ETV Bharat / bharat

ನಕಲಿ ಔಷಧಿ ತಯಾರಿಕಾ ಕಾರ್ಖಾನೆ ಮೇಲೆ ದಾಳಿ: ₹1000 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

ಅಕ್ರಮವಾಗಿ ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ಗುಜರಾತ್ ಎಟಿಎಸ್ ದಾಳಿ ಮಾಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ.

Nector Chem chemical factory
Nector Chem chemical factory
author img

By

Published : Aug 16, 2022, 8:15 PM IST

ವಡೋದರಾ(ಗುಜರಾತ್​): ಭರೂಚ್​​ ಜಿಲ್ಲೆಯ ಅಂಕಲೇಶ್ವರ ಪ್ರದೇಶದಲ್ಲಿದ್ದ ಅಕ್ರಮ ಡ್ರಗ್ಸ್ ಕಾರ್ಖಾನೆಯ ಮೇಲೆ ಎಟಿಎಸ್ ಪೊಲೀಸರು​​ ದಾಳಿ ನಡೆಸಿ 513 ಕೆಜಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಅಂದಾಜು 1,026 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.

ನಕಲಿ ಔಷಧಿ ತಯಾರಿಕಾ ಕಾರ್ಖಾನೆ ಮೇಲೆ ದಾಳಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ. ವಡೋದರಾ ಗ್ರಾಮಾಂತರ ಸಾವಲಿ ತಾಲೂಕಿನ ಮೋಕ್ಸಿ ಎಂಬಲ್ಲಿ ನೆಕ್ಟರ್ ಕೆಮ್​ ರಾಸಾಯನಿಕ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ರಾಸಾಯನಿಕಗಳ ಬದಲಿಗೆ ಜನರನ್ನು ನಾಶ ಮಾಡುವ ಡ್ರಗ್ಸ್​​​​ ತಯಾರು ಮಾಡಲಾಗ್ತಿತ್ತು.

ಇದನ್ನೂ ಓದಿ: ಪ್ರೀತಿಗೆ ಅಡ್ಡಿಪಡಿಸಿದ ತಂದೆಯ ಮೇಲೆ ಸುಳ್ಳು ರೇಪ್‌ ಕೇಸ್‌ ಹಾಕಿ ಜೈಲಿಗಟ್ಟಿದ ಪುತ್ರಿ

ಅಕ್ರಮ ಕಾರ್ಖಾನೆಯಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಡ್ರಗ್ಸ್​ ತಯಾರಿಕೆಗೆ ಕಚ್ಚಾವಸ್ತು ಎಲ್ಲಿಂದ ಬರುತ್ತಿತ್ತು? ಡ್ರಗ್ಸ್‌ ಎಲ್ಲಿಗೆ ರವಾನೆಯಾಗ್ತಿತ್ತು? ಎಂಬುದರ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.