ETV Bharat / bharat

ಠಾಣೆಯಲ್ಲಿದ್ದ ಹನುಮ:​ 27 ವರ್ಷಗಳ ನಂತರ ದೇವಸ್ಥಾನದಲ್ಲಿ ದೇವರ ವಿಗ್ರಹ ಮರು ಪ್ರತಿಷ್ಠಾಪನೆ - ಬಿಹಾರದ ಭೋಜ್​ಪುರ ಜಿಲ್ಲೆ

ಬಿಹಾರದ ಭೋಜ್​ಪುರ ಜಿಲ್ಲೆಯಲ್ಲಿ 27 ವರ್ಷಗಳ ನಂತರ ದೇವಸ್ಥಾನದಲ್ಲಿ ಹನುಮ ದೇವರ ವಿಗ್ರಹ ಮರು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಅಪರೂಪ ಪ್ರಕರಣದ ವರದಿ ಇಲ್ಲಿದೆ.

hanuman-ji-was-imprisoned-in-bihar-police-station-for-27-years-released-after-court-order
ಜೈಲಿನಲ್ಲಿ ಬಂಧಿಯಾಗಿದ್ದ ಹನುಮ:​ 27 ವರ್ಷಗಳ ನಂತರ ದೇವಸ್ಥಾನದಲ್ಲಿ ದೇವರ ವಿಗ್ರಹ ಮರು ಪ್ರತಿಷ್ಠಾಪನೆ
author img

By

Published : Mar 29, 2023, 10:55 PM IST

Updated : Mar 30, 2023, 10:38 AM IST

ಜೈಲಿನಲ್ಲಿ ಬಂಧಿಯಾಗಿದ್ದ ಹನುಮ:​ 27 ವರ್ಷಗಳ ನಂತರ ದೇವಸ್ಥಾನದಲ್ಲಿ ದೇವರ ವಿಗ್ರಹ ಮರು ಪ್ರತಿಷ್ಠಾಪನೆ

ಅರ್ರಾಹ್‌ (ಬಿಹಾರ): ಕಳೆದ 27 ವರ್ಷಗಳ ಕಾಲ ಪೊಲೀಸ್​ ಠಾಣೆಯಲ್ಲಿದ್ದ ಹನುಮಾನ್​ ವಿಗ್ರಹವನ್ನು ದೇವಸ್ಥಾನದಲ್ಲಿ ಮರು ಸ್ಥಾಪಿಸಿದ ಅಪರೂಪದ ಪ್ರಸಂಗ ಬಿಹಾರದ ಭೋಜ್​ಪುರ ಜಿಲ್ಲೆಯಲ್ಲಿ ನಡೆದಿದೆ. ಭಕ್ತರು ಹರ್ಷೋದ್ಗಾರದೊಂದಿಗೆ ಭವ್ಯ ಮೆರವಣಿಗೆ ನಡೆಸಿ ದೇವರ ಪ್ರತಿಷ್ಠಾಪನೆ ಮಾಡಿದ್ದಾರೆ.

29 ವರ್ಷಗಳ ಹಿಂದಿನ ಕತೆ: ಇಲ್ಲಿನ ಬರ್ಹರಾ ಬ್ಲಾಕ್‌ನ ಕೃಷ್ಣಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗುಂಡಿ ಗ್ರಾಮದಲ್ಲಿ ಐತಿಹಾಸಿಕ ರಂಗನಾಥನ ದೇವಾಲಯ ಇದೆ. ಈ ದೇವಾಲಯವನ್ನು ಬಾಬು ವಿಷ್ಣುದೇವ್ ನಾರಾಯಣ್ ಸಿಂಗ್ 1840ರಲ್ಲಿ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಇಲ್ಲಿ ಅಷ್ಟಧಾತುವಿನ ಅನೇಕ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಆದರೆ, 29 ವರ್ಷಗಳ ಹಿಂದೆ ಎಂದರೆ 1994ರ ಮೇ 29ರಂದು ಅಷ್ಟಧಾತುಗಳಿಂದ ತಯಾರಿಸಿದ ಹನುಮಾನ್ ಮತ್ತು ರಾಮಾನುಜ ಸ್ವಾಮಿಯ ವಿಗ್ರಹಗಳನ್ನು ಕಳ್ಳರು ಕದ್ದೊಯ್ದಿದ್ದರು.

ಆಗ ದೇವಾಲಯದ ಅರ್ಚಕ ಜನೇಶ್ವರ್ ದ್ವಿವೇದಿ ಅವರು ವಿಗ್ರಹ ಕಳ್ಳತನಗಳ ಸಂಬಂಧಿಸಿದಂತೆ ಕೃಷ್ಣಗಢ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಳ್ಳರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ನಂತರದಲ್ಲಿ 1996ರ ಮೇ 25ರಂದು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾಲುಹಿ ಪುರ್ ಗೌಸ್‌ಗಂಜ್ ಬಾಧರ್‌ನ ಚೊಂಚಬಾಗ್‌ನಲ್ಲಿರುವ ಬಾವಿಯಿಂದ ಎರಡೂ ವಿಗ್ರಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

42 ಲಕ್ಷ ಠೇವಣಿ ಬೇಕಾಗಿತ್ತು: ಅಲ್ಲಿಂದ ವಿಗ್ರಹಗಳನ್ನು ಠಾಣೆಗೆ ಪೊಲೀಸರು ತಂದಿದ್ದರು. ಇದಾದ ನಂತರ ಈ ವಿಗ್ರಹಗಳು ಮೌಲ್ಯ 42 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. 42 ಲಕ್ಷ ಠೇವಣಿ ಇಟ್ಟ ನಂತರವೇ ವಿಗ್ರಹವನ್ನು ಹಸ್ತಾಂತರಿಸುವಂತೆ ಕೋರ್ಟ್ ಹೇಳಿತ್ತು. ಆದರೆ ಮೂರ್ತಿಗಳ ಬಿಡುಗಡೆಗೆ 42 ಲಕ್ಷ ರೂಪಾಯಿ ಠೇವಣಿ ನೀಡಲು ಯಾರೂ ಸಿದ್ಧರಿರಲಿಲ್ಲ. ಹೀಗಾಗಿ, ಅಂದಿನಿಂದ ಈ ವಿಗ್ರಹಗಳು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: ಪುರಾತನ ಲೋಹದ ವಿಗ್ರಹ ಕರಗಿಸಿ, ಗಟ್ಟಿಗಳನ್ನಾಗಿ ಮಾರ್ಪಡಿಸಿದ ಎಂಟು ಜನ ಪೊಲೀಸರು ಸಸ್ಪೆಂಡ್​

ಇದೇ ವೇಳೆ ವಿಗ್ರಹಗಳ ಠೇವಣಿ ಬಗ್ಗೆ ಪೊಲೀಸರಿಂದ ಖಾತ್ರಿ ನೀಡುವ ವಿಷಯವೂ ಮುನ್ನೆಲೆಗೆ ಬಂದಿತ್ತು. ಆದರೆ, ಇದಕ್ಕೆ ಆಡಳಿತ ಮಂಡಳಿ ಒಪ್ಪಿರಲಿಲ್ಲ. ಇದರ ನಡುವೆ ಮಹಾವೀರ ಮಂದಿರ ನ್ಯಾಸ್‌ನ ಕಾರ್ಯದರ್ಶಿ ಆಚಾರ್ಯ ಕಿಶೋರ್ ಕುನಾಲ್ ಅವರು ಠಾಣೆಯಲ್ಲಿ ಬೀಗ ಹಾಕಿ ಇಡಲಾಗಿದ್ದ ವಿಗ್ರಹಗಳನ್ನು ಹೊರತರಲು ಮುಂದಾಗಿದ್ದರು. ಸುಮಾರು ಒಂದು ವರ್ಷದ ವಿಗ್ರಹಗಳ ಬಿಡುಗಡೆಗೆ ಅಗತ್ಯವಾದ 42 ಲಕ್ಷ ರೂ. ಒದಗಿಸಲು ನಿರ್ಧರಿಸಿದ್ದರು.

ಇದೇ ವೇಳೆ ವಿಗ್ರಹಗಳ ಸುರಕ್ಷತೆಯನ್ನು ಕಿಶೋರ್ ಕುನಾಲ್​ ಖಚಿತ ಪಡಿಸಿಕೊಂಡಿದ್ದರು. ಇದೀಗ ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ. ಕೊನೆಗೂ ನ್ಯಾಯಾಲಯದ ವಿಗ್ರಹಗಳ ಬಿಡುಗಡೆ ಆದೇಶಿಸಿದೆ. ಇದರ ಪರಿಣಾಮ ಠಾಣೆಯಲ್ಲಿದ್ದ ಹನುಮಾನ್ ಮತ್ತು ರಾಮಾನುಜ ಸ್ವಾಮಿಯ ಎರಡೂ ಮೂರ್ತಿಗಳನ್ನು ನೀಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ಬ್ರಜೇಶ್ ಸಿಂಗ್ ತಿಳಿಸಿದ್ದಾರೆ.

ಜನತೆಯಲ್ಲಿ ಸಂತಸದ ಅಲೆ: 27 ವರ್ಷಗಳ ಕಾಲ ಪೊಲೀಸ್ ಠಾಣೆಯಲ್ಲಿದ್ದ ವಿಗ್ರಹಗಳನ್ನು ಹೊರ ತಂದ ಹಿನ್ನೆಲೆಯಲ್ಲಿ ಗುಂಡಿ ಗ್ರಾಮದಲ್ಲಿ ಸಂತಸ ಮನೆ ಮಾಡಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ಹನುಮಂತನ ಮೂರ್ತಿ ಮತ್ತು ರಾಮಾನುಜ ಸ್ವಾಮಿಯ ವಿಗ್ರಹಕ್ಕೆ ಗಂಗಾ ಸ್ನಾನ ಮಾಡಲಾಗಿದೆ. ಮಂತ್ರಘೋಷಗಳೊಂದಿಗೆ ಮೆರವಣಿಗೆ ಮೂಲಕ ಶ್ರೀರಂಗನಾಥ ದೇಗುಲಕ್ಕೆ ಕರೆತರಲಾಗಿದೆ.

ಈ ಬಗ್ಗೆ ಗುಂಡಿ ಗ್ರಾಮದ ಮುಖ್ಯಸ್ಥ ಕೃಷ್ಣ ಕುಮಾರ್​ ಸಿಂಗ್ ಪ್ರತಿಕ್ರಿಯಿಸಿದ್ದು, ಇದೊಂದು ಐತಿಹಾಸಿಕ ದಿನ. ಸದ್ಯ ರಾಮನವಮಿ ಉತ್ಸವ ನಡೆಯುತ್ತಿದೆ. ಮತ್ತೊಂದೆಡೆ, ಹನುಮಂತನ ಮೂರ್ತಿಯನ್ನು ಹಲವು ವರ್ಷಗಳ ದೇವಾಲಯಕ್ಕೆ ಮರಳಿ ಬಂದಿದೆ. ಹೀಗಾಗಿ ಜನರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ ಎಂದರು.

ಇದನ್ನೂ ಓದಿ: 76 ವರ್ಷದ ಬಳಿಕ ಭಾರತ-ಪಾಕ್​ ಗಡಿ ರೇಖೆ ಬಳಿ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ

Last Updated : Mar 30, 2023, 10:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.