ETV Bharat / bharat

'Spider-Man: No Way Home' ಸಿನಿಮಾ ಫ್ಯಾನ್ಸ್​​ಗೆ ಸೈಬರ್ ಖದೀಮರ ಕಾಟ.. ಟಿಕೆಟ್ ಬುಕ್ಕಿಂಗ್ ಮಾಡುವಾಗ ಹುಷಾರ್​​​​​​..! - ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಟಿಕೆಟ್ ಬುಕ್ಕಿಂಗ್

ಮೊಬೈಲ್​ಗೆ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರೀಮಿಯರ್ ಶೋ ನೋಡಲು ಉತ್ಸುಕರಾಗಿದ್ದಾರೆ. ಆದರೆ, ಈ ಲಿಂಕ್​ಗಳು ನಕಲಿಯಾಗಿದ್ದು, ಆನ್​ಲೈನ್ ವಂಚಕರು ಬಳಕೆದಾರರ ಮಾಹಿತಿಯ ಜೊತೆಗೆ ಬ್ಯಾಂಕ್ ಖಾತೆಯಲ್ಲಿನ ಹಣವನ್ನೂ ಎಗರಿಸುತ್ತಿದ್ದಾರೆ.

'Spider-Man: No Way Home
ಸ್ಪೈಡರ್ ಮ್ಯಾನ್: ನೋ ವೇ ಹೋಮ್
author img

By

Published : Dec 17, 2021, 5:51 PM IST

ನವದೆಹಲಿ: ಹಾಲಿವುಡ್​​ನ ಬಹುನಿರೀಕ್ಷಿತ ಸೂಪರ್ ಹಿರೋ ಚಿತ್ರ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್​’ ನಿನ್ನೆ ತೆರೆಗಪ್ಪಳಿಸಿದೆ. ಆದರೆ ಇದೇ ಸಮಯ ಕಾಯುತ್ತಿರುವ ಸೈಬರ್ ಖದೀಮರು ಟಿಕೆಟ್ ಬುಕ್ಕಿಂಗ್ ಸೇರಿದಂತೆ ಕೆಲ ಸೈಟ್​​ಗಳಲ್ಲಿ ನಕಲಿ ಲಿಂಕ್ ಕಳುಹಿಸಿ ಪ್ರೇಕ್ಷಕರ ಹಣ ಎಗರಿಸುತ್ತಿರುವುದು ವರದಿಯಾಗುತ್ತಿದೆ.

ಕಾಸ್ಪರ್​​​ಸ್ಕೈ ಸಂಶೋಧಕರು ಗಮನಿಸಿರುವಂತೆ ಈ ಸಿನಿಮಾ ಟಿಕೆಟ್ ಬುಕ್ಕಿಂಗ್ ಕುರಿತಂತೆ ಆನ್​ಲೈನ್​ನಲ್ಲಿ ಸಾವಿರಾರು ನಕಲಿ ಲಿಂಕ್​​ಗಳು ಹರಿದಾಡುತ್ತಿವೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಟಿಕೆಟ್ ಬುಕ್ಕಿಂಗ್​​ಗಾಗಿ ಡೆಬಿಟ್ ಅಥವಾ ಕ್ರಿಡಿಟ್ ಕಾರ್ಡ್​ನ ಮಾಹಿತಿ ನೀಡುತ್ತಿದ್ದಂತೆ ಖಾತೆಯಿಂದ ಹಣ ಮಾಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಹಾಲಿವುಡ್​ನ ಈ ಸೂಪರ್ ಹಿರೋ ಸಿನಿಮಾ ವಿಶ್ವದಾದ್ಯಂತ ಹೈಪ್ ಕ್ರಿಯೆಟ್ ಮಾಡಿದೆ. ಸಿನಿಮಾ ಪ್ರಿಯರು ಈ ಚಿತ್ರ ನೋಡಲು ಹಾತೊರೆಯುತ್ತಿದ್ದು, ಮೊಬೈಲ್​ಗೆ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರೀಮಿಯರ್ ಶೋ ನೋಡಲು ಉತ್ಸುಕರಾಗಿದ್ದಾರೆ. ಆದರೆ, ಈ ಲಿಂಕ್​ಗಳು ನಕಲಿಯಾಗಿದ್ದು, ಆನ್​ಲೈನ್ ವಂಚಕರು ಬಳಕೆದಾರರ ಮಾಹಿತಿಯ ಜೊತೆಗೆ ಬ್ಯಾಂಕ್ ಖಾತೆಯಲ್ಲಿನ ಹಣವನ್ನೂ ಎಗರಿಸುತ್ತಿದ್ದಾರೆ.

ಈ ಚಿತ್ರದ ಸ್ಟೋರಿಯನ್ನೇ ಗಾಳವಾಗಿ ಬಳಸುತ್ತಿರುವ ಖದೀಮರು ಸೈಟ್​​ಗಳಲ್ಲಿ ಈ ಚಿತ್ರದ ಪ್ರಮುಖ ಪಾತ್ರಗಳನ್ನು ವಿವಿಧ ರೀತಿಯ ಸ್ಪೈಡರ್​ ಮ್ಯಾನ್​ ಪಾತ್ರದಲ್ಲಿ ತೋರಿಸಿ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸುತ್ತಿದ್ದಾರೆ. ಈ ನಕಲಿ ಪೋಸ್ಟರ್​ ಕಂಡು ಪ್ರೇಕ್ಷಕರು ಈ ಚಿತ್ರ ನೋಡಲು ಇನ್ನಷ್ಟು ಉತ್ಸುಕರಾಗಿ ಟಿಕೆಟ್ ಬುಕ್ಕಿಂಗ್ ಲಿಂಕ್​​ ಮೇಲೆ ಕ್ಲಿಕ್ ಮಾಡುತ್ತಿದ್ದಾರೆ.

ಇದರ ಜೊತೆ ಕೆಲ ಸೈಟ್​​ಗಳು ಇಡೀ ಚಿತ್ರ​ ಅನ್ನು ಡೌನ್​​ಲೋಡ್ ಮಾಡಿಕೊಳ್ಳಿ ಎಂದು ಲಿಂಕ್ ನೀಡುತ್ತಿದ್ದು, ಇದು ನಕಲಿಯಾಗಿದೆ, ಇದರಿಂದ ನಿಮ್ಮ ವೈಯಕ್ತಿಕ ದಾಖಲೆ ಕಳ್ಳತನವಾಗುವ ಸಾಧ್ಯತೆ ಇರಲಿದೆ ಎಂದು ಕಾಸ್ಪರ್​​​ಸ್ಕೈ ಸಂಶೋಧಕರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಹೆಸರಲ್ಲಿ ಕೋಟಿ ಕೋಟಿ ಕದ್ದ ಸೈಬರ್ ಕಳ್ಳರು.. ಈ ವೈದ್ಯರಿಗೆ 11.80 ಕೋಟಿ ರೂ. ವಂಚನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.