ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿ ದಪ್ಪ ಆಗಿದ್ದಾರೆ ಎಂಬ ಕಾರಣಕ್ಕೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ. ಸಂತ್ರಸ್ತೆ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜಿಲ್ಲೆಯ ಲಿಸಾಡಿಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಝಾಕಿರ್ ಕಾಲೋನಿ ನಿವಾಸಿ ಆಯಿಶಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ತನ್ನ ಪತಿ ಬೊಜ್ಜಿನ ಕಾರಣ ನೀಡಿ ತನಗೆ ತಲಾಖ್ ನೀಡಿದ್ದಾನೆ. ಅಲ್ಲದೇ ತಲಾಖ್ ನೀಡುವಂತೆ ನನಗೂ ನೋಟಿಸ್ ಕಳುಹಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ನೋಟಿಸ್ ನೋಡಿದ ಮಹಿಳೆ ಪತಿಯೊಂದಿಗೆ ಮಾತನಾಡಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸದ ಪತಿ, ನೀನು ದಪ್ಪಗಾಗಿದ್ದೀಯಾ, ನಾನು ವಿಚ್ಛೇದನ ನೀಡುತ್ತಿದ್ದೇನೆ ಎಂದು ಹೇಳಿ ಕಳುಹಿಸಿದ್ದಾನೆ. ಬಳಿಕ ಮಹಿಳೆ ಲಿಸಾಡಿಗೇಟ್ ಪೊಲೀಸ್ ಠಾಣೆ ತಲುಪಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ವಿಷಯ ಇನ್ನೂ ತಮ್ಮ ಗಮನಕ್ಕೆ ಬಂದಿಲ್ಲ. ಆದರೆ, ಯಾರಾದರೂ ಈ ರೀತಿ ಸಂಬಂಧವನ್ನು ಕೊನೆಗೊಳಿಸಿದ್ದರೆ ನಾವು ತನಿಖೆ ಮಾಡುತ್ತೇವೆ ಎಂದು ಸಿಒ ಅರವಿಂದ್ ಚೌರಾಸಿಯಾ ಹೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಕೇರಳ ಪ್ರವಾಸದಲ್ಲಿ ಮೋದಿ: ನಾಳೆ ಸ್ವದೇಶಿ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ
'8 ವರ್ಷಗಳ ಹಿಂದೆ ತಾನು ಸಲ್ಮಾನ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದೆ. ನಮಗೆ 7 ವರ್ಷದ ಮಗ ಇದ್ದಾನೆ. 1 ತಿಂಗಳ ಹಿಂದೆ ಪತಿ ಸಲ್ಮಾನ್ ತನ್ನನ್ನು ಮನೆಯಿಂದ ಹೊರಹಾಕಿ ವಿಚ್ಛೇದನದ ನೋಟಿಸ್ ಕಳುಹಿಸಿದ್ದರು. ವಿಚ್ಛೇದನದ ಕಾರಣವನ್ನು ತಿಳಿಯಲು ಪ್ರಯತ್ನಿಸಿದಾಗ, ಪತಿ ಸಲ್ಮಾನ್ ನನಗೆ ದಪ್ಪವಾಗಿದ್ದೀಯಾ ಮತ್ತು ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಹೇಳಿ ಕಳುಹಿಸಿದ್ದಾರೆ. ಈ ಬಗ್ಗೆ ಮಾತನಾಡಲು ಎಷ್ಟೇ ಬಾರಿ ಪ್ರಯತ್ನಿಸಿದರೂ ಅವರು ಫೋಸ್ ರಿಸಿವ್ ಮಾಡುತ್ತಿಲ್ಲ' ಎಂದು ಆಯಿಶಾ ಆರೋಪಿಸಿದ್ದಾರೆ.