ಅಲ್ಮೋರಾ : ಕೊರೊನಾ ಸಾಂಕ್ರಾಮಿಕದಿಂದ ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಜನರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವರನಿಗೆ ಕೋವಿಡ್ -19 ದೃಢಪಟ್ಟ ಹಿನ್ನೆಲೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ ವಿವಾಹ ನಡೆಯಿತು.
450 ಕಿ.ಮೀ ದೂರದಲ್ಲಿದ್ದ ವಧು- ವರರಾದ ಉಮೇಶ್ ಸಿಂಗ್ ಧೋನಿ ಮತ್ತು ಮಂಜು ಕನ್ಯಾಲ್ ಅಲ್ಮೋರಾ ಜಿಲ್ಲೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ನಲ್ಲಿ ವಿವಾಹವಾದರು.
ಮದುವೆಗೆ ಒಂದು ದಿನ ಮೊದಲು ಉಮೇಶ್ ಸಿಂಗ್ ಧೋನಿ ಕೋವಿಡ್ -19 ಧನಾತ್ಮಕ ಪರೀಕ್ಷೆ ನಡೆಸಿದರು ಮತ್ತು ಗಣೇಶ ಪೂಜೆಯನ್ನು ಈಗಾಗಲೇ ನಡೆಸಲಾಗಿದ್ದರಿಂದ ಸಂಬಂಧಿಕರು ಮದುವೆಯನ್ನು ಮುಂದೂಡುವುದನ್ನು ತಪ್ಪಿಸಲು ಈ ಉಪಾಯ ಹುಡುಕಿದ್ದಾರೆ.
ಹಿಂದೂ ಪದ್ಧತಿಯಂತೆ ಪೂಜೆ ಮಾಡಿದ ನಂತರ ಮದುವೆಗಳನ್ನು ಮುಂದೂಡಬಾರದು ಎಂಬ ನಂಬಿಕೆಯಿದೆ. ಆದ್ದರಿಂದ ಆನ್ಲೈನ್ನಲ್ಲಿ ಮದುವೆ ಸಮಾರಂಭ ನೆರವೇರಿತು. ವರನ ಇಡೀ ಕುಟುಂಬವು ಕ್ವಾರಂಟೈನ್ನಲ್ಲಿದ್ದು, ಸಂಬಂಧಿಕರೆಲ್ಲರೂ ಆನ್ಲೈನ್ನಲ್ಲಿ ಮದುವೆಗೆ ಸೇರಿದರು.