ETV Bharat / bharat

ICMR ನಿಂದ ನಾಲ್ಕನೇ ರಾಷ್ಟ್ರವ್ಯಾಪಿ ಸಿರೊ ಸಮೀಕ್ಷೆ ಪ್ರಾರಂಭ: ಇದರ ಪ್ರಯೋಜನವೇನು?

ಭಾರತದಲ್ಲಿನ ಕೊರೊನಾ ಸನ್ನಿವೇಶವು ಕ್ಷೀಣಿಸುತ್ತಿರುವ ಪ್ರವೃತ್ತಿಗೆ ಸಾಕ್ಷಿಯಾಗುತ್ತಿದ್ದಂತೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತನ್ನ ಮುಂದಿನ ಸಿರೊ ಸಮೀಕ್ಷೆಯನ್ನು ಈ ತಿಂಗಳು ಪ್ರಾರಂಭಿಸಲಿದೆ.

icmr-to-start-fourth-nationwide-sero-survey-this-month

author img

By

Published : Jun 11, 2021, 9:17 PM IST

Updated : Jun 11, 2021, 9:24 PM IST

ನವದೆಹಲಿ: ಭಾರತದಲ್ಲಿ ಕೋವಿಡ್ ಸನ್ನಿವೇಶವು ಕ್ಷೀಣಿಸುತ್ತಿರುವ ಪ್ರವೃತ್ತಿಗೆ ಸಾಕ್ಷಿಯಾಗುತ್ತಿದ್ದಂತೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತನ್ನ ಮುಂದಿನ ಸಿರೊ ಸಮೀಕ್ಷೆಯನ್ನು ಈ ತಿಂಗಳು ಪ್ರಾರಂಭಿಸಲಿದೆ.

ಸಿರೊ ಸಮೀಕ್ಷೆಯು ಎಲ್ಲ ವಯಸ್ಸಿನ ಜನರಲ್ಲಿ ಸಿರೊ ಹರಡುವಿಕೆ ಖಚಿತಪಡಿಸುತ್ತದೆ. ಹಾಗೆ ಸಿರೊ ಸಮೀಕ್ಷೆಯ ಮೂಲಕ, ನಾವು ಹಾಟ್‌ಸ್ಪಾಟ್‌ಗಳನ್ನು ಗುರುತಿಸಬಹುದು. ಹಾಗೆ ನಾವು ಎಲ್ಲ ರಾಜ್ಯ ಸರ್ಕಾರಗಳಿಗೆ ಸಿರೊ ಸಮೀಕ್ಷೆಗಳನ್ನು ಪ್ರಾರಂಭಿಸಲು ಸಲಹೆ ನೀಡುತ್ತೇವೆ. ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈ ಕೆಲಸ ಮಾಡಬೇಕಿದೆ ಎಂದು ಕೋವಿಡ್ -19 ರಾಷ್ಟ್ರೀಯ ಕಾರ್ಯಪಡೆ ಅಧ್ಯಕ್ಷ ಡಾ.ವಿ.ಕೆ. ಪಾಲ್​ ಹೇಳಿದ್ದಾರೆ.

ನಿರ್ಧಿಷ್ಟ ಭೌಗೋಳಿಕ ಪ್ರದೇಶದಲ್ಲಿ ಪುನರಾವರ್ತಿತ ಅಡ್ಡ-ವಿಭಾಗದ ಸಿರೊ ಸಮೀಕ್ಷೆಗಳು ವಿಕಾಸಗೊಳ್ಳುತ್ತಿರುವ ಸಾಂಕ್ರಾಮಿಕ ರೋಗದ ಅಲೆಯನ್ನು ತಿಳಿಸುತ್ತವೆ. ಹಾಗೆ ರಾಷ್ಟ್ರೀಯ ಸಿರೊ ಸಮೀಕ್ಷೆಯು ಭಾರತದ ಸಾಮಾನ್ಯ ಜನರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ SARS-CoV-2 ಸೋಂಕಿನ ಸಿರೊಪ್ರೆವೆಲೆನ್ಸ್ ಅನ್ನು ಅಂದಾಜಿಸಿದೆ.

ಐಸಿಎಂಆರ್ 2020 ರ ಡಿಸೆಂಬರ್ 18 ಮತ್ತು ಜನವರಿ 6, 2021 ರ ನಡುವೆ ಮೂರನೇ ಸಿರೊ ಸರ್ವೇ ನಡೆಸಿದೆ, ಭಾರತದ 21 ರಾಜ್ಯಗಳ 70 ಜಿಲ್ಲೆಗಳ 700 ಗ್ರಾಮಗಳಲ್ಲಿ ಈ ಸರ್ವೆ ಮಾಡಲಾಗಿದ್ದು, ಈ ಮೊದಲ ಮತ್ತು ಎರಡನೆಯ ಸರ್ವೆ ಕೂಡ ಇಲ್ಲೇ ಮಾಡಲಾಗಿತ್ತು.

ಮೂರನೇ ಸಿರೊ ಸಮೀಕ್ಷೆಯಿಂದ ತಿಳಿದು ಬಂದಿರುವುದು ಏನೆಂದರೆ, 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ ಸುಮಾರು 24 ಶೇಕಡಾ ಮತ್ತು ಉಪ - ಜಿಲ್ಲಾ ಮಟ್ಟದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಕೆಲಸ ಮಾಡುವ ಶೇಕಡಾ 26 ರಷ್ಟು ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯೂ) SARS-CoV-2 ಸೋಂಕಿಗೆ ಒಳಗಾಗಿದ್ದಾರೆ ಎಂದು ಸೂಚಿಸುತ್ತದೆ. ಡಿಸೆಂಬರ್ 2020 ರ ಹೊತ್ತಿಗೆ 18-44 ವರ್ಷ ವಯಸ್ಸಿನ ವಯಸ್ಕರಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ SARS-CoV-2 ಸೋಂಕಿನ ಹರಡುವಿಕೆ ಕಡಿಮೆ ಇತ್ತು ಎಂದು ತಿಳಿದು ಬಂದಿದೆ.

ಭಾರತದ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಶೇಕಡಾ 5 ಕ್ಕೆ ಇಳಿದಿದೆ. ಪರಿಸ್ಥಿತಿ ಸ್ಥಿರವಾಗುತ್ತಿದೆ, ಆದರೂ ನಾವು ತೀವ್ರ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು ಎಂದು ಡಾ. ಪಾಲ್ ಹೇಳಿದ್ದಾರೆ.

ಭಾರತದ ಕೋವಿಡ್​ನ ಸಂಭವನೀಯ ಮೂರನೇ ತರಂಗವನ್ನು ಉಲ್ಲೇಖಿಸಿ, ನಮ್ಮ ವಿಜ್ಞಾನಿಗಳು ವಿವಿಧ ರೂಪಾಂತರಿತ ಅಲೆಯನ್ನು ನೋಡಿಕೊಳ್ಳಬೇಕು. ಹಾಗೆ ನಮ್ಮ ವಿಜ್ಞಾನಿಗಳು ಕೊರೊನಾ ಅಲೆಗಳನ್ನು ನಿರಂತರವಾಗಿ ಅಧ್ಯಯನ ಮಾಡಬೇಕಾಗಿದೆ ಎಂದಿದ್ದಾರೆ.

ಭಾರತೀಯ ಸಾರ್ವಜನಿಕ ಆರೋಗ್ಯ ಸಂಘ (ಐಪಿಎಚ್‌ಎ), ಇಂಡಿಯನ್ ಅಸೋಸಿಯೇಷನ್ ​​ಆಫ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್ (ಐಎಪಿಎಸ್ಎಂ) ಮತ್ತು ಇಂಡಿಯನ್ ಅಸೋಸಿಯೇಷನ್ ​​ಆಫ್ ಎಪಿಡೆಮಿಯಾಲಜಿಸ್ಟ್ಸ್ (ಐಎಇ) ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿದ ಡಾ. ಪಾಲ್, ತಜ್ಞರ ಗುಂಪು ಗಮನಿಸುತ್ತಿದೆ. ಅವರ ಶಿಫಾರಸುಗಳು ಸ್ವಾಗತಾರ್ಹ. ನಮ್ಮ ತಜ್ಞರ ಸಮಿತಿಯು ಅವರ ಶಿಫಾರಸವನ್ನು ಪರಿಶೀಲಿಸುತ್ತಿದೆ ಮತ್ತು ಸರಿಯಾದ ಪರೀಕ್ಷೆಯ ನಂತರ ಸೂಕ್ತ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದಿದ್ದಾರೆ.

ಸಾರ್ವಜನಿಕ ಆರೋಗ್ಯ ತಜ್ಞರು ಇತ್ತೀಚೆಗೆ ತಮ್ಮ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿದ್ದು, ಮಕ್ಕಳನ್ನು ಒಳಗೊಂಡಂತೆ ದುರ್ಬಲರಿಗೆ ಮತ್ತು ಅಪಾಯದಲ್ಲಿರುವವರಿಗೆ ಲಸಿಕೆ ಹಾಕುವಂತೆ ಸೂಚಿಸಿದ್ದಾರೆ. ಕೋವಿಶೀಲ್ಡ್​ನ ಎರಡು ಡೋಸ್​ನ ನಡುವಿನ ಅಂತರವನ್ನು ಕಡಿಮೆ ಮಾಡುವ ಅಗತ್ಯವನ್ನು ತಜ್ಞರ ಸಮಿತಿಯು ಪರಿಶೀಲಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊವಾಕ್ಸಿನ್‌ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಲು ಯುಎಸ್‌ಎಫ್‌ಡಿಎ ನಿರಾಕರಿಸಿದ ವರದಿಗಳನ್ನು ಉಲ್ಲೇಖಿಸಿದ ಡಾ. ಪಾಲ್, ಇದು ಭಾರತದಲ್ಲಿ ಲಸಿಕೆಯ ಭವಿಷ್ಯಕ್ಕೆ ಅಡ್ಡಿಯಾಗುವುದಿಲ್ಲ. ತಯಾರಕರೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರು ಶೀಘ್ರದಲ್ಲೇ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಡೇಟಾದೊಂದಿಗೆ ನಮ್ಮೆದುರಿಗೆ ಬರುತ್ತಾರೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಲಸಿಕೆಗಳ ಲಭ್ಯತೆಯನ್ನು ಉಲ್ಲೇಖಿಸಿದ ಅವರು,ಶೀಘ್ರದಲ್ಲೇ ಹೆಚ್ಚಿನ ಲಸಿಕೆಗಳು ಮಾರುಕಟ್ಟೆಗೆ ಬರಲಿವೆ ಹಾಗೆ ಮುಂದಿನ ದಿನಗಳಲ್ಲಿ ಹೆಚ್ಚು ವಿಭಿನ್ನ ಲಸಿಕೆಗಳು ಬರಲಿವೆ ಎಂದು ಸ್ಪಷ್ಟಪಡಿಸಿದರು.

Last Updated : Jun 11, 2021, 9:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.