ETV Bharat / bharat

ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆ: ವಾರಣಾಸಿ ಕೋರ್ಟ್​ ವಿಚಾರಣೆಗೆ ಸುಪ್ರೀಂ ತಡೆ - ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿ

ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವರದಿಯನ್ನು ಇಂದು ವಾರಣಾಸಿ ಕೋರ್ಟ್​ಗೆ ಸಲ್ಲಿಸಲಾಗಿದೆ. ಇನ್ನೊಂದೆಡೆ, ಈ ಕುರಿತು ಯಾವುದೇ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್‌ ವಾರಣಾಸಿ ನ್ಯಾಯಾಲಯಕ್ಕೆ ತಡೆ ನೀಡಿದ್ದು, ನಾಳೆ ತಾನೇ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ
author img

By

Published : May 19, 2022, 12:01 PM IST

Updated : May 19, 2022, 12:10 PM IST

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಆವರಣ ಪ್ರದೇಶದಲ್ಲಿ ನಡೆಸಿದ ವಿಡಿಯೋಗ್ರಾಫಿಕ್ ಸರ್ವೇ ವರದಿಯನ್ನು ತನಿಖಾ ಆಯೋಗವು ಗುರುವಾರ ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಮೀಕ್ಷೆಗಾಗಿ ಕೋರ್ಟ್​ ನೇಮಿಸಿದ್ದ ಸ್ಪೆಷಲ್​ ಅಡ್ವೋಕೇಟ್ ಕಮಿಷನರ್ ವಿಶಾಲ್ ಸಿಂಗ್ ಅವರು ಮೇ 14, 15 ಮತ್ತು 16 ರಂದು ನಡೆಸಿದ ಸರ್ವೇ ವರದಿಯನ್ನು ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಒಪ್ಪಿಸಿದ್ದಾರೆ ಎಂದು ವಕೀಲ ಮದನ್ ಮೋಹನ್ ಯಾದವ್ ತಿಳಿಸಿದರು.

ಕೋರ್ಟ್​ ಆದೇಶದಂತೆ ಮೇ 6 ಮತ್ತು 7ರಂದು ಅಡ್ವೋಕೇಟ್​ ಕಮಿಷನರ್ ಅಜಯ್ ಮಿಶ್ರಾ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ವರದಿಯನ್ನು ಸಹ ಬುಧವಾರ ಸಂಜೆ ಕೋರ್ಟ್​ಗೆ ಸಲ್ಲಿಸಲಾಗಿದೆ. ಮಂಗಳವಾರ ಮಿಶ್ರಾ ಅವರನ್ನು ನ್ಯಾಯಾಲಯ ನೇಮಿಸಿದ ಹುದ್ದೆಯಿಂದ ವಜಾಗೊಳಿಸಿ, ವಿಶಾಲ್ ಸಿಂಗ್ ಅವರನ್ನು ಸ್ಪೆಷಲ್​ ಅಡ್ವೋಕೇಟ್ ಕಮಿಷನರ್ ಆಗಿ ಮತ್ತು ಅಜಯ್ ಪ್ರತಾಪ್ ಸಿಂಗ್ ಅವರನ್ನು ಅಸಿಸ್ಟೆಂಟ್ ಅಡ್ವೋಕೇಟ್ ಕಮಿಷನರ್ ಆಗಿ ನೇಮಿಸಿತ್ತು. ಮರುರಚನೆಯಾದ ಆಯೋಗವು ಮೇ 14, 15 ಮತ್ತು 16ರಂದು ಸಮೀಕ್ಷೆ ನಡೆಸಿತ್ತು. ಈ ವರದಿಯನ್ನು ಇದೀಗ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ವಿಚಾರಣೆಗೆ ಸುಪ್ರೀಂ ತಡೆ: ಇನ್ನೊಂದೆಡೆ, ಸಮೀಕ್ಷಾ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಈ ಪ್ರಕರಣದ ಕುರಿತಾಗಿ ಇಂದು ಯಾವುದೇ ವಿಚಾರಣೆ ಅಥವಾ ಆದೇಶ ನೀಡದಂತೆ ಸುಪ್ರೀಂಕೋರ್ಟ್‌ ಅಧೀನ ನ್ಯಾಯಾಲಯಕ್ಕೆ ತಡೆ ನೀಡಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಮರು ಸರ್ವೇ ಕೋರಿ ಅರ್ಜಿ: ವಕೀಲರ ಪ್ರತಿಭಟನೆಯಿಂದಾಗಿ ವಿಚಾರಣೆ ಮುಂದೂಡಿಕೆ

Last Updated : May 19, 2022, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.