ETV Bharat / bharat

ಹುತಾತ್ಮ ಯೋಧನ ತಂದೆ ಬಂಧನ ಪ್ರಕರಣ: ಬಿಹಾರ ಸಿಎಂಗೆ ರಾಜನಾಥ್ ಕರೆ, ವಿಧಾನಸಭೆಯಲ್ಲಿ ಬಿಜೆಪಿ ಗದ್ದಲ - ಬಿಹಾರದ ವೈಶಾಲಿ ಜಿಲ್ಲೆ

ಬಿಹಾರದಲ್ಲಿ ಹುತಾತ್ಮ ಯೋಧನ ಪ್ರತಿಮೆ ಸ್ಥಾಪಿಸಿದ ತಂದೆಯನ್ನು ಬಂಧಿಸಿದ ಪ್ರಕರಣದ ಕುರಿತಂತೆ ಸಿಎಂ ನಿತೀಶ್ ಕುಮಾರ್ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ಮಾತನಾಡಿದ್ದಾರೆ.

galwan-martyrs-fathers-arrest-in-bihar-defence-minister-rajnath-singh-dials-up-cm-nitish-kumar
ಹುತಾತ್ಮ ಯೋಧನ ತಂದೆ ಬಂಧನ ಪ್ರಕರಣ: ಬಿಹಾರ ಸಿಎಂಗೆ ರಾಜನಾಥ್ ಕರೆ
author img

By

Published : Mar 1, 2023, 5:53 PM IST

ವೈಶಾಲಿ (ಬಿಹಾರ): ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಹುತಾತ್ಮ ಯೋಧ ಜೈ ಕಿಶೋರ್ ಸಿಂಗ್ ಪ್ರತಿಮೆ ವಿಚಾರವಾಗಿ ತಂದೆ ರಾಜ್​ಕಪೂರ್ ಸಿಂಗ್​ ಅವರನ್ನು ಬಂಧಿಸಿದ ಘಟನೆಯು ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ವಿಧಾನಸಭೆಯಲ್ಲಿ ಪ್ರತಿ ಪಕ್ಷದ ಸದಸ್ಯರು ಕೋಲಾಹಲ ಎಬ್ಬಿಸಿದ್ದಾರೆ.

2022ರಲ್ಲಿ ಲಡಾಖ್‌ನ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಬಿಹಾರದ ಯೋಧ ಜೈ ಕಿಶೋರ್ ಸಿಂಗ್ ಹುತಾತ್ಮರಾಗಿದ್ದರು. ತಮ್ಮ ಹುತಾತ್ಮ ಮಗನ ಸ್ಮರಣಾರ್ಥವಾಗಿ ತಂದೆ ರಾಜ್ ​ಕಪೂರ್ ಸಿಂಗ್​ ಗ್ರಾಮದ ಸರ್ಕಾರಿ ಜಾಗದಲ್ಲಿ ಪ್ರತಿಮೆ ಸ್ಥಾಪಿಸಿದ್ದರು. ಆದರೆ, ಜಾಗದ ಮತ್ತೊಂದು ಭಾಗದಲ್ಲಿ ಹರಿನಾಥ ರಾಮ್‌ ಎಂಬುವರರಿಗೆ ಸೇರಿದ ಭೂಮಿ ಇದೆ. ಇದರಿಂದ ವಿವಾದ ಉಂಟಾಗಿದ್ದು, ಪೊಲೀಸರು ರಾಜ್​ಕಪೂರ್ ಸಿಂಗ್​ ಅವರಿಗೆ ಥಳಿಸಿ, ಬಂಧನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹುತಾತ್ಮ ಯೋಧನ ತಂದೆಗೆ ಥಳಿಸಿದ ಬಗ್ಗೆ ವರದಿಯಾದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್, ಸಿಎಂ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಬಜೆಟ್ ಅಧಿವೇಶನದ ಮೂರನೇ ದಿನವಾದ ಬುಧವಾರ ಬಿಜೆಪಿ ಶಾಸಕರು ಘಟನೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಹುತಾತ್ಮ ಯೋಧನ ತಂದೆಗೆ ಅವಮಾನ - ಬಿಜೆಪಿ ಆರೋಪ: ಪ್ರತಿಪಕ್ಷ ನಾಯಕ ವಿಜಯ್ ಕುಮಾರ್ ಸಿನ್ಹಾ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಶಿಸ್ತು ಕಾಪಾಡುವಂತೆ ಸ್ಪೀಕರ್ ಅವಧೇಶ್ ನಾರಾಯಣ್ ಸಿಂಗ್ ಎಚ್ಚರಿಕೆ ನೀಡಿದರು. ಬಿಜೆಪಿ ಶಾಸಕರ ಕೈಯಲ್ಲಿದ್ದ ಪೋಸ್ಟರ್‌ಗಳನ್ನು ಕಿತ್ತುಕೊಳ್ಳುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್​ ಸೂಚಿಸಿದರು. ಗಾಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ತಂದೆಗೆ ನಿತೀಶ್ ಸರ್ಕಾರ ಅವಮಾನಿಸಿದೆ ಎಂದು ಬಿಜೆಪಿಯ ಸಂಜಯ್ ಸಿಂಗ್ ಆರೋಪಿಸಿದರು.

ಅಲ್ಲದೇ, ಸ್ಥಳೀಯ ಪೊಲೀಸರು ಇತರ ಕಾಯ್ದೆಗಳ ಹೊರತಾಗಿ ಸುಲಿಗೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಂಜಯ್ ಸಿಂಗ್ ದೂರಿದರು. ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಹುತಾತ್ಮ ಯೋಧ ಜೈ ಕಿಶೋರ್ ಸಿಂಗ್ ಅವರ ತಂದೆ ರಾಜ್ ಕಪೂರ್ ಸಿಂಗ್ ವಿರುದ್ಧ ಸರ್ಕಾರಿ ಆಸ್ತಿ ಮತ್ತು ಇನ್ನೊಬ್ಬ ವ್ಯಕ್ತಿಗೆ ಸೇರಿದ ತುಂಡು ಭೂಮಿಯನ್ನು ಅತಿಕ್ರಮಿಸಿದ ಆರೋಪ ಇದೆ. ಈ ಕುರಿತ ದೂರಿನ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ಇದೇ ವೇಳೆ, ನಾನು ಹುತಾತ್ಮನ ಯೋಧನ ಸ್ವಗ್ರಾಮ ಜಂಡಹಾ ಗ್ರಾಮಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆ. ಆ ಸಮಯದಲ್ಲಿ, ಅವರ ತಂದೆ ತನ್ನ ಮಗನ ಸ್ಮಾರಕವನ್ನು ನಿರ್ಮಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಸದನದ ಸ್ಪೀಕರ್ ಆಗಿದ್ದ ಮತ್ತು ಆಡಳಿತಾರೂಢ ಸರ್ಕಾರದ ಭಾಗವಾಗಿದ್ದ ಈಗಿನ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಭೇಟಿ ನೀಡಿದ್ದರೋ, ಇಲ್ಲವೋ ನನಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

ಏನಿದು ಘಟನೆ?: ಸರ್ಕಾರಿ ಜಾಗದಲ್ಲಿ ಹುತಾತ್ಮ ಯೋಧ ಜೈ ಕಿಶೋರ್ ಸಿಂಗ್​ ಸ್ಮಾರಕವನ್ನು ತಂದೆ ರಾಜ್ ​ಕಪೂರ್ ಸಿಂಗ್​ ಸ್ಥಾಪಿಸಿದ್ದಾರೆ. ಮೊದಲ ಕೇವಲ ಪ್ರತಿಮೆ ಇಟ್ಟು ಪಿಲ್ಲರ್​ಗಳ ನಿರ್ಮಾಣ ಮಾಡಲಾಗಿತ್ತು. ನಂತರದಲ್ಲಿ ರಾತ್ರೋರಾತ್ರಿ ಸುತ್ತಲು ಗೋಡೆಗಳನ್ನು ಕಟ್ಟಲಾಗಿದೆ. ಇದು ಸರ್ಕಾರಿ ರಸ್ತೆಯಾಗಿದೆ. ಇದಕ್ಕಾಗಿ ಯಾವುದೇ ಅನುಮತಿಯನ್ನು ಅವರು ಪಡೆದಿಲ್ಲ. ಆದರೆ, ರಸ್ತೆ ಪಕ್ಕದಲ್ಲಿ ಹರಿನಾಥ ರಾಮ್‌ ಜಮೀನು ಇದೆ. ರಸ್ತೆ ಮೇಲೆ ಸ್ಮಾರಕ ಕಟ್ಟಿದ್ದರಿಂದ ತಮ್ಮ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹರಿನಾಥ ರಾಮ್‌ ದೂರು ಪೊಲೀಸರಿಗೆ ನೀಡಿದ್ದರು. ಇದರ ಆಧಾರದ ಮೇಲೆ ರಾಜ್ ​ಕಪೂರ್ ಸಿಂಗ್​ ಪೊಲೀಸರು ಬಂಧಿಸಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ.

ಇದನ್ನೂ ಓದಿ: ಖಲಿಸ್ತಾನ್​ ಬೆಂಬಲಿತ ಅಮೃತಪಾಲ್ ಸಿಂಗ್​ಗೆ​ ಪಾಕಿಸ್ತಾನದಿಂದ ಹಣದ ನೆರವು ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.