ಚೆನ್ನೈ(ತಮಿಳುನಾಡು): ಪುದುಚೇರಿಯ ಲೆ.ಗವರ್ನರ್ ಆಗಿರುವ ಡಾ.ತಮಿಳಿಸೈ ಸೌಂದರರಾಜನ್ ವೃದ್ಧೆಯೋರ್ವರ ಪ್ರಾಣ ಕಾಪಾಡಿದ್ದಾರೆ.
ಪೊಂಗಲ್ ಹಬ್ಬಾಚರಣೆ ಮಾಡಲು ಚೆನ್ನೈಗೆ ತೆರಳಿದ್ದ ತಮಿಳಿಸೈ ಇಂದು ಬೆಳಗ್ಗೆ ಸಾಲಿಗ್ರಾಮದ ನಿವಾಸದಲ್ಲಿ ಹಬ್ಬದ ಸಿದ್ಧತೆಯಲ್ಲಿದ್ದರು. ಈ ವೇಳೆ ವೃದ್ಧೆಯೊಬ್ಬರು ಪ್ರಜ್ಞೆತಪ್ಪಿ ಬಿದ್ದರು. ಇದನ್ನು ನೋಡಿರುವ ರಾಜ್ಯಪಾಲೆ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದರು.
ತಮಿಳಿಸೈ ವೃತ್ತಿಪರ ವೈದ್ಯೆಯಾಗಿದ್ದು, ವೃದ್ಧೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದರ ಬೆನ್ನಲ್ಲೇ 108 ಆ್ಯಂಬುಲೆನ್ಸ್ಗೆ ಕರೆ ಮಾಡಿ, ಖಾಸಗಿ ಆಸ್ಪತ್ರೆಗೆ ರವಾನಿಸಿದರು.
ಪುದುಚೇರಿಯ ಲೆ.ಗವರ್ನರ್ ಆಗಿರುವ ಡಾ.ತಮಿಳಿಸೈ ಹೆಚ್ಚುವರಿಯಾಗಿ ತೆಲಂಗಾಣ ರಾಜ್ಯಪಾಲೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಚೆನ್ನೈನ ಮದ್ರಾಸ್ ಮೆಡಿಕಲ್ ಕಾಲೇಜ್ನಿಂದ ಇವರು ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 30-45 ನಿಮಿಷಗಳ ಕೆಟ್ಟ ಬ್ಯಾಟಿಂಗ್ ಪ್ರದರ್ಶನದಿಂದ ಸರಣಿ ಕೈತಪ್ಪಿತು: ಕೊಹ್ಲಿ
ಕಳೆದ ಕೆಲ ದಿನಗಳ ಹಿಂದೆ ಪುದುಚೇರಿಯ ಆಂಥೋನಿಯಾರ್ ಚರ್ಚ್ ಬಸ್ ನಿಲ್ದಾಣದಿಂದ ತವಲಕುಪ್ಪಂ ಜಂಕ್ಷನ್ವರೆಗೆ ಸರ್ಕಾರಿ ಬಸ್‌ನಲ್ಲಿ ಸಂಚರಿಸಿ ಗಮನ ಸೆಳೆದಿದ್ದರು.