ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಐಐಟಿ ಕಾನ್ಪುರದ ಇನ್ಕ್ಯುಬೇಟೆಡ್ ಕಂಪನಿಯು ಕೋಳಿ ಗರಿಗಳಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ಬೌಲ್ ಅನ್ನು ತಯಾರಿಸಿ ಗಮನ ಸೆಳೆದಿದೆ. ಏಕ ಬಳಕೆಯ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಇದನ್ನು ತಯಾರಿಸಲಾಗಿದೆ ಎಂದು ಕಂಪನಿಯ ಸಂಸ್ಥಾಪಕ ಸಾರ್ಧಕ್ ಗುಪ್ತಾ ತಿಳಿಸಿದ್ದಾರೆ. ಈ ಉತ್ಪನ್ನವು ಪೇಟೆಂಟ್ ಹಕ್ಕುಗಳನ್ನು ಕೂಡ ಪಡೆದುಕೊಂಡಿರುವುದು ಗಮನಾರ್ಹ.
![IIT Kanpur's company prepared environment friendly product by extracting keratin from chicken feathers, Know specialty](https://etvbharatimages.akamaized.net/etvbharat/prod-images/23-12-2023/20340862_.jpg)
'ಮೊದಲು ಕೋಳಿ ಗರಿಗಳನ್ನು ಶೇಖರಣೆ ಮಾಡಿ ಅದರಿಂದ ಕೆರಾಟಿನ್ ಎಂಬ ಕಾಂಪೋಸ್ಟ್ ತಯಾರಿಸುತ್ತಾರೆ. ಹಾಗೆ ಮಾಡಿದ ವಸ್ತುವಿನಿಂದ ಈ ರೌಂಡ್ ಬೌಲ್ ತಯಾರಿಸಿದ್ದೇವೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಐಐಟಿಗಳ ತಜ್ಞರೊಂದಿಗೆ ಮಾತನಾಡಿದ ನಂತರವೇ ನಾವು ಇದನ್ನು ತಯಾರಿಸಿದ್ದೇವೆ. ಅದಕ್ಕೆ ಪೇಟೆಂಟ್ ಹಕ್ಕು ಕೂಡ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇವುಗಳ ತಯಾರಿಕೆಗೆ ವಿಶೇಷ ಘಟಕ ಸ್ಥಾಪಿಸಲಿದ್ದೇವೆ. 2024ರ ಜೂನ್ ತಿಂಗಳಿನಲ್ಲಿ ಅದನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ. ಹೆಚ್ಚು ಗೊಬ್ಬರವಾಗುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲು ಅವಕಾಶವಿರುತ್ತದೆ' ಎಂದು ಸಾರ್ಧಕ್ ಗುಪ್ತಾ ಮಾಹಿತಿ ನೀಡಿದರು.
'ಏಕ ಬಳಕೆಯ ಪ್ಲಾಸ್ಟಿಕ್ಗೆ ಪರ್ಯಾಯ ಯಾವುದು ಎಂಬುದರ ಬಗ್ಗೆ ನಾನು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಈ ನಿಟ್ಟಿನಲ್ಲಿ ಐಐಟಿ ಕಾನ್ಪುರದ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿದೆ. ಅದರಂತೆ, ಕೋಳಿ ಗರಿಗಳಲ್ಲಿ ಕೆರಾಟಿನ್ ಪ್ರೋಟಿನ್ ವಸ್ತುವಾಗಿದೆ ಎಂದು ಅವರು ಕಂಡುಕೊಂಡರು. ಈ ಮೂಲಕ ಪರಿಸರ ಸ್ನೇಹಿ ಪ್ಲಾಸ್ಟಿಕ್ ಬೌಲ್ ಮಾಡುವ ಪ್ರಸ್ತಾವನೆ ಸಲ್ಲಿಸಲಾಯಿತು. ಹಾಗಾಗಿ ತಡಮಾಡದೇ ಆಧುನಿಕ ಯಂತ್ರಗಳ ಸಹಾಯದಿಂದ ಕೆಲಸ ಪ್ರಾರಂಭಿಸಿದೆವು. ಮೊದಲ ಪ್ರಯತ್ನದಲ್ಲಿ ಉತ್ತಮವಾದ ಪ್ಲಾಸ್ಟಿಕ್ ಬೌಲ್ (ಉತ್ಪನ್ನ) ತಯಾರಿಸಲಾಯಿತು. ನಾವು ಅದರ ಪೇಟೆಂಟ್ ಹಕ್ಕುಗಳನ್ನು ಕೂಡ ಪಡೆದುಕೊಂಡಿದ್ದೇವೆ' ಎಂದು ತಿಳಿಸಿದರು.
'ಸರ್ಕಾರವು ದೀರ್ಘಕಾಲದಿಂದ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಇದುವರೆಗೆ ಉತ್ತಮ ಪರ್ಯಾಯ ಅಥವಾ ಪರಿಹಾರ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಕ್ರಮ ಕೈಗೊಂಡಿದ್ದು, ಏಕ ಬಳಕೆಯ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಕೋಳಿ ಗರಿಗಳಿಂದ ಗೊಬ್ಬರವಾಗುವ ಪ್ಲಾಸ್ಟಿಕ್ ಬೌಲ್ ತಯಾರಿಸಿದೆ' ಎಂದು ವಿವರಿಸಿದರು.
'ಈರುಳ್ಳಿ ಸೇರಿದಂತೆ ಇತರ ಹಣ್ಣು, ತರಕಾರಿಗಳ ತ್ಯಾಜ್ಯವನ್ನು ಗೊಬ್ಬರವಾಗಿ ಹೇಗೆ ಬಳಸಬಹುದೋ ಅದೇ ರೀತಿ ಕೋಳಿ ಗರಿಗಳಿಂದ ಮಾಡಿದ ಬೌಲ್ಗಳನ್ನು ಬಳಕೆಯ ನಂತರ ಗೊಬ್ಬರವಾಗಿ ಬಳಸಬಹುದು. ಇದು ಪರಿಸರ ಸ್ನೇಹಿಯಾಗಿದೆ. ಯಾವುದೇ ಕಂಪನಿಯು ಈ ಮಿಶ್ರಗೊಬ್ಬರ ಪ್ಲಾಸ್ಟಿಕ್ ಅನ್ನು ಉತ್ಪನ್ನಗಳಂತೆ ಮಾಡಲು ಬಯಸಿದರೆ ಅವರು ತಮ್ಮ ತಂತ್ರಜ್ಞಾನವನ್ನು ನಿಯಮಗಳ ಪ್ರಕಾರ ಬಳಸಬಹುದು' ಎಂದು ಹೇಳಿದರು.