ETV Bharat / bharat

Gyanvapi Survey: ಜ್ಞಾನವಾಪಿ ಮಸೀದಿಯೋ, ಮಂದಿರವೋ? ಬಿಗಿ ಪೊಲೀಸ್‌ ಭದ್ರತೆಯಲ್ಲಿ ASI ತಜ್ಞರಿಂದ ವೈಜ್ಞಾನಿಕ ಸಮೀಕ್ಷೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡವು ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ಪ್ರಾರಂಭಿಸಿದೆ.

Gyanvapi mosque
ಜ್ಞಾನವಾಪಿ ಮಸೀದಿ
author img

By

Published : Jul 24, 2023, 6:45 AM IST

Updated : Jul 24, 2023, 10:15 AM IST

ವಾರಣಾಸಿ (ಉತ್ತರ ಪ್ರದೇಶ) : ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆಯೇ? ಎಂಬ ಅಂಶವನ್ನು ನಿರ್ಧರಿಸುವ ಸಲುವಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡವು ಭಾನುವಾರ (ನಿನ್ನೆ) ಇಲ್ಲಿಗೆ ಆಗಮಿಸಿದ್ದು, ಇಂದಿನಿಂದ ವೈಜ್ಞಾನಿಕ ಸಮೀಕ್ಷೆ ಆರಂಭಿಸಿದೆ. ಸ್ಥಳದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.

ಈ ಕುರಿತು ಭಾನುವಾರ ಮಾಹಿತಿ ನೀಡಿದ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್.ರಾಜಲಿಂಗಂ, "ಸೋಮವಾರ ಸಮೀಕ್ಷೆ ಆರಂಭವಾಗಲಿದೆ ಎಂದು ಎಎಸ್‌ಐ ನಮಗೆ ತಿಳಿಸಿದೆ" ಎಂದರು. ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಮಾತನಾಡಿ, "ಎಎಸ್‌ಐ ತಂಡ ವಾರಣಾಸಿ ತಲುಪಿದೆ. ಸೋಮವಾರ ಬೆಳಗ್ಗೆ 7 ಗಂಟೆಗೆ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆ ಆರಂಭಿಸಲಿದೆ" ಎಂದು ಹೇಳಿದರು.

ಇದನ್ನೂ ಓದಿ : ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ವಾರಾಣಸಿ ಕೋರ್ಟ್​ ಆದೇಶ

ಆಗಸ್ಟ್‌ 4ರೊಳಗೆ ಕೋರ್ಟ್‌ಗೆ ವರದಿ: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವಲ್ಲಿ ಉತ್ಖನನ ಸೇರಿದಂತೆ ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಶುಕ್ರವಾರ (ಜು.21) ಎಎಸ್‌ಐಗೆ ನಿರ್ದೇಶನ ನೀಡಿದ್ದಾರೆ. ವಜು ಸ್ಥಳ ಹೊರತುಪಡಿಸಿ ಶೃಂಗಾರ ಗೌರಿ ಆವರಣದ ಸಂಪೂರ್ಣ ಪ್ರದೇಶದ ವೈಜ್ಞಾನಿಕ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಪುರಾತತ್ವ ಇಲಾಖೆಯು ತನ್ನ ವರದಿಯನ್ನು ಆಗಸ್ಟ್ 4ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಕೋರ್ಟ್​ ಸೂಚನೆ ನೀಡಿದೆ.

ಇದನ್ನೂ ಓದಿ : ಶೃಂಗಾರ ಗೌರಿ - ಜ್ಞಾನವಾಪಿ ಕೇಸ್​​​ಗೆ ಮಹತ್ವದ ತಿರುವು : ಪ್ರಕರಣ ಹಿಂಪಡೆದುಕೊಂಡ ಜಿತೇಂದ್ರ ಸಿಂಗ್ ವಿಶೆನ್ ಕುಟುಂಬ?

ಈ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸುತ್ತಿದೆ. ಸಮೀಕ್ಷೆ ಪ್ರಕ್ರಿಯೆ ಸಂದರ್ಭದಲ್ಲಿ ಮಸೀದಿಯೊಳಗೆ ಮುಸ್ಲಿಂ ಆರಾಧಕರು ಮಾಡುವ ನಮಾಜ್ ಹಾಗೂ ಪ್ರಾರ್ಥನೆಗಳಿಗೆ ಅಡ್ಡಿಯಾಗದಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ. ಮಸೀದಿಯ ಆಸ್ತಿಗೆ ಯಾವುದೇ ಹಾನಿ ಮಾಡದಂತೆಯೂ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಬೆಳಗ್ಗೆ 8 ರಿಂದ 12 ಗಂಟೆಯೊಳಗೆ ಸರ್ವೇ ನಡೆಸಲು ನಿರ್ದೇಶಿಸಿದೆ.

ಇದನ್ನೂ ಓದಿ : ಜ್ಞಾನವಾಪಿ ಮಸೀದಿ ವಿವಾದ : ಶಿವಲಿಂಗದ ಕಾರ್ಬನ್ ಡೇಟಿಂಗ್ ಸೇರಿ ವೈಜ್ಞಾನಿಕ ಸಮೀಕ್ಷೆ ಮುಂದೂಡಿದ ಸುಪ್ರೀಂ ಕೋರ್ಟ್

ಏನಿದು ವಿವಾದ? : ಜ್ಞಾನವಾಪಿ ಮಸೀದಿಯ ಜಾಗದಲ್ಲಿ ಈ ಹಿಂದೆ ಇದ್ದ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ, ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಹಿಂದೂ ಭಕ್ತಾಧಿಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದೇವಾಲಯದ ಅವಶೇಷಗಳು ಆವರಣದ ಪಶ್ಚಿಮ ಗೋಡೆಯ ಮೇಲೆ ಗೋಚರಿಸುತ್ತವೆ. ಇಡೀ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯಿಂದ ಮಾತ್ರ ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ವಿವಾದವನ್ನು ಪರಿಹರಿಸಬಹುದು ಎಂದು ವಾದ ಮಂಡಿಸಿದ್ದರು.

Last Updated : Jul 24, 2023, 10:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.