ವಾರಾಣಸಿ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿ ಪ್ರಕರಣ ಕುರಿತಂತೆ ‘ಶಿವಲಿಂಗ’ದ ವೈಜ್ಞಾನಿಕ ತನಿಖೆ ಮತ್ತು ಅರ್ಘ ಮತ್ತು ಅದರ ಸುತ್ತಲಿನ ಪ್ರದೇಶದ ಕಾರ್ಬನ್ ಡೇಟಿಂಗ್ ನಡೆಸುವಂತೆ ಹಿಂದೂ ಸಂಘಟನೆ ಕಡೆಯವರು ಎಎಸ್‌ಐಗೆ ಒತ್ತಾಯಿಸಿದ್ದಾರೆ ಎಂದು ವಕೀಲ ವಿಷ್ಣು ಜೈನ್ ಅವರು ತಿಳಿಸಿದ್ದಾರೆ.
ಹಿಂದೂಗಳ ಪರ ವಾದ ಮಂಡಿಸುತ್ತಿರುವ ಅವರು, ಮುಸ್ಲಿಂ ಸಂಘಟನೆ ಕಡೆಯವರು ಕಾರ್ಬನ್ ಡೇಟಿಂಗ್ ಅನ್ನು ವಿರೋಧಿಸಿದ್ದಾರೆ. ಇದು ಕಾರಂಜಿಯೇ ಹೊರತು ಶಿವಲಿಂಗವಲ್ಲ ಮತ್ತು ಅದನ್ನು ಖಚಿತವಾಗಿ ಹೇಳಲಾಗುವುದಿಲ್ಲ ಎಂದು ಅವರು ಹೇಳಿದರು. ನ್ಯಾಯಾಲಯವು ತನ್ನ ತೀರ್ಪು ಕಾಯ್ದಿರಿಸಿದೆ ಮತ್ತು ಅಕ್ಟೋಬರ್ 7 ರಂದು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಜೈನ್ ಹೇಳಿದರು.
ಓದಿ: ಹೈಕೋರ್ಟ್ ಅಂಗಳಕ್ಕೆ ಜ್ಞಾನವಾಪಿ ಕೇಸ್: ಹಿಂದೂ, ಮುಸ್ಲಿಂ ಪಕ್ಷಗಾರರಿಂದ ಅರ್ಜಿ ಸಲ್ಲಿಕೆ?