ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ಅವರು ಬುಧವಾರ ಲೋಕಸಭೆಯಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನು ಮಸೂದೆಗಳ ಬಗ್ಗೆ ಮಾಹಿತಿ ನೀಡಿದರು. ದೇಶದ್ರೋಹ ಕಾಯ್ದೆಯನ್ನು ರದ್ದುಗೊಳಿಸಿದರು. ಅಪ್ರಾಪ್ತ ವಯಸ್ಕರ ಅತ್ಯಾಚಾರ ಮತ್ತು ಗುಂಪು ಹತ್ಯೆಗೆ ಮರಣದಂಡನೆಯನ್ನು ಘೋಷಿಸುವಂತಹ ಕಾನೂನುಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದರು. ಈ ವೇಳೆ ಸಲಹೆಗಳನ್ನು ಕೇಳಿದರು. ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು, ಮತ್ತೊಮ್ಮೆ ಬಲವಂತ್ ಸಿಂಗ್ ರಾಜೋನಾ ಅವರ ಕ್ಷಮಾದಾನ ಅರ್ಜಿ ಬಗ್ಗೆ ಪ್ರಸ್ತಾಪಿಸಿದರು, ಅದಕ್ಕೆ ಅಮಿತ್ ಶಾ ಕೂಡ ಉತ್ತರ ನೀಡಿದರು.
ಹರ್ಸಿಮ್ರತ್ ಬಾದಲ್ ಒತ್ತಾಯ: ಹರ್ಸಿಮ್ರತ್ ಬಾದಲ್ ಅವರು, ''ಲೋಕಸಭೆಯಲ್ಲಿ ಇಂದಿರಾ ಗಾಂಧಿ ಮತ್ತು ಬಿಯಾಂತ್ ಸಿಂಗ್ ಅವರ ದೌರ್ಜನ್ಯದಿಂದ ಬೇಸತ್ತು, ಪಂಜಾಬ್‌ನ ಅನೇಕ ಸಿಖ್ ಯುವಕರು ಅವರಿಬ್ಬರನ್ನೂ ಕೊಲ್ಲಲು ತಂತ್ರ ರೂಪಿಸಿದರು. ನಂತರ, ಇಡೀ ಸರ್ಕಾರವು ಸಿಖ್ ಸಮುದಾಯದ ವಿರುದ್ಧವಾಗಿತ್ತು. ಇದೇ ವೇಳೆ, ದೇಶಕ್ಕಾಗಿ ಸದಾ ತ್ಯಾಗ ಮಾಡುವ ಸಿಖ್ಖರನ್ನು ಗುರಿಯಾಗಿಸಿ ಹಲವು ಅಮಾಯಕರನ್ನು ಜೈಲಿಗೆ ಹಾಕಲಾಯಿತು. 1984ರಲ್ಲಿ ಸಿಖ್ಖರ ಮೇಲೆ ಅಮಾನುಷವಾಗಿ ದಾಳಿ ನಡೆಸಲಾಗಿತ್ತು ಎಂಬುದನ್ನು ಸ್ವತಃ ದೇಶದ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ. ಆದರೆ, ಇಂದು ಅವರು ತಮ್ಮ ಇಡೀ ಜೀವನವನ್ನು ಜೈಲಿನಲ್ಲಿ ಕಳೆದಿದ್ದಾರೆ. ಬಂಧಿತ ಸಿಂಗ್‌ಗಳ ಬಿಡುಗಡೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.
ಹರ್ಸಿಮ್ರತ್ ಕೌರ್ ಬಾದಲ್ ಡೇರಾ ಮುಖ್ಯಸ್ಥ ರಾಮ್ ರಹೀಮ್ ಬಗ್ಗೆ ಪರೋಕ್ಷವಾಗಿ ಮಾತನಾಡಿ, ದೌರ್ಜನ್ಯ ಎಸಗಿದವರಿಗೆ ಸುಲಭವಾಗಿ ಪೆರೋಲ್ ಸಿಗುತ್ತಿದೆ. ಆದರೆ, ದಬ್ಬಾಳಿಕೆಯ ಕತ್ತಲೆಯಲ್ಲಿ ಶಸ್ತ್ರಾಸ್ತ್ರ ಹಿಡಿದವರು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದರೂ ಜೈಲಿನಲ್ಲಿದ್ದಾರೆ.
ಅಪರಾಧಕ್ಕೆ ಪಶ್ಚಾತಾಪವಿಲ್ಲದಿದ್ದರೆ ಕರುಣೆಗೆ ಹಕ್ಕಿಲ್ಲ- ಅಮಿತ್ ಶಾ: ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ''ಹರ್ಸಿಮ್ರತ್ ಬಾದಲ್ ಅವರು ಮೂರನೇ ವ್ಯಕ್ತಿಗೆ ಕ್ಷಮಾದಾನ ಅರ್ಜಿಯ ಹಕ್ಕು ನೀಡಬೇಕೆಂದು ಹೇಳುತ್ತಾರೆ. ಆದರೆ, ತನ್ನ ಅಪರಾಧದ ಬಗ್ಗೆ ಪಶ್ಚಾತ್ತಾಪವಿಲ್ಲದವನಿಗೆ ಕರುಣೆಯ ಹಕ್ಕಿಲ್ಲ. ಒಬ್ಬ ವ್ಯಕ್ತಿಯು ಭಯೋತ್ಪಾದಕ ಅಪರಾಧವನ್ನು ಮಾಡಿ ಜೈಲಿಗೆ ಹೋಗುತ್ತಾನೆ. ಆದರೆ, ತಾನು ಯಾವ ತಪ್ಪು ಮಾಡಿದ್ದೇನೆ ಅಥವಾ ಯಾವ ಅಪರಾಧ ಮಾಡಿದ್ದೇನೆ ಎಂಬುದರ ಬಗ್ಗೆ ಪರಿಶೀಲಿಸಿ, ಆ ಆರೋಪಿಗೆ ಕರುಣೆ ತೋರಿಸೋಣ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ; ಬಾಗಲಕೋಟೆಯಲ್ಲಿ ಟೆಕ್ಕಿ ಪೊಲೀಸ್ ವಶಕ್ಕೆ