ETV Bharat / bharat

12 ವರ್ಷದ ಬಾಲಕಿಯಿಂದ ಲೈಬ್ರರಿ ಸ್ಥಾಪನೆ: 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೆಚ್ಚುಗೆ... ಮೋದಿ ಭೇಟಿಗೆ ಪಿಎಂಒನಿಂದ ಆಹ್ವಾನ

ಸೆ. 24ರಂದು ಪ್ರಸಾರವಾದ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದ್ದರು. ಅದರಲ್ಲಿ ನಗರದಾದ್ಯಂತ ಸ್ವತಂತ್ರವಾಗಿ ಗ್ರಂಥಾಲಯಗಳನ್ನು ಸ್ಥಾಪಿಸುವ ಹೈದರಾಬಾದ್ ವಿದ್ಯಾರ್ಥಿನಿಯ ಕಾರ್ಯವನ್ನು ಶ್ಲಾಘಿಸಿದ್ದರು. ಈ ವಿದ್ಯಾರ್ಥಿನಿಯ ಜೊತೆ ನಮ್ಮ ಪ್ರತಿನಿಧಿ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

Hyderabad student Akarshana
ಆಕರ್ಷಣಾ
author img

By ETV Bharat Karnataka Team

Published : Sep 29, 2023, 10:37 AM IST

Updated : Sep 29, 2023, 10:42 AM IST

ಹೈದರಾಬಾದ್(ತೆಲಂಗಾಣ): ಹೈದರಾಬಾದ್ ವಿದ್ಯಾರ್ಥಿನಿಯೋರ್ವಳು 6 ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ವಿವಿಧ ಆಸ್ಪತ್ರೆಗಳಲ್ಲಿ ಏಳು ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ. ಇತ್ತೀಚೆಗೆ, ಹೈದರಾಬಾದ್‌ನ ಎಂಎನ್‌ಜೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲಾಗಿದೆ. 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಾಲಕಿಯ ಕಾರ್ಯವನ್ನು ಪ್ರಸ್ತಾಪಿಸಿ ಅಭಿನಂದಿಸಿದ್ದಾರೆ. ಶೀಘ್ರದಲ್ಲೇ ಬಾಲಕಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿನಿಯೊಂದಿಗೆ 'ಈಟಿವಿ ಭಾರತ' ಪ್ರತಿನಿಧಿ ವಿಶೇಷ ಸಂದರ್ಶನ ನಡೆಸಿದ್ದಾರೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ.

ಬಾಲಕಿಯ ಹೆಸರು ಆಕರ್ಷಣಾ(12)​. ಹೈದರಾಬಾದ್​ನ ನಿವಾಸಿ. ಬೇಗಂಪೇಟೆಯ ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಗರದಾದ್ಯಂತ ಸ್ವತಂತ್ರವಾಗಿ ಗ್ರಂಥಾಲಯಗಳನ್ನು ಸ್ಥಾಪಿಸುವ ಮಹತ್ತರ ಗುರಿ ಹೊಂದಿದ್ದಾಳೆ. ಬಾಲಕಿಯ ಈ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಸೆ.24 ರಂದು ಪ್ರಸಾರವಾದ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಶ್ಲಾಘಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಕರ್ಷಣಾ 'ಇದು ತನ್ನ ಕನಸು ನನಸಾಗುವ ಕ್ಷಣವಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಪಿಎಂಒನಿಂದ ಪ್ರಧಾನಿ ಭೇಟಿಗೆ ಆಹ್ವಾನ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,"ಪ್ರಧಾನಿ ಭೇಟಿಗೆ ದಿನಾಂಕದ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೆ ಅದು ಅಕ್ಟೋಬರ್ ಮೊದಲ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಭೇಟಿ ಮಾಡುವ ಸಾಧ್ಯತೆಯಿದೆ" ಎಂದರು. ಸೆ.22ರಂದು ರಾತ್ರಿ 11.30ರ ಸುಮಾರಿಗೆ, ನನ್ನ ತಂದೆಗೆ ಪಿಎಂಒ ಕಚೇರಿಯಿಂದ ಕರೆ ಬಂತು. ಸೆ.23 ರಂದು ದೂರದರ್ಶನ ವರದಿಗಾರರು ಸಂದರ್ಶನಕ್ಕಾಗಿ ನಿಮ್ಮ ಮನೆಗೆ ಬರುತ್ತಾರೆ. ಆದ್ದರಿಂದ ನಿಮ್ಮ ಮಗಳು ಸಿದ್ಧರಾಗಿರಲು ಹೇಳಿ ಎಂದು ಅವರು ತಿಳಿಸಿದ್ದರು ಎಂದರು.

ಲೈಬ್ರರಿಗಳನ್ನು ಸ್ಥಾಪಿಸುವ ಆಲೋಚನೆ ಹೇಗೆ ಬಂತು? ಎಂಬ ಪ್ರಶ್ನೆಗೆ ಉತ್ತರಿಸಿದ ಆಕರ್ಷಣಾ "ಕೋವಿಡ್​ ಸಮಯದಲ್ಲಿ ನಾನು ನನ್ನ ಪೋಷಕರೊಂದಿಗೆ ಎಂಎನ್‌ಜೆ ಕ್ಯಾನ್ಸರ್ ಮಕ್ಕಳ ಆಸ್ಪತ್ರೆಗೆ ಆಹಾರವನ್ನು ನೀಡಲು ಹೋಗಿದ್ದೆ. ಇದು 55 ದಿನಗಳ ಕಾಲ ಮುಂದುವರೆಯಿತು. ಆರಂಭದಲ್ಲಿ ಸುಮ್ಮನೆ ಹೋಗಿ ಬರುತ್ತಿದೆ. ಆದರೆ ಕೊನೆಯ 55 ದಿನ ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿದೆ. ಅಲ್ಲಿ ಕಿಮೋಥೆರಪಿಗೆ ಹೋದಾಗ ಅವರಿಗೆ ಬಣ್ಣದ ಪುಸ್ತಕಗಳು ಮತ್ತು ಇತರ ವಿಷಯಗಳ ಅಗತ್ಯವಿದೆ ಎಂದು ವೈದ್ಯರು ಹೇಳಿದರು.

ಬಳಿಕ ಪುಸ್ತಕಗಳಿಗಾಗಿ ಅಪಾರ್ಟ್‌ಮೆಂಟ್‌ನ ವಾಟ್ಸ್​ ಆ್ಯಪ್ ಗ್ರೂಪ್‌ಗೆ ಸಂದೇಶ ಹಾಕುವಂತೆ ನನ್ನ ಪೋಷಕರು ಸಲಹೆ ನೀಡಿದರು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂತು. ಮೂರು ದಿನಗಳಲ್ಲಿ 2,000 ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲಾಯಿತು. ನಂತರ ನನ್ನ ಸ್ನೇಹಿತರು ಮತ್ತು ಸಂಬಂಧಿಕರು ಸಹಾಯ ಮಾಡಿದರು. ಇದರಿಂದ ನಾನು 4,000ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ನಂತರ ನಾನು ಪುಸ್ತಕಗಳನ್ನು ವಿತರಿಸಲು ಆಸ್ಪತ್ರೆಗೆ ಹೋದೆ. ಆದರೆ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕರು ಗ್ರಂಥಾಲಯಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಅವರು ನನ್ನ ಮೊದಲ ಗ್ರಂಥಾಲಯವನ್ನು ಸ್ಥಾಪಿಸಲು ಮಕ್ಕಳ ವಾರ್ಡ್‌ನ ಬಳಿ ಜಾಗವನ್ನು ನೀಡಿದರು ಎಂದು ನೆನಪಿಸಿಕೊಂಡರು.

ಹಾಗೆಯೇ ಗ್ರಂಥಾಲಯಗಳನ್ನು ಸನತ್ ನಗರ ಪೊಲೀಸ್ ಠಾಣೆಯಲ್ಲಿ, ಹೈದರಾಬಾದ್‌ನಲ್ಲಿ ಬಾಲಕಿಯರ ವೀಕ್ಷಣಾ ಗೃಹ, ಗಾಯತ್ರಿ ನಗರ ಅಸೋಸಿಯೇಷನ್, ಕೊಯಮತ್ತೂರು ಸಿಟಿ ಪೊಲೀಸ್ ಕಮಿಷನರೇಟ್, ಚೆನ್ನೈ ಬಾಲಕರ ಕ್ಲಬ್ ಮತ್ತು ಹೈದರಾಬಾದ್‌ನ ಸನತ್‌ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದೆ.

ಬಾಲಕಿಯ ಹೆಸರಿನ ಹಿಂದಿನ ಕಾರಣವನ್ನು ಕೇಳಿದಾಗ, "ನಾನು ಜನಿಸಿದ ಏಳು ದಿನಗಳ ನಂತರ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರಂತೆ. ಅವರು ನನ್ನನ್ನು ನೋಡಿ ಹೇಳಿದ ಮೊದಲ ವಿಷಯವೆಂದರೆ "ಅವಳು ತುಂಬಾ ಆಕರ್ಷಕವಾಗಿ ಕಾಣುತ್ತಿದ್ದಾಳೆ. ಹಾಗಾಗಿ ಅವಳಿಗೆ ಆಕರ್ಷಣಾ ಎಂದು ಕರೆಯೋಣ ಎಂದಿದ್ದರಂತೆ. ಅದರಂತೆ ನನ್ನ ತಂದೆ ತಾಯಿ ನನಗೆ ಆಕರ್ಷಣಾ ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: PM Mann Ki Baat: ಮನ್​ ಕಿ ಬಾತ್​ನಲ್ಲಿ ನೈನಿತಾಲ್‌ನ ಘೋಡಾ ಲೈಬ್ರರಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ

Last Updated : Sep 29, 2023, 10:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.