ಮಹಾರಾಷ್ಟ್ರ: ರಾಯಘಡ ಸಮೀಪದ ಮಾಥೆರಾನ್ ಘಾಟ್‌ನಲ್ಲಿ ಭಾರೀ ಅಪಘಾತ ಸಂಭವಿಸಿದ್ದು, ಪ್ರಪಾತಕ್ಕೆ ಬೀಳುತ್ತಿದ್ದ ಜಿಪ್ಸಿ ಸ್ವಲ್ಪದರಲ್ಲಿಯೇ ನಿಂತಿದೆ. ರಸ್ತೆಯ ಪಕ್ಕದಲ್ಲಿದ್ದ ಭದ್ರತೆಯ ಕಬ್ಬಿಣದ ಪೈಪ್ಗೆ ಡಿಕ್ಕಿ ಹೊಡೆದು, ಗಾಳಿಯಲ್ಲಿ ತೇಲುತ್ತಾ ನಿಂತಿದೆ.
ಜಿಪ್ಸಿ ಕಾರಿನಲ್ಲಿ ಒಂಬತ್ತು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಚಾಲಕ ವೇಗವಾಗಿ ಕಾರ್ ಚಲಾಯಿಸುತ್ತಿದ್ದ ಎನ್ನಲಾಗಿದ್ದು, ವಾಹನದ ನಿಯಂತ್ರಣ ತಪ್ಪಿ ಆಳವಾದ ಕಂದಕದ ಬದಿಯಲ್ಲಿರುವ ಕಬ್ಬಿಣದ ಗ್ರಿಲ್ಗೆ ಗುದ್ದಿದ್ದಾನೆ. ಈ ದೃಶ್ಯ ತುಂಬಾ ಭಯಾನಕವಾಗಿದ್ದು, ಸಿನಿಮಾ ಸ್ಟಂಟ್ನಂತೆ ಕಾಣುತ್ತಿದೆ.