ETV Bharat / bharat

ಮಳೆ ನೀರಲ್ಲಿ ತೇಲಿ ಬಂದ ಧಮ್​ ಬಿರಿಯಾನಿ.."ಫ್ಲೋಟಿಂಗ್ ಬಿರಿಯಾನಿ"​ ವಿಡಿಯೋ ವೈರಲ್​ - ಈಟಿವಿ ಭಾರತ ಕನ್ನಡ ನ್ಯೂಸ್​

ಹೈದರಾಬಾದ್​ನಲ್ಲಿ ಭಾರಿ ಮಳೆಗೆ ತೇಲಿ ಬಂದ ಧಮ್​ ಬಿರಿಯಾನಿ - ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಫ್ಲೋಟಿಂಗ್​ ಬಿರಿಯಾನಿ ವಿಡಿಯೋ.

handis-of-biryani-washed-away
ಮಳೆ ನೀರಲ್ಲಿ ತೇಲಿ ಬಂದ ಧಮ್​ ಬಿರಿಯಾನಿ
author img

By

Published : Aug 1, 2022, 2:01 PM IST

ಹೈದರಾಬಾದ್‌: ತೆಲಂಗಾಣದಲ್ಲಿ ಮಳೆ ಜೋರಾಗಿದೆ. ನೀರಿನಿಂದಾಗಿ ರಸ್ತೆಗಳು ನದಿಗಳಂತಾಗಿವೆ. ಈ ಮಳೆ ನೀರಿನಲ್ಲಿ ಧಮ್​ ಬಿರಿಯಾನಿಯ ಪಾತ್ರೆಗಳು ತೇಲಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಇಲ್ಲಿನ ಅದಿಬಾ ಹೋಟೆಲ್‌ ಅಂಡ್​ ರೆಸ್ಟೋರೆಂಟ್​ ಎಂಬಲ್ಲಿಂದ ಎರಡು ಬಿರಿಯಾನಿಯ ದೊಡ್ಡ ಪಾತ್ರೆಗಳು(ಮಡಕೆಗಳು) ನೀರಿನಲ್ಲಿ ತೇಲಿಕೊಂಡು ಹೋಗಿವೆ.

ಟ್ವಿಟರ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಯಾರೋ ಆರ್ಡರ್ ಮಾಡಿದ ಬಿರಿಯಾನಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಮಳೆಯಲ್ಲಿ ಬಿರಿಯಾನಿ ಯಾರೂ ಕೇಳದ ಅದು ದುಖಿಃತನಾಗಿ ನೀರಿನಲ್ಲಿ ತೇಲುತ್ತಿದೆ ಎಂದು ತಮಾಷೆಯಾಗಿ ಬರೆದಿದ್ದಾರೆ. 'ಫ್ಲೋಟಿಂಗ್ ಬಿರಿಯಾನಿ' ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಓದಿ: ರಾಜ್ಯದಲ್ಲಿ ಮುಂದಿನ 5 ದಿನವೂ ಮುಂದುವರೆಯಲಿದೆ ಮಳೆ ಆರ್ಭಟ: ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.