ETV Bharat / bharat

ಸಿಧು ಮೂಸೇವಾಲಾ ಹತ್ಯೆ ಪ್ರಕರಣ: ಪಂಜಾಬ್​ ಪೊಲೀಸ್​ ವಶದಲ್ಲಿ ಬಿಷ್ಣೋಯ್​, ಬುಲೆಟ್​ ಪ್ರೂಫ್​ ಕಾರಿನಲ್ಲಿ ಪಯಣ! - ಸಿಧು ಮೂಸೇವಾಲಾ ಹತ್ಯೆ ಪ್ರಕರಣ

ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಗ್ಯಾಂಗ್​ಸ್ಟಾರ್​ ಲಾರೆನ್ಸ್ ಬಿಷ್ಣೋಯ್ ಅನ್ನು ಮಾನ್ಸಾ ನ್ಯಾಯಾಲಯ ಏಳು ದಿನಗಳ ಕಾಲ ಪಂಜಾಬ್​ ಪೊಲೀಸರ ಕಸ್ಟಡಿಗೆ ನೀಡಿದೆ.

Gangster Lawrence Bishnoi news, Punjab Police get custody of Bishnoi, Lawrence Bishnoi will be interrogated by Punjab police, Punjab crime news, ಗ್ಯಾಂಗ್​ಸ್ಟಾರ್​ ಲಾರೆನ್ಸ್ ಬಿಷ್ಣೋಯ್ ಸುದ್ದಿ, ಪಂಜಾಬ್ ಪೊಲೀಸರಿಗೆ ಕಸ್ಟಡಿಯಲ್ಲಿ ಬಿಷ್ಣೋಯ್, ಲಾರೆನ್ಸ್ ಬಿಷ್ಣೋಯ್​ನ್ನು ವಿಚಾರಣೆ ನಡೆಸುತ್ತರುವ ಪಂಜಾಬ್ ಪೊಲೀಸರು, ಪಂಜಾಬ್ ಅಪರಾಧ ಸುದ್ದಿ,
ಸಿಧು ಮೂಸೇವಾಲಾ ಹತ್ಯೆ ಪ್ರಕರಣ
author img

By

Published : Jun 15, 2022, 11:41 AM IST

Updated : Jun 15, 2022, 11:54 AM IST

ಮಾನ್ಸಾ: ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್​​ನನ್ನು ಪಂಜಾಬ್ ನ್ಯಾಯಾಲಯವು ರಾಜ್ಯ ಪೊಲೀಸರಿಗೆ ಇಂದು ಏಳು ದಿನಗಳ ಕಸ್ಟಡಿಗೆ ನೀಡಿದೆ. ಹೈ-ಪ್ರೊಫೈಲ್ ಪ್ರಕರಣದ ಪ್ರಮುಖ ಆರೋಪಿ ಮತ್ತು ಸಂಚುಕೋರ ಬಿಷ್ಣೋಯ್​​​ನನ್ನು ಪಂಜಾಬ್​ ಪೊಲೀಸರು ಇದೀಗ ಬಿಗಿ ಭದ್ರತೆಯ ನಡುವೆ ಮಾನ್ಸಾದಿಂದ ಮೊಹಾಲಿಗೆ ಕರೆದೊಯ್ಯುತ್ತಿದ್ದಾರೆ.

ಕುಖ್ಯಾತ ಗ್ಯಾಂಗ್​ಸ್ಟರ್​​​​ನನ್ನು ಪೊಲೀಸರು ಬುಲೆಟ್ ಪ್ರೂಫ್ ವಾಹನದಲ್ಲಿ ಸ್ಥಳಾಂತರಿಸುತ್ತಿರುವುದು ಗಮನಾರ್ಹವಾಗಿದೆ. 12ಕ್ಕೂ ವಾಹನಗಳನ್ನು ಒಳಗೊಂಡ ಬೆಂಗಾವಲು ಪಡೆಯಲ್ಲಿ ಸುಮಾರು 100 ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೊಹಾಲಿಯಲ್ಲಿ ಪಂಜಾಬ್ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ ಗಾಯಕ - ರಾಜಕಾರಣಿ ಸಿಧು ಮೂಸೇವಾಲಾ ಅವರ ಹತ್ಯೆಯಲ್ಲಿ ಬಿಷ್ಣೋಯ್ ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸುತ್ತದೆ. ಪಂಜಾಬ್ ಪೊಲೀಸರು ಲಾರೆನ್ಸ್ ಬಿಷ್ಣೋಯ್​​ನನ್ನು ಬುಧವಾರ ಮುಂಜಾನೆ ಮಾನಸಾ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು.

ಓದಿ: ಗಾಯಕ ಮೂಸೆವಾಲಾ ಹತ್ಯೆ ಪ್ರಕರಣ: ದೇಶಬಿಟ್ಟ ಪ್ರಮುಖ ಸಂಚುಕೋರ, ಮತ್ತೊಬ್ಬ ಕಾಣೆ

ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಪಂಜಾಬ್‌ನ ಅಡ್ವೊಕೇಟ್ ಜನರಲ್ ಸ್ವತಃ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರಾಗಿ ರಿಮಾಂಡ್‌ಗೆ ಒತ್ತಾಯಿಸಿದರು. ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯು ಲಾರೆನ್ಸ್ ಬಿಷ್ಣೋಯ್ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಬಿಷ್ಣೋಯ್​ ವಕೀಲರು ಮತ್ತು ಪಂಜಾಬ್​ ಪೊಲೀಸರ ವಕೀಲರ ವಾದಗಳನ್ನು ಆಲಿಸಿದ ನಂತರ , ನ್ಯಾಯಾಲಯವು ಆರೋಪಿ ವಶಕ್ಕೆ ಪಡೆಯಲು ಅನುಮತಿ ನೀಡಿ ಆರೋಪಿಗೆ ಟ್ರಾನ್ಸಿಟ್ ರಿಮಾಂಡ್​​ ಅನ್ನು ಕೂಡ ನ್ಯಾಯಾಲಯ ನೀಡಿದೆ.

ಸಿಧು ಮೂಸೇವಾಲಾ ಹತ್ಯೆಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರು ಕೇಳಿಬಂದ ನಂತರ, ಲಾರೆನ್ಸ್ ಬಿಷ್ಣೋಯ್ ಅವರ ವಕೀಲರು ದೆಹಲಿಯ ಪಟಿಯಾಲಾ ನ್ಯಾಯಾಲಯದಲ್ಲಿ ಜೈಲಿನಲ್ಲಿರುವ ನನ್ನ ಕಕ್ಷಿದಾರನಿಗೆ ಭದ್ರತೆ ಹೆಚ್ಚಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಲಾರೆನ್ಸ್ ಬಿಷ್ಣೋಯ್​ನನ್ನು ಪೊಲೀಸರು ‘ನಕಲಿ ಎನ್‌ಕೌಂಟರ್’ನಲ್ಲಿ ಕೊಲ್ಲಬಹುದು ಅಥವಾ ಪ್ರತಿಸ್ಪರ್ಧಿ ಗ್ಯಾಂಗ್ ಅವರ ಮೇಲೆ ದಾಳಿ ನಡೆಸಬಹುದು ಎಂದು ವಕೀಲರು ಆರೋಪಿಸಿದ್ದರು. ಈ ಹಿನ್ನೆಲೆ ಬಿಷ್ಣೋಯ್​ಗೆ ಹೆಚ್ಚಿನ ಭದ್ರತೆಯಲ್ಲಿ ಪಂಜಾಬ್​ ಪೊಲೀಸರು ಕರೆದೊಯ್ಯುತ್ತಿದ್ದಾರೆ.

Last Updated : Jun 15, 2022, 11:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.