಈಟಿವಿ ಭಾರತ್​ಕ್ಕೆ ಸೇನಾಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಪ್ರೀತಿ ಒಪ್ಪದಿದ್ದಕ್ಕೆ ಕುಡಿಯೋ ನೀರಲ್ಲಿ ಕೀಟನಾಶಕ ಬೆರೆಸಿ ದಲಿತ ಬಾಲಕಿಯರ ಕೊಲೆ: ಆರೋಪಿಗಳ ಸೆರೆ

ಮುಂದಿನ ಮಾತುಕತೆಗಳ ನಂತರ ಹಾಟ್​ಸ್ಪ್ರಿಂಗ್ಸ್​, ಗೋಗ್ರಾ, ದೆಪ್ಸಾಂಗ್ ಪ್ರದೇಶಗಳಲ್ಲಿಯೂ ಕೂಡಾ ಸೇನೆ ಹಿಂತೆಗೆತ ಪ್ರಕ್ರಿಯೆಯನ್ನು ಎರಡೂ ರಾಷ್ಟ್ರಗಳು ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಆಶಯವನ್ನು ಉಭಯ ರಾಷ್ಟ್ರಗಳು ಹೊಂದಿವೆ.

ಈಗ ಪ್ಯಾಂಗಾಂಗ್ ಸರೋವರದ ಬಳಿಯಿದ್ದ ಎರಡೂ ರಾಷ್ಟ್ರಗಳಿಗೆ ಸೇರಿದ ಸೇನೆ, ಟ್ಯಾಂಕರ್​ಗಳು, ಶಸ್ತ್ರಾಸ್ತ್ರಗಳನ್ನು ವಾಪಸ್​​ ತೆಗೆದುಕೊಳ್ಳಲಾಗಿದೆ. ಸೇನಾ ವಾಸ್ತವ್ಯವಿದ್ದ ಟೆಂಟ್​ಗಳನ್ನು ಕೂಡಾ ತೆರವುಗೊಳಿಸಲಾಗಿದೆ.

ಮತ್ತೊಂದೆಡೆ ಜೂನ್ 15, 2020ರಲ್ಲಿ ನಡೆದ ಗಾಲ್ವಾನ್ ಸಂಘರ್ಷದಲ್ಲಿ ಮೃತಪಟ್ಟ ಚೀನಾದ ನಾಲ್ವರು ಯೋಧರ ಹೆಸರು, ಪೂರ್ಣ ಮಾಹಿತಿಯನ್ನು ಚೀನಾ ಸರ್ಕಾರ ಮೊದಲ ಬಾರಿಗೆ ಬಹಿರಂಗಪಡಿಸಿದ್ದು, ಮೃತಪಟ್ಟವರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಲು ಚೀನಾ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.