ETV Bharat / bharat

IAF chopper crash: ರಷ್ಯಾ ನಿರ್ಮಿತ Mi-17V5 ಹೆಲಿಕಾಪ್ಟರ್​ ಬಗ್ಗೆ ನಿಮಗೆಷ್ಟು ಗೊತ್ತು? - Mi-17V5 ಹೆಲಿಕಾಪ್ಟರ್​

ವಿಶ್ವದ ಅತ್ಯಂತ ಸುಧಾರಿತ ಹೆಲಿಕಾಪ್ಟರ್​​ಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ Mi-17V5 ಮಿಲಿಟರಿ ಕಾಪ್ಟರ್​ ತಮಿಳುನಾಡಿನ ಕನೂರಿನಲ್ಲಿ ಪತನಗೊಂಡಿದೆ. ಈ ಸೇನಾ ಹೆಲಿಕಾಪ್ಟರ್​ ಏನೆಲ್ಲ ವಿಶೇಷತೆ ಹೊಂದಿದೆ ಎಂಬುದರ ಮಾಹಿತಿ ಇಲ್ಲಿದೆ.

IAF chopper crash
IAF chopper crash
author img

By

Published : Dec 8, 2021, 5:03 PM IST

ಹೈದರಾಬಾದ್​​: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್​​ ರಾವತ್​​ ಹಾಗೂ ಅವರ ಕುಟುಂಬದ ಸದಸ್ಯರು ಸೇರಿದಂತೆ ಅನೇಕರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ Mi-17V5 ತಮಿಳುನಾಡಿನ ಕನೂರಿನಲ್ಲಿ ಪತನಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಿಪಿನ್​ ರಾವತ್​​ ಸೇರಿದಂತೆ ಅನೇಕರನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಲಿಕಾಪ್ಟರ್​​ ಪತನಗೊಳ್ಳುತ್ತಿದ್ದಂತೆ ರಷ್ಯಾ ನಿರ್ಮಿತ Mi-17V5 ಕಾಪ್ಟರ್​​ ಬಗ್ಗೆ ಅನೇಕ ಸಂದೇಹಗಳು ಕೇಳಿ ಬರಲು ಶುರುವಾಗಿದ್ದು, ಇದರ ಮಧ್ಯೆ ಒಂದಿಷ್ಟು ಮಾಹಿತಿ ಇಲ್ಲಿದೆ.

Mi-17V5 ಮಧ್ಯಮ ಲಿಫ್ಟರ್​​ ಚಾಪರ್​​​​​ ಆಗಿದ್ದು, ವಿಶ್ವದ ಅತ್ಯಂತ ಸುಧಾರಿತ ಹೆಲಿಕಾಪ್ಟರ್​​ಗಳಲ್ಲಿ ಒಂದಾಗಿದೆ. ರಷ್ಯಾದ ವಿಮಾನ ತಯಾರಿಕಾ ಕಜನ್​ ಹೆಲಿಕಾಪ್ಟರ್​​​ ಸಂಸ್ಥೆ ಇದರ ಉತ್ಪಾದನೆ ಮಾಡಿದ್ದು, ಸೈನ್ಯ, ಶಸ್ತ್ರಾಸ್ತ್ರ ರವಾನೆ, ಅಗ್ನಿಶಾಮಕ ಬೆಂಬಲ, ಬೆಂಗಾವಲು, ಗಸ್ತು ಕಾರ್ಯಾಚರಣೆಗಳಲ್ಲಿ ಇದರ ಬಳಕೆ ಮಾಡಿಕೊಳ್ಳಬಹುದಾಗಿದೆ.

ಭಾರತೀಯ ವಾಯುಪಡೆಯಲ್ಲಿ ಈ ಚಾಪರ್​​​ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶದಿಂದ 2008ರಲ್ಲಿ ರಷ್ಯಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ 80 ಹೆಲಿಕಾಪ್ಟರ್​​ಗಳ ನಿರ್ಮಾಣಕ್ಕಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಪ್ರಕಾರ 2011ರಲ್ಲಿ ಭಾರತಕ್ಕೆ ಮೊದಲ ಚಾಪರ್​​ ಆಗಮಿಸಿತ್ತು. 2018ರ ವೇಳೆಗೆ ಎಲ್ಲ ಚಾಪರ್​​ಗಳು ಭಾರತದ ಸೇನಾ ಬತ್ತಳಿಕೆ ಸೇರಿಕೊಂಡಿವೆ.

ಇದನ್ನೂ ಓದಿರಿ: ಸೇನಾ ಕಾಪ್ಟರ್​ ಪತನ : ಹಿರಿಯ ಅಧಿಕಾರಿಗಳೊಂದಿಗೆ ರಾಜನಾಥ್​ ಸಿಂಗ್​ ಚರ್ಚೆ,ನಾಳೆ ಸಂಸತ್​​ಗೆ ಮಾಹಿತಿ ಸಾಧ್ಯತೆ

ಈ ವಿಮಾನ 13,000kg ಟೇಕಾಫ್​​ ತೂಕವಿದ್ದು, 36 ಶಸ್ತ್ರಸಜ್ಜಿತ ಯೋಧರು ಅಥವಾ 4,500kg ಭಾರ ಹೊತ್ತು ಪ್ರತಿ ಗಂಟೆಗೆ 250 ರಿಂದ 580km ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಸಹಾಯಕ ಇಂಧನ ಟ್ಯಾಂಕ್​​​ಗಳ ಅವಳವಡಿಕೆ ಮಾಡಿದಾಗ 1,065km. ವೇಗದವರೆಗೆ ವಿಸ್ತರಣೆ ಮಾಡಬಹುದಾಗಿದೆ. ವಿಶೇಷವೆಂದರೆ ಗರಿಷ್ಠ 6 ಸಾವಿರ ಕಿಲೋ ಮೀ. ವೇಗಕ್ಕೂ ಇದರ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ.ಇನ್ನು ಹಮಾಮಾನ ವೈಪರಿತ್ಯ ಉಂಟಾದಾಗ, ಮರಭೂಮಿ ಪ್ರದೇಶ ಹಾಗೂ ಉಷ್ಣವಲಯಗಳಲ್ಲಿ ಇದರ ಬಳಕೆ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.