ETV Bharat / bharat

ಬಂಗಾಳದಲ್ಲಿ ರಾಜಕೀಯ ಪಕ್ಷಗಳ ದಾಳವಾದ ಗಂಗೂಲಿ - ಬಿಸಿಸಿಐ ವಿಚಾರ - ಈಟಿವಿ ಭಾರತ ಕನ್ನಡ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದಾದರೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಮಂಡಳಿಯ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅವಕಾಶ ನೀಡುವುದಕ್ಕೆ ಏನು ಸಮಸ್ಯೆ ಎಂದು ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಬಂಗಾಳದಲ್ಲಿ ರಾಜಕೀಯ ಪಕ್ಷಗಳ ದಾಳವಾದ ಗಂಗೂಲಿ-ಬಿಸಿಸಿಐ ವಿಚಾರ
In Bengal, Sourav Ganguly-BCCI issue takes political turn
author img

By

Published : Oct 19, 2022, 4:11 PM IST

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಆ ಸ್ಥಾನದಿಂದ ನಿರ್ಗಮಿಸಿರುವ ವಿಚಾರ ಈಗ ಕ್ರೀಡಾ ಆಡಳಿತದ ವ್ಯವಹಾರಕ್ಕಿಂತ ಹೆಚ್ಚಾಗಿ ರಾಜಕೀಯ ಹಗ್ಗ ಜಗ್ಗಾಟದ ವಿಷಯವಾಗಿದೆ. ಈ ವಿಷಯವು ಯಾವ ರೀತಿಯಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ ಎಂದರೆ, ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಮುಖ ನಾಯಕರಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಹ ಈ ಹೋರಾಟದಲ್ಲಿ ಧುಮುಕಿದ್ದಾರೆ. ಇಬ್ಬರೂ ತಮ್ಮ ತಮ್ಮ ರಾಜಕೀಯ ಪಕ್ಷಗಳ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ: ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಪದದಿಂದ ತೆಗೆದುಹಾಕಿರುವುದನ್ನು ಪ್ರಶ್ನಿಸುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಪ್ರಥಮ ಬಾರಿಗೆ ಈ ವಿಷಯದಲ್ಲಿ ರಾಜಕೀಯ ಆರಂಭಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದಾದಾಗ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಮಂಡಳಿಯ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅವಕಾಶ ನೀಡುವುದಕ್ಕೆ ಏನು ಸಮಸ್ಯೆ ಎಂದು ಅವರು ಪ್ರಶ್ನಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಭಾರತದಿಂದ ಗಂಗೂಲಿ ಅವರನ್ನು ಶಿಫಾರಸು ಮಾಡುವಂತೆ ತಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವುದಾಗಿ ಮುಖ್ಯಮಂತ್ರಿ ಮಮತಾ ಹೇಳಿದ್ದಾರೆ.

ಮಮತಾ ಹೇಳಿಕೆಗೆ ಸುವೇಂದು ಅಧಿಕಾರಿ ತಿರುಗೇಟು: ಅಕ್ಟೋಬರ್ 17 ರಂದು ಮುಖ್ಯಮಂತ್ರಿಯಿಂದ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಬದಲಿಗೆ ಗಂಗೂಲಿ ಅವರನ್ನು ಪಶ್ಚಿಮ ಬಂಗಾಳದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸುವಂತೆ ಒತ್ತಾಯಿಸಿ ಸುವೇಂದು ಅಧಿಕಾರಿ ತಿರುಗೇಟು ನೀಡಿದರು.

ಗಂಗೂಲಿ ಪಶ್ಚಿಮ ಬಂಗಾಳದ ಹೆಮ್ಮೆ ಎಂಬ ಮುಖ್ಯಮಂತ್ರಿಯವರ ಹೇಳಿಕೆ, ಅವರು ಇದನ್ನು ತುಂಬಾ ತಡವಾಗಿ ಅರಿತುಕೊಂಡಿರುವುದನ್ನು ಪ್ರತಿಬಿಂಬಿಸುತ್ತದೆ. ಇಲ್ಲದಿದ್ದರೆ ಅವರು ಗಂಗೂಲಿಯನ್ನು ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ಬಹಳ ಹಿಂದೆಯೇ ನೇಮಿಸುತ್ತಿದ್ದರು ಎಂದು ಅವರು ಸಿಎಂ ಮಮತಾಗೆ ಟಾಂಗ್​ ಕೊಟ್ಟಿದ್ದಾರೆ.

ಎರಡೂ ಕಡೆಯಿಂದ ಸುರಕ್ಷಿತ ಅಂತರ ಕಾಪಾಡಿಕೊಂಡ ಸಿಪಿಐ: ಇಷ್ಟಾದರೂ ಸಿಪಿಐ - ಎಂ ಮಾತ್ರ ಗಂಗೂಲಿ ವಿಷಯದ ರಾಜಕೀಯ ಜಗಳದಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದೆ. ಹಿರಿಯ ಸಿಪಿಐ-ಎಂ ನಾಯಕ ಮತ್ತು ಹಿಂದಿನ ಎಡರಂಗದ ಆಡಳಿತದಲ್ಲಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಮಾಜಿ ಸಚಿವ ಅಶೋಕ್ ಭಟ್ಟಾಚಾರ್ಯ, ಸೌರವ್ ಗಂಗೂಲಿ ಅವರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸೌರವ್ ಗಂಗೂಲಿ ಅವರನ್ನು ತಮ್ಮ ರಾಜಕೀಯದ ದಾಳವನ್ನಾಗಿ ಬಳಸಿಕೊಳ್ಳುವುದು ಬೇಡ ಎಂದಿದ್ದಾರೆ.

ಎಲ್ಲರಿಂದ ಅಂತರ ಕಾಪಾಡಿಕೊಂಡಿದ್ದ ಗಂಗೂಲಿ ತಾವೇ ರಾಜಕೀಯ ದಾಳವಾದರಾ?: ರಾಜಕೀಯ ಹಗ್ಗಜಗ್ಗಾಟದ ನಡುವೆಯೂ ನೇರವಾಗಿ ಯಾವುದೇ ರಾಜಕೀಯದಲ್ಲಿ ತೊಡಗಿಸಿಕೊಳ್ಳದೇ ಪಕ್ಷಾತೀತವಾಗಿ ಎಲ್ಲ ನಾಯಕರ ಜೊತೆಗೆ ಒಡನಾಟವಿಟ್ಟುಕೊಂಡು ಸಮತೋಲನ ಕಾಯ್ದುಕೊಂಡಿದ್ದ ಸೌರವ್ ಗಂಗೂಲಿ ಅಂತಿಮವಾಗಿ ತಾವೇ ರಾಜಕೀಯ ದಾಳವಾದರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನು ಓದಿ:ಮಹಿಳಾ ಕ್ರಿಕೆಟ್​​ಗೆ ಬರಲಿದೆಯಾ ಸ್ವರ್ಣಯುಗ..? ಮತ್ತೆ ಚಿಗುರೊಡೆದ ಆಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.