ETV Bharat / bharat

ವಿಮಾನ ನಿಲ್ದಾಣದ ಬಳಿ ಇರುವ 48 ಕಟ್ಟಡ ಕೆಡವಲು ಡಿಸಿಗೆ ಸೂಚಿಸಿದ ಹೈಕೋರ್ಟ್

ಎತ್ತರ ಉಲ್ಲಂಘನೆಗಾಗಿ ನೋಟಿಸ್ ಜಾರಿ ಮಾಡಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ.

ವಿಮಾನ ನಿಲ್ದಾಣದ ಬಳಿ ಇರುವ 48 ಕಟ್ಟಡಗಳನ್ನು ಕೆಡವಲು ಡಿಸಿಗೆ ಸೂಚಿಸಿದ ಹೈಕೋರ್ಟ್

author img

By

Published : Jul 29, 2022, 7:42 PM IST

ಮುಂಬೈ : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ 48 ಬಹುಮಹಡಿ ಕಟ್ಟಡಗಳನ್ನು ಕೆಡವಲು ಮುಂಬೈ ಉಪನಗರದ ಕಲೆಕ್ಟರ್‌ಗೆ ಬಾಂಬೆ ಹೈಕೋರ್ಟ್ ಇಂದು ತನ್ನ ಆದೇಶದಲ್ಲಿ ನಿರ್ದೇಶನಗಳನ್ನು ನೀಡಿದೆ.

ಬಾಂಬೆ ಹೈಕೋರ್ಟ್ ಆದೇಶದ ಪ್ರಕಾರ ನಿರ್ದಿಷ್ಟ ಎತ್ತರದಲ್ಲಿ ನಿರ್ಮಿಸಲಾದ ಭಾಗಗಳನ್ನು ಕೆಡವಬೇಕಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಇನ್ನು ಈ ಕೆಡವುವಿಕೆಯ ಜವಾಬ್ದಾರಿಯನ್ನು ಬೃಹತ್​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ ವರ್ಗಾಯಿಸಲು ಪ್ರಯತ್ನಿಸಿದ್ದಕ್ಕಾಗಿ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಪಿಐಎಲ್​ ಸಲ್ಲಿಕೆ: ಎತ್ತರ ಉಲ್ಲಂಘನೆಗಾಗಿ ನೋಟಿಸ್ ಜಾರಿ ಮಾಡಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸುವಂತೆಯೂ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. ಮುಂಬೈ ವಿಮಾನ ನಿಲ್ದಾಣದ ಸಮೀಪವಿರುವ ಎತ್ತರದ ಕಟ್ಟಡಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ವಕೀಲ ಯಶವಂತ್ ಶೆಣೈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು.

ಮುಂಬೈ ಇಂಟರ್‌ ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (MIAL) ನಿಂದ ನಿಯತಕಾಲಿಕ ಸಮೀಕ್ಷೆಗಳನ್ನು ಕೈಗೊಂಡಿದ್ದು, 2010 ರಲ್ಲಿ ಒಟ್ಟು 137 ಕಟ್ಟಡಗಳನ್ನು ಗುರುತಿಸಲಾಗಿದೆ. ಈ 137 ಕಟ್ಟಡಗಳ ಪೈಕಿ 63 ಪ್ರಕರಣಗಳಲ್ಲಿ ಅಂತಿಮ ಆದೇಶ ಹೊರಡಿಸಲಾಗಿದೆ. ಈ ಪೈಕಿ ಒಂಬತ್ತು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಆರು ಕಟ್ಟಡಗಳು ಈ ನಿಯಮ ಪಾಲಿಸಿವೆ. ಇನ್ನುಳಿದ 48 ಕಟ್ಟಡಗಳನ್ನು ಪಾಲನೆ ಅಥವಾ ಮೇಲ್ಮನವಿ ಸಲ್ಲಿಸದ ಕಾರಣ ತಕ್ಷಣವೇ ನೆಲಸಮಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಡಿಸಿಗೆ ತರಾಟೆ: ಜಿಲ್ಲಾಧಿಕಾರಿಗಳು ಕೆಡವುವ ಪ್ರಕ್ರಿಯೆ ಆರಂಭಿಸುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ ಎಂಬುದನ್ನು ಗಮನಿಸಿದ ಹೈಕೋರ್ಟ್, ಆ ಕ್ರಮಕ್ಕೆ ಜಿಲ್ಲಾಧಿಕಾರಿಯೇ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು. ಕಟ್ಟಡವನ್ನು ಕೆಡವಲು ಅಂತಿಮ ಆದೇಶವನ್ನು ಜಾರಿಗೊಳಿಸಿದ ನಂತರ, ಜಿಲ್ಲಾಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಅಡಚಣೆ ಉಂಟುಮಾಡುವ ರಚನೆಗಳನ್ನು ಕೆಡವಲು ಇದು ಶಾಸನಬದ್ಧ ಆದೇಶವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದರು.

48 ಕಟ್ಟಡಗಗಳ ಬಗ್ಗೆ 2017 ರ ನವೆಂಬರ್‌ನಲ್ಲಿಯೇ MIAL ಜಿಲ್ಲಾಧಿಕಾರಿ ಕಚೇರಿಗೆ ತಿಳಿಸಿತ್ತು ಎಂದು ನ್ಯಾಯಾಲಯವು ಗಮನಿಸಿದೆ. ಬಿಎಂಸಿಗೆ ಜವಾಬ್ದಾರಿಯನ್ನು ವರ್ಗಾಯಿಸುವ ಪ್ರಯತ್ನವು ಸ್ಪಷ್ಟವಾಗಿದೆ. ಅಂತಹ ಧೋರಣೆಯಿಂದ ನಾವು ಪ್ರಭಾವಿತರಾಗಿಲ್ಲ. ಜಿಲ್ಲಾಧಿಕಾರಿಗಳು ಬಿಎಂಸಿಗೆ ಜವಾಬ್ದಾರಿಯನ್ನು ವರ್ಗಾಯಿಸುವುದನ್ನು ನಾವು ಅನುಮೋದಿಸುವುದಿಲ್ಲ ಎಂದು ನ್ಯಾಯಾಲಯ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

48 ಕಟ್ಟಡಗಳನ್ನು ಕೆಡವಲು ಉದ್ದೇಶಿಸಲಾದ ಕ್ರಮಗಳನ್ನು ಸೂಚಿಸುವ ಅಫಿಡವಿಟ್ ಸಲ್ಲಿಸಲು ನಾವು ಜಿಲ್ಲಾಧಿಕಾರಿಗೆ ನಿರ್ದೇಶಿಸುತ್ತೇವೆ. ಆಗಸ್ಟ್ 22 ರಂದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಪೀಠ ತಿಳಿಸಿತು.

ಇದನ್ನೂ ಓದಿ: ಸಪ್ತ ಸಾಗರದಾಚೆಯೆಲ್ಲೋ.. ಪ್ರೇಮಿ ಹುಡುಕಿಕೊಂಡು ಬಂದ ಪ್ಯಾರಿಸ್‌ ಯುವತಿ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.