ನವದೆಹಲಿ: ಖಾಸಗೀಕರಣದ ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರವು ಆರ್ಥಿಕತೆಯನ್ನು ಸ್ಪಷ್ಟವಾಗಿ ತಪ್ಪಾಗಿ ನಿರ್ವಹಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದರು ನವದೆಹಲಿಯಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ರು. ಪ್ರಮುಖ ವಲಯಗಳಲ್ಲಿ ತನ್ನ ಆಸ್ತಿಯ ಮೂಲಕ ಹಣಗಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿದ ರಾಹುಲ್, ಸರ್ಕಾರಕ್ಕೆ ಏನು ಮಾಡಬೇಕು ಎಂಬುದು ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
70 ವರ್ಷಗಳಲ್ಲಿ ಸೃಷ್ಟಿಸಲಾಗಿದ್ದ ಆಸ್ತಿಯನ್ನು ಈಗ ಮಾರಾಟ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ ಬಿಜೆಪಿ 70 ವರ್ಷಗಳಲ್ಲಿ ಏನೂ ಆಗೇ ಇಲ್ಲ ಎಂದು ಬಿಜೆಪಿ ಹೇಳುತ್ತದೆ. ''ಅವರು (ಸರ್ಕಾರ) ಯುಪಿಎ ನಿರ್ಮಿಸಿದ್ದನ್ನು ಮೂಲಭೂತವಾಗಿ ನಾಶಪಡಿಸಿದ್ದಾರೆ. ಆದರೆ, ಈಗ ಕಾಂಗ್ರೆಸ್ ಅವಧಿಯಲ್ಲಿ ಸೃಷ್ಟಿಯಾದ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ, ಇದು ದೊಡ್ಡ ದುರಂತ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಖಾಸಗೀಕರಣದ ವಿರುದ್ಧವಲ್ಲ ಆದರೆ, ನಮ್ಮ ಖಾಸಗೀಕರಣ ಯೋಜನೆಯು ಒಂದು ತರ್ಕವನ್ನು ಹೊಂದಿದೆ. "ನಾವು ದೀರ್ಘಕಾಲದ ನಷ್ಟದಲ್ಲಿರುವ ಉದ್ಯಮಗಳನ್ನು ಖಾಸಗೀಕರಣಗೊಳಿಸಿದ್ದೇವೆ. ಕನಿಷ್ಠ ಮಾರುಕಟ್ಟೆ ಪಾಲನ್ನು ಹೊಂದಿರುವ ಕಂಪನಿಗಳನ್ನು ನಾವು ಖಾಸಗೀಕರಣಗೊಳಿಸಿದ್ದೇವೆ. ನಿರ್ದಿಷ್ಟ ವಲಯದಲ್ಲಿ ಖಾಸಗಿ ವಲಯದ ಏಕಸ್ವಾಮ್ಯವನ್ನು ಪರಿಶೀಲಿಸುವ ಸಾಮರ್ಥ್ಯದೊಂದಿಗೆ ನಾವು ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸಿಲ್ಲ" ಎಂದು ಹಿಂದಿನ ಕಾಂಗ್ರೆಸ್ ಕೈಗೊಂಡ ನಿರ್ಧಾರಗಳ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Video: 'ಊಟ ಮಾಡುತ್ತ ಕುಳಿತಿದ್ದ ಕೇಂದ್ರ ಸಚಿವ ರಾಣೆಯನ್ನ ಅರೆಸ್ಟ್ ಮಾಡಿದ್ರು' - ಬಿಜೆಪಿ ಕಿಡಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ಪಾದನಾ ವಲಯಗಳಲ್ಲಿ ಖಾಸಗಿ ಕಂಪನಿಗಳನ್ನು ಒಳಗೊಂಡ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (NMP) ಅನ್ನು ಘೋಷಿಸಿದ್ದರು. ಇಲ್ಲಿಯವರೆಗೆ, 25 ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ವಿಮಾನ ನಿಲ್ದಾಣಗಳು, ಚೆನ್ನೈ, ಭೋಪಾಲ್, ವಾರಾಣಸಿ ಮತ್ತು ವಡೋದರಾ ಸೇರಿದಂತೆ, 40 ರೈಲ್ವೆ ನಿಲ್ದಾಣಗಳು, 15 ರೈಲ್ವೆ ಸ್ಟೇಡಿಯಂಗಳಲ್ಲಿ ಖಾಸಗಿ ಹೂಡಿಕೆಯನ್ನು ಆಹ್ವಾನಿಸಲು ಗುರುತಿಸಲ್ಪಟ್ಟಿವೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.