ETV Bharat / bharat

ಪತ್ನಿ ಶಾಲಿನಿಗೆ ಹನಿ ಸಿಂಗ್ ವಿಚ್ಛೇದನ: 1 ಕೋಟಿ ರೂ. ಜೀವನಾಂಶದ ಚೆಕ್ ಹಸ್ತಾಂತರ - ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್

ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಅವರಿಗೆ 1 ಕೋಟಿ ರೂ. ಜೀವನಾಂಶದ ಚೆಕ್​ ಅನ್ನು ಮುಚ್ಚಿದ ಲಕೋಟೆಯಲ್ಲಿ ​​ನೀಡಿದ್ದಾರೆ.

honey-singh-divorced-with-wife-shalini-talwar-a-settlement-of-one-crore
ಪತ್ನಿ ಶಾಲಿನಿಗೆ ಹನಿ ಸಿಂಗ್ ವಿಚ್ಛೇದನ: 1 ಕೋಟಿ ರೂ. ಜೀವನಾಂಶದ ಚೆಕ್ ಹಸ್ತಾಂತರ
author img

By

Published : Sep 9, 2022, 4:15 PM IST

ನವದೆಹಲಿ: ಪಂಜಾಬಿ ಗಾಯಕ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ವಿಚ್ಛೇದನ ಪಡೆದಿದ್ದಾರೆ. ಪತ್ನಿಗೆ ಒಂದು ಕೋಟಿ ರೂಪಾಯಿಗಳ ಜೀವನಾಂಶ ನೀಡಲು ಹನಿ ಸಿಂಗ್ ಮುಂದಾಗಿದ್ದು, ಇದರ ಚೆಕ್​ ನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದಲ್ಲಿ ಹಸ್ತಾಂತರಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು 2023ರ ಮಾರ್ಚ್ 22ಕ್ಕೆ ಮುಂದೂಡಲಾಗಿದೆ.

2014 ರಲ್ಲಿ ರಿಯಾಲಿಟಿ ಶೋ ಇಂಡಿಯಾಸ್ ರೋಸ್ಟರ್ ಶೋನಲ್ಲಿ ಮೊದಲ ಬಾರಿಗೆ ಶಾಲಿನಿ ತಲ್ವಾರ್ ಅವರನ್ನು ಹನಿ ಸಿಂಗ್ ಭೇಟಿ ಮಾಡಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೂ ತಿರುಗಿತ್ತು. ಇದಾದ ಬಳಿಕ 2011 ರಲ್ಲಿ ದೆಹಲಿಯ ಗುರುದ್ವಾರದಲ್ಲಿ ಇಬ್ಬರೂ ವಿವಾಹವಾದ್ದರು. ಇದೀಗ 11 ವರ್ಷಗಳ ನಂತರ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ದೂರವಾಗಿದ್ದಾರೆ.

ಶಾಲಿನಿ ಕಳೆದ ವರ್ಷ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹನಿ ಸಿಂಗ್​ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಮತ್ತು ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವಿದೆ ಎಂದು ಶಾಲಿನಿ ಆರೋಪಿಸಿದ್ದರು. ಅಲ್ಲದೇ, ಹನಿ ಸಿಂಗ್‌ಗೆ ವಿಚ್ಛೇದನ ಭತ್ಯೆಗಾಗಿ 10 ಕೋಟಿ ರೂ.ಗಳ ಪರಿಹಾರವನ್ನು ಶಾಲಿನಿ ಕೇಳಿದ್ದರು ಎನ್ನಲಾಗಿದೆ. ಆದರೆ, ಈಗ ಇಬ್ಬರೂ 1 ಕೋಟಿ ಪರಿಹಾರದ ಒಪ್ಪಂದಕ್ಕೆ ಬಂದಿದ್ದಾರೆ.

ಅಂತೆಯೇ, ಹನಿ ಸಿಂಗ್ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಮುಚ್ಚಿದ ಲಕೋಟೆಯಲ್ಲಿ ಶಾಲಿನಿ ತಲ್ವಾರ್ ಅವರಿಗೆ 1 ಕೋಟಿ ರೂ. ಜೀವನಾಂಶದ ಚೆಕ್​​ ನೀಡಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿ ಪಯಣದ 100 ಕೋಟಿ ಮೀರಿದ ಸಿನಿಮಾಗಳ ಪಟ್ಟಿ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.