ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ.. ಮೂವರು ಯೋಧರಿಗೆ ಗಾಯ - ಯೋಧರ ಮೇಲೆ ಗ್ರೆನೇಡ್ ದಾಳಿ

Grenade attack on soldiers in Jammu Kashmir: ಸಿಆರ್​​ಪಿಎಫ್​ ಸಿಬ್ಬಂದಿ ಟಾರ್ಗೆಟ್ ಮಾಡಿ ಉಗ್ರರು ಗ್ರೆನೇಡ್​ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

Grenade attack on security personnel in Srinagar

author img

By

Published : Jan 25, 2022, 5:50 PM IST

ಶ್ರೀನಗರ(ಜಮ್ಮು-ಕಾಶ್ಮೀರ): ಗಣರಾಜ್ಯೋತ್ಸವ ಆಚರಣೆ ಮುನ್ನಾ ದಿನವಾದ ಇಂದು ಜಮ್ಮು-ಕಾಶ್ಮೀರದಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಮೂವರು ಯೋಧರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಶ್ರೀನಗರದ ಹರಿ ಸಿಂಗ್​ ಹೈ ಸ್ಟ್ರೀಟ್​​ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.

ಭದ್ರತಾ ಸಿಬ್ಬಂದಿಯನ್ನ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಆದರೆ, ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ದಾಳಿ ಬೆನ್ನಲ್ಲೇ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿರುವುದಾಗಿ ಭದ್ರತಾ ಪಡೆ ಮುಖ್ಯಸ್ಥ ಡಿ ಕೆ ಬೂರಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ದೇಶದ ಗಡಿಯೊಳಗೆ ನುಗ್ಗಲು 135 ಉಗ್ರರ ಸಂಚು.. ಗಣರಾಜ್ಯೋತ್ಸವ ಹಿನ್ನೆಲೆ ಬೆದರಿಕೆ ಕರೆ, ಸೇನೆ ಹೈಅಲರ್ಟ್​

ದೇಶಾದ್ಯಂತ ನಾಳೆ ಗಣರಾಜ್ಯೋತ್ಸವ ಆಚರಿಸಲಾಗ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಹೀಗಾಗಿ, ಜಮ್ಮು-ಕಾಶ್ಮೀರದ ಗಡಿಯಲ್ಲಿ ಬಿಎಸ್​ಎಫ್​ ಹದ್ದಿನ ಕಣ್ಣಿಟ್ಟಿದೆ.

ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.