ETV Bharat / bharat

ಹಿಂದುತ್ವ ಎಲ್ಲರನ್ನು ಒಟ್ಟುಗೂಡಿಸುತ್ತದೆ: ಮೋಹನ್ ಭಾಗವತ್ ಪ್ರತಿಪಾದನೆ - ಮೋಹನ್ ಭಾಗವತ್ ಗುಜರಾತ್​ಗೆ ಮೂರು ದಿನಗಳ ಕಾಲ ಭೇಟಿ

ನಮ್ಮಲ್ಲಿರುವ ಕೆಲವು ಅಡೆತಡೆಗಳನ್ನು ತೆಗೆದುಹಾಕುವಾಗ ಘರ್ಷಣೆಗಳು ಉಂಟಾಗುವುದು ಸಹಜ, ಆದರೆ ಹಿಂದುತ್ವವು ಯಾವುದೇ ಸಂಘರ್ಷವನ್ನು ಹುಟ್ಟುಹಾಕುವುದಿಲ್ಲ. ಈ ವಿಚಾರವನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಮೋಹನ್ ಭಾಗವತ್
ಮೋಹನ್ ಭಾಗವತ್
author img

By

Published : Sep 29, 2021, 6:59 AM IST

ಸೂರತ್( ಗುಜರಾತ್​): ಹಿಂದುತ್ವವು ಸೈದ್ಧಾಂತಿಕ ವ್ಯವಸ್ಥೆಯಾಗಿದ್ದು, ಅದು ಎಲ್ಲರನ್ನು ಒಟ್ಟುಗೂಡಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಹೇಳಿದರು.

ಗುಜರಾತ್​ಗೆ ಮೂರು ದಿನಗಳ ಕಾಲ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಅವರು, "ಹಿಂದುತ್ವವು ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ ಜೊತೆಗೆ ಎಲ್ಲರನ್ನು ಒಟ್ಟುಗೂಡಿಸುತ್ತದೆ. ಈ ಮೂಲಕ ಪ್ರತಿಯೊಬ್ಬರು ಏಳಿಗೆ ಹೊಂದಲು ಸಹಕಾರಿ'' ಎಂದು ಹೇಳಿದರು.

ನಮ್ಮಲ್ಲಿರುವ ಕೆಲವು ಅಡೆತಡೆಗಳನ್ನು ತೆಗೆದುಹಾಕುವಾಗ ಘರ್ಷಣೆಗಳು ಉಂಟಾಗುವುದು ಸಹಜ, ಆದರೆ ಹಿಂದುತ್ವವು ಯಾವುದೇ ಸಂಘರ್ಷ ಹುಟ್ಟುಹಾಕುವುದಿಲ್ಲ. ಈ ವಿಚಾರವನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು, ನಾವು ಶಕ್ತಿಯುತರಾಗಬೇಕು ಎಂದರು.

ಭೂಪೇಂದ್ರ ಪಟೇಲ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಮೋಹನ್ ಭಾಗವತ್ ಗುಜರಾತ್‌ಗೆ ಭೇಟಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.