ETV Bharat / bharat

ಜ್ಞಾನವಾಪಿ ಮಸೀದಿ ಪ್ರಕರಣ: ವರದಿ ಸೋರಿಕೆ ಮಾಡಿದ್ದಕ್ಕೆ ಕಮಿಷನರ್ ವಜಾಗೊಳಿಸಿದ ಕೋರ್ಟ್​ - ಆಯೋಗದ ವರದಿ ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ಕೋರಿ ವಾರಾಣಸಿ ಕೋರ್ಟ್​ಗೆ ಅರ್ಜಿ

ಮೇ 14-16 ರಿಂದ ಮೂರು ದಿನಗಳ ಕಾಲ ಮಸೀದಿಯಲ್ಲಿ ಸಮೀಕ್ಷೆ ನಡೆದಿದ್ದು, ಕೇವಲ 50 ರಷ್ಟು ಮಾತ್ರವೇ ವರದಿ ಸಿದ್ಧವಾಗಿದೆ. ವರದಿ ತಯಾರಿಸಲು ಸಮಯಬೇಕಾಗಿದೆ ಎಂದು ಕೋರ್ಟ್ ನೇಮಕ ಮಾಡಿದ ಆಯೋಗ ಹೇಳಿದೆ. ಹೀಗಾಗಿ ನಾವು ಅದನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಿಲ್ಲ. ನಾವು ನ್ಯಾಯಾಲಯದಿಂದ 3-4 ದಿನಗಳ ಕಾಲಾವಕಾಶ ಕೋರುತ್ತೇವೆ ಎಂದು ತಿಳಿಸಿದ್ದರು. ಈ ಸಂಬಂಧ ಸ್ಥಳೀಯ ಕೋರ್ಟ್​ ಆದೇಶ ಬಂದಿದ್ದು,ವರದಿ ಸೋರಿಕೆ ಮಾಡಿದ್ದಕ್ಕೆ ಕಮಿಷನರ್ ವಜಾಗೊಳಿಸಿ ಆದೇಶಿಸಿದೆ.

Gyanvapi mosque survey report not ready, Commission to seek more time from court
ಜ್ಞಾನವಾಪಿ ಮಸೀದಿ ಪ್ರಕರಣ: ಸರ್ವೆ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ ಸರ್ವೇ ಸಮಿತಿ
author img

By

Published : May 17, 2022, 3:52 PM IST

Updated : May 17, 2022, 5:35 PM IST

ವಾರಾಣಸಿ (ಉತ್ತರ ಪ್ರದೇಶ): ಕಾಶಿ ಕೋರ್ಟ್​ನ ಆದೇಶದಂತೆ ನಿನ್ನೆಯೇ ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇಂದು ಕೋರ್ಟ್​ ರಚಿಸಿರುವ ಕೋರ್ಟ್​ ಕಮಿಷನರ್​ಗಳ ನೇತೃತ್ವದಲ್ಲಿ ರಚನೆಯಾದ ಸರ್ವೇ ಸಮಿತಿ ಇಂದು ತನ್ನ ವರದಿಯನ್ನ ಸ್ಥಳೀಯ ನ್ಯಾಯಾಲಯಕ್ಕೆ ನೀಡಬೇಕಿತ್ತು. ಆದರೆ ಸಮೀಕ್ಷಾ ವರದಿಯನ್ನು ಸಲ್ಲಿಸಲು ನ್ಯಾಯಾಲಯ ನೇಮಿಸಿದ ವಿಶೇಷ ಆಯೋಗ ಮಂಗಳವಾರ ಎರಡು ದಿನಗಳ ಕಾಲಾವಕಾಶ ಕೋರಿದೆ.

ಓರ್ವ ಕಮಿಷನರ್ ವಜಾಗೊಳಿದ ಕೋರ್ಟ್​: ಜ್ಞಾನವಾಪಿ ಮಸೀದಿ ಸಂಕೀರ್ಣದ ಆವರಣ ಸಮೀಕ್ಷೆ ಮಾಡಲು ವಾರಾಣಸಿ ಕೋರ್ಟ್ ನೇಮಿಸಿರುವ ತಂಡಕ್ಕೆ ವರದಿ ಸಲ್ಲಿಕೆ ಮಾಡಲು ಎರಡು ದಿನಗಳ ಕಾಲಾವಕಾಶ ನೀಡಲಾಗಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿವಿಲ್​ ಕೋರ್ಟ್​, ತಾನು ನೇಮಕ ಮಾಡಿರುವ ಮೂವರು ಕಮಿಷನರ್ ಪೈಕಿ ಓರ್ವರನ್ನ ತೆಗೆದು ಹಾಕಿದೆ. ಸಮೀಕ್ಷೆಯ ಮಾಹಿತಿ ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ಆರೋಪದ ಮೇಲೆ ಇವರನ್ನ ತೆಗೆದು ಹಾಕಲಾಗಿದ್ದು, ಇದೀಗ ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್​​ ಕಮಿಷನರ್ ಆಗಿ ಮುಂದುವರೆಯಲಿದ್ದಾರೆ.

ವರದಿ ಸಲ್ಲಿಸಲು ಸಮಯಾವಕಾಶ ಬೇಕು: ಆಯೋಗದ ವರದಿ ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯದ ಸಹಾಯಕ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಜಯ್ ಪ್ರತಾಪ್ ಸಿಂಗ್ ಮಾತನಾಡಿ, ಮೇ 14-16 ರಿಂದ ಮೂರು ದಿನಗಳ ಕಾಲ ಮಸೀದಿಯಲ್ಲಿ ಸಮೀಕ್ಷೆ ನಡೆದಿದ್ದು, ಕೇವಲ 50 ರಷ್ಟು ಮಾತ್ರವೇ ವರದಿ ಸಿದ್ಧವಾಗಿದೆ. ವರದಿ ತಯಾರಿಸಲು ಸಮಯಬೇಕಾಗಿದೆ ಎಂದಿದ್ದಾರೆ. ಹೀಗಾಗಿ ನಾವು ಅದನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಿಲ್ಲ. ನಾವು ನ್ಯಾಯಾಲಯದಿಂದ 3-4 ದಿನಗಳ ಕಾಲಾವಕಾಶ ಕೋರುತ್ತೇವೆ ಎಂದು ತಿಳಿಸಿದ್ದರು.

ಈ ಹಿಂದೆ ವರದಿಯನ್ನು ಸಕಾಲದಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದ್ದ ವಿಶೇಷ ಆಯುಕ್ತ ವಕೀಲ ವಿಶಾಲ್ ಸಿಂಗ್, ಆಯೋಗದ ವರದಿ ತಯಾರಿಸಲು ಕನಿಷ್ಠ ಎರಡು ದಿನಗಳ ಕಾಲಾವಕಾಶವನ್ನು ಕೋರಿದೆ ಎಂದಿದ್ದಾರೆ. ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನ - ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಸರ್ವೇಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಲಾಗಿತ್ತು.

ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಗೆ ತಡೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಎಸ್‌ಸಿ ಪೀಠವು ಮಂಗಳವಾರ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿಯ ಅರ್ಜಿ ಆಲಿಸಲಿದೆ.

ಅರ್ಜಿ ವಜಾಗೊಳಿಸುವಂತೆ ಹಿಂದೂ ಸೇನೆ ಅರ್ಜಿ: ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ನಿರ್ದೇಶನ ನೀಡುವಂತೆ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಈ ನಡುವೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನು ಓದಿ:ಕೋವಿಡ್​ ಲಸಿಕೆಯ ಪ್ರತಿ ಡೋಸ್​​ಗೆ ₹250 ದರ ಇಳಿಸಿದ ಬಯೊಲಾಜಿಕಲ್​ ಇ

Last Updated : May 17, 2022, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.