ನವದೆಹಲಿ : ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ಜಿ 20 ಶೃಂಗಸಭೆಯನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ನಾಯಕರು ನವದೆಹಲಿಗೆ ಆಗಮಿಸಲಿದ್ದಾರೆ ಎಂದು ಭಾರತದ G20 ಸೆಕ್ರೆಟರಿಯೇಟ್‌ನ ವಿಶೇಷ ಕಾರ್ಯದರ್ಶಿ ಹಾಗೂ ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ಸ್ ಮುಖ್ಯಸ್ಥರಾಗಿರುವ ಮುಕ್ತೇಶ್ ಪರದೇಶಿ ಮಾಹಿತಿ ನೀಡಿದ್ದಾರೆ.
-
#WATCH | "We're proceeding towards the culmination of G20 process, started on the first December last year. The summit will be on 9th and 10th September, there will be 3 sessions...some of the leaders will have bilateral meeting with PM Modi...the leaders of the delegations will… pic.twitter.com/az6XVX9TFV
— ANI (@ANI) August 30, 2023 " class="align-text-top noRightClick twitterSection" data="
">#WATCH | "We're proceeding towards the culmination of G20 process, started on the first December last year. The summit will be on 9th and 10th September, there will be 3 sessions...some of the leaders will have bilateral meeting with PM Modi...the leaders of the delegations will… pic.twitter.com/az6XVX9TFV
— ANI (@ANI) August 30, 2023#WATCH | "We're proceeding towards the culmination of G20 process, started on the first December last year. The summit will be on 9th and 10th September, there will be 3 sessions...some of the leaders will have bilateral meeting with PM Modi...the leaders of the delegations will… pic.twitter.com/az6XVX9TFV
— ANI (@ANI) August 30, 2023
"ಕಳೆದ ವರ್ಷದ ಡಿಸೆಂಬರ್ 1 ರಂದು ನಾವು ಜಿ 20 ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದೇವೆ. ಭಾರತವು ಜಿ 20 ಅಧ್ಯಕ್ಷತೆಯಲ್ಲಿ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಪಾಕಪದ್ಧತಿ, ಕರಕುಶಲ ಮತ್ತು ಸಂಸ್ಕೃತಿಯ ಮೂಲಕ ಪ್ರದರ್ಶಿಸಲು ಯೋಜಿಸುತ್ತಿದೆ. ಈ G20 ಶೃಂಗಸಭೆಯು 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿದೆ. ಜೊತೆಗೆ, ನಾವು ಇನ್ನೂ ಒಂಬತ್ತು ದೇಶಗಳು ಮತ್ತು ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ವಿಶೇಷ ಆಹ್ವಾನಗಳನ್ನು ನೀಡಿದ್ದೇವೆ. ಸುಮಾರು 40 ಕ್ಕೂ ಹೆಚ್ಚು ನಿಯೋಗಗಳು ಆಗಮಿಸುತ್ತವೆ. ಆದ್ದರಿಂದ ನಾವು ಸಜ್ಜಾಗುತ್ತಿದ್ದೇವೆ" ಎಂದರು.
ಭಾರತೀಯ ಸಂಸ್ಕೃತಿ, ಕರಕುಶಲ ಮತ್ತು ಪಾಕಪದ್ಧತಿಯನ್ನು ಪ್ರದರ್ಶಿಸಲು ಮುಂದಾಗಿದ್ದೇವೆ. ಹಾಗೆಯೇ, ಯುಪಿಐ ಪಾವತಿಗಳನ್ನು ಹೇಗೆ ಮಾಡಲಾಗುತ್ತದೆ, ಕೋವಿನ್ ಅಪ್ಲಿಕೇಶನ್ ಅನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು 1 ಶತಕೋಟಿ ಜನರು ಆಧಾರ್‌ನೊಂದಿಗೆ ಹೇಗೆ ಜೋಡಣೆಗೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ನವದೆಹಲಿಯಲ್ಲಿ ಜಿ20 ಶೃಂಗ: ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಲ್ಕು ದಿನಗಳ ಭಾರತ ಪ್ರವಾಸ
ಇನ್ನು ಶೃಂಗಸಭೆ ಸಮಾರಂಭದ ಬಗ್ಗೆ ಮಾಹಿತಿ ನೀಡಿದ ಅವರು, "ವಿವಿಧ ದೇಶಗಳನ್ನು ಪ್ರತಿನಿಧಿಸುವ ವಿವಿಧ ನಿಯೋಗಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು, ವಿದೇಶಾಂಗ ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ. ಬಳಿಕ ಭಾರತ ಮಂಟಪದಲ್ಲಿ ಸಾಂಕೇತಿಕ ವೃಕ್ಷ ನೆಡುವಿಕೆ ಕಾರ್ಯ ಸಹ ನಡೆಯಲಿದೆ" ಎಂದು ಶೃಂಗದ ವಿವರಗಳನ್ನು ನೀಡಿದರು.
ಇದನ್ನೂ ಓದಿ : ಭಾರತದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಕುರಿತು ಚರ್ಚೆ: ಅಮೆರಿಕ
ಜಿ 20 ಶೃಂಗಸಭೆಯಲ್ಲಿ ಮೂರು ಅಧಿವೇಶನಗಳು ನಡೆಯಲಿವೆ. ಈ ಎಲ್ಲ ಅಧಿವೇಶನಗಳನ್ನು 'ವಸುಧೈವ ಕುಟುಂಬಕಂ' ಎಂಬ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಆಯೋಜಿಸಲಾಗುವುದು. ಡಿಸೆಂಬರ್ 10 ರಂದು ನಡೆಯುವ ಸಮಾರೋಪ ಅಧಿವೇಶನದಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ಗೆ ಹಸ್ತಾಂತರಿಸಲಿದೆ. ಮೂರು ಸೆಷನ್‌ಗಳು ನಡೆಯಲಿದ್ದು, ಎಲ್ಲ ಸೆಷನ್‌ಗಳು ವಸುಧೈವ ಕುಟುಂಬಕಂ ವಿಷಯದ ಮೇಲೆಯೇ ಇರುತ್ತವೆ, ಇದನ್ನು ಇಂಗ್ಲಿಷ್‌ನಲ್ಲಿ ಒನ್ ಅರ್ಥ್, ಒನ್ ಫ್ಯಾಮಿಲಿ ಮತ್ತು ಒನ್ ಫ್ಯೂಚರ್ ಎಂದು ಕರೆಯಲಾಗುತ್ತದೆ ಎಂದು ಮುಕ್ತೇಶ್ ಪರದೇಶಿ ವಿವರಣೆ ನೀಡಿದರು. (ಎಎನ್ಐ)
ಇದನ್ನೂ ಓದಿ : ಜಿ-20 ಶೃಂಗಸಭೆಗೆ ಭರದ ಸಿದ್ಧತೆ: ದೆಹಲಿ ರಸ್ತೆಗಳು, ಸ್ಥಳಗಳ ಅಲಂಕಾರಕ್ಕೆ 6.75 ಲಕ್ಷ ಸಸಿ, ಹೂವಿನ ಕುಂಡಗಳು!