ಕೋಝಿಕ್ಕೋಡ್(ಕೇರಳ): 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಉತ್ತರ ಪ್ರದೇಶ ಮೂಲದವರನ್ನು ಕೋಝಿಕ್ಕೋಡ್ ಪೊಲೀಸರು ಬಂಧಿಸಿದ್ದಾರೆ. ಯುಪಿ ಮೂಲದ ಯುವತಿ ವಾರಣಾಸಿಯಿಂದ ಚೆನ್ನೈಗೆ ತೆರಳುತ್ತಿದ್ದಾಗ ಗ್ಯಾಂಗ್ ಆಕೆಯೊಂದಿಗೆ ಸ್ನೇಹ ಬೆಳೆಸಿ ಪಾಲಕ್ಕಾಡ್‌ಗೆ ಕರೆತಂದಿತ್ತು. ನಂತರ ಆಕೆಯನ್ನು ಕೋಝಿಕ್ಕೋಡ್‌ನ ಲಾಡ್ಜ್‌ಗೆ ಕರೆದೊಯ್ದು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಅತ್ಯಾಚಾರದ ನಂತರ ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ ಬಾಲಕಿ ಅಳುತ್ತಿದ್ದುದನ್ನು ಕಂಡು ಆರ್‌ಪಿಎಫ್ ಎಸ್‌ಐ ಅಪರ್ಣಾ ಠಾಣೆಗೆ ಕರೆದೊಯ್ದರು. ಬಳಿಕ ಬಾಲಕಿ ಪೊಲೀಸರಿಗೆ ಈ ಭಯಾನಕ ಕಥೆ ಹೇಳಿದ್ದು, ಕಸಬಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಂತರ ಯುವಕರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಇಕ್ರಾರ್ ಆಲಂ, ಅಜಾಜ್, ಇರ್ಷಾದ್ ಮತ್ತು ಶಕೀಲ್ ಶಾ ಎಂದು ಗುರುತಿಸಲಾಗಿದ್ದು, ಎಲ್ಲರೂ ಉತ್ತರಪ್ರದೇಶದಿಂದ ಬಂದವರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಓದಿ: ಗ್ಯಾಂಗ್ರೇಪ್ ಆರೋಪಿಗಳ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿದ ಜಿಲ್ಲಾಡಳಿತ