ETV Bharat / bharat

ಹುಟ್ಟುಹಬ್ಬದಂದೇ ಭೀಕರ ಅಪಘಾತ.. ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ - ಮಿತ್ ಕಲ್ಪೇಶಭಾಯಿ ಪಾಂಡ್ಯ

ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಇಬ್ಬರು ಯುವಕರ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಗುಜರಾತ್​
ಗುಜರಾತ್​
author img

By

Published : Aug 31, 2021, 4:26 PM IST

ಸೂರತ್​(ಗುಜರಾತ್): ಗುಜರಾತ್​ನಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ 13 ಅಂಗಾಂಗಳನ್ನು ದಾನ ಮಾಡಲಾಗಿದೆ. 4 ಕಿಡ್ನಿ, 2 ಲಿವರ್, 1 ಹಾರ್ಟ್, 2 ಶ್ವಾಸಕೋಶಗಳು ಮತ್ತು ನಾಲ್ಕು ಕಣ್ಣುಗಳನ್ನು ಎನ್​ಜಿಒವೊಂದರ ಮೂಲಕ ದಾನ ಮಾಡಲಾಗಿದೆ.

ಅಪಘಾತದಲ್ಲಿ ಮಿತ್ ಕಲ್ಪೇಶಭಾಯಿ ಪಾಂಡ್ಯ (18) ಮತ್ತು ಕ್ರಿಶ್ ಸಂಜಯ್ ಭಾಯ್ ಗಾಂಧಿ (18) ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಈ ಮಾಹಿತಿಯನ್ನು ಕುಟುಂಬಸ್ಥರಿಗೆ ತಿಳಿಸಿದ ಬಳಿಕ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಯುವಕರ ಪೋಷಕರು ಈ ನಿರ್ಧಾರ ತೆಗೆದುಕೊಂಡ ಹಿನ್ನೆಲೆ ಪೊಲೀಸರು ಅಂಗಾಂಗಳನ್ನು ಸಾಗಿಸಲು ಗ್ರೀನ್ ಕಾರಿಡಾರ್ ನಿರ್ಮಿಸಿದ್ರು.

ಹೈದರಾಬಾದ್​ನ ಕಿಮ್ಸ್​ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಶ್ವಾಸಕೋಶ ಕಸಿ ಮಾಡಲಾಗಿದೆ. ಅಹಮದಾಬಾದ್‌ನ ಸಿಮ್ಸ್ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡಲಾಗಿದೆ. ಅಹಮದಾಬಾದ್‌ನ ಶಾಲ್ಬಿ ಮತ್ತು ಸ್ಟರ್ಲಿಂಗ್ ಆಸ್ಪತ್ರೆಯಲ್ಲಿ ಲಿವರ್​​, ಇಲ್ಲಿನ ಐಕೆಡಿಆರ್‌ಸಿ ಆಸ್ಪತ್ರೆಯಲ್ಲಿ ನಾಲ್ಕು ಮೂತ್ರಪಿಂಡ ಕಸಿ ಮಾಡಲಾಗಿದೆ. ಲೋಕದೃಷ್ಟಿ ಚಕ್ಷು ಬ್ಯಾಂಕ್​ಗೆ ನಾಲ್ಕು ಕಣ್ಣುಗಳನ್ನು ದಾನ ಮಾಡಲಾಯಿತು.

ಇದನ್ನೂ ಓದಿ: ಉಡುಪಿ: ಪ್ರೇಯಸಿಗೆ ಚಾಕು ಇರಿದು ತಾನೂ ಕತ್ತು ಕುಯ್ದುಕೊಂಡಿದ್ದ ಯುವಕ - ಇಬ್ಬರೂ ಸಾವು

ನಿನ್ನೆ ಕ್ರಿಶ್​​ ಗಾಂಧಿಯ 18 ನೇ ವರ್ಷದ ಹುಟ್ಟುಹಬ್ಬವಾಗಿದ್ದರಿಂದ ಬಾಲ್ಯದ ಗೆಳೆಯ ಪಾಂಡ್ಯ ಜತೆ ಪಾರ್ಟಿಗೆ ಹೋಗಿದ್ದನು. ಈ ವೇಳೆ ಯುವಕರು ಬರುತ್ತಿದ್ದ ಬೈಕ್​ಗೆ ಕಾರೊಂದು ಗುದ್ದಿದ್ದು, ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದರು. ಹಿಟ್​ ಆ್ಯಂಡ್ ರನ್ ಮಾಡಿ ಓಡಿ ಹೋಗಿದ್ದ ಕಾರಿನ ಚಾಲಕ ರಿಜ್ವಾನ್​ಅನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.