ETV Bharat / bharat

ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್​ ಸಿಂಗ್ ಪತ್ರ.. ಅವರು ಹೇಳಿದ್ದಿಷ್ಟೇ.. - Manmohan Singh writes to PM Modi

ಲಸಿಕೆ ಉತ್ಪಾದಕರಿಗೆ ಹಣ ಮತ್ತು ಇತರ ರಿಯಾಯಿತಿಗಳನ್ನು ನೀಡುವ ಮೂಲಕ ತಮ್ಮ ಉತ್ಪಾದನಾ ಸೌಲಭ್ಯಗಳನ್ನು ತ್ವರಿತವಾಗಿ ವಿಸ್ತರಿಸಲು ಪೂರ್ವಭಾವಿಯಾಗಿ ಬೆಂಬಲ ನೀಡುವಂತೆ ಸಿಂಗ್ ಪ್ರಧಾನಿಯನ್ನು ಕೇಳಿಕೊಂಡಿದ್ದಾರೆ..

Former PM Dr Manmohan Singh writes to PM Modi
ಡಾ. ಮನಮೋಹನ್​ ಸಿಂಗ್ ಪತ್ರ
author img

By

Published : Apr 18, 2021, 4:18 PM IST

Updated : Apr 18, 2021, 7:12 PM IST

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾನುವಾರ ಪತ್ರ ಬರೆದಿದ್ದು, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಐದು ಸಲಹೆಗಳನ್ನು ನೀಡಿದ್ದಾರೆ.

ಮೊದಲನೆಯದಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾವು ಅನೇಕ ಕೆಲಸಗಳನ್ನು ಮಾಡಬೇಕು ಆದರೆ ಈ ಪ್ರಯತ್ನದ ಒಂದು ದೊಡ್ಡ ಭಾಗವು ವ್ಯಾಕ್ಸಿನೇಷನ್ ವಿತರಣೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಎರಡನೆಯದಾಗಿ ಸರ್ಕಾರವು ಹಾಕಿರುವ ಕೊರೊನಾ ಲಸಿಕೆಯ ಪ್ರಮಾಣವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಹೇಳಿದ್ದಾರೆ. ಮುಂದಿನ ಆರು ತಿಂಗಳವರೆಗೆ ಇರಿಸಲಾಗಿರುವ ಕೊವಿಡ್ ಲಸಿಕೆ ಆದೇಶಗಳನ್ನು ಮತ್ತು ರಾಜ್ಯಗಳಿಗೆ ಲಸಿಕೆಗಳನ್ನು ಹೇಗೆ ವಿತರಿಸಲಾಗುವುದು ಎಂದು ಕೇಂದ್ರವು ಹೇಳಬೇಕು.

ಇದುವರೆಗೆ ಎಷ್ಟು ಕಂಪನಿಗಳಿಂದ ಲಸಿಕೆಗಾಗಿ ಸರಕಾರ ಒಪ್ಪಂದ ಮಾಡಿಕೊಂಡಿದೆ. ಮುಂದಿನ 6 ತಿಂಗಳಲ್ಲಿ ಎಷ್ಟು ಪ್ರಮಾಣದ ಲಸಿಕೆಗೆ ಒಪ್ಪಂದ ನೀಡಲಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಒಂದು ವೇಳೆ ಈ ಅವಧಿಯಲ್ಲಿ ಎಷ್ಟು ಜನಕ್ಕೆ ಲಸಿಕೆ ನೀಡಬೇಕು ಎಂಬ ನಿರ್ದಿಷ್ಟ ಗುರಿ ಹೊಂದಿದ್ದರೆ, ಅದಕ್ಕೆ ಬೇಕಾದಷ್ಟು ಲಸಿಕೆಗಳನ್ನು ಮೊದಲೇ ಆರ್ಡರ್‌ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.

45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಲಸಿಕೆ ಹಾಕಬಹುದಾದ ಮುಂಚೂಣಿ ಕಾರ್ಮಿಕರ ವರ್ಗಗಳನ್ನು ಗುರ್ತಿಸಲು ರಾಜ್ಯಗಳಿಗೆ ಕೆಲವು ಅಧಿಕಾರಗಳನ್ನು ನೀಡುವಂತೆ ಅವರು ಪ್ರಧಾನಿಗೆ ಸಲಹೆ ನೀಡಿದರು. ಉದಾಹರಣೆಗೆ, ಶಾಲಾ ಶಿಕ್ಷಕರು, ಬಸ್, ಆಟೋ ಮತ್ತು ಟ್ಯಾಕ್ಸಿ ಚಾಲಕರು , ಪುರಸಭೆ ಮತ್ತು ಪಂಚಾಯತ್ ಸಿಬ್ಬಂದಿ, ಮತ್ತು ಬಹುಶಃ ನ್ಯಾಯಾಲಯಗಳಿಗೆ ಹಾಜರಾಗುಬ ವಕೀಲರು ಮುಂಚೂಣಿ ಕೆಲಸಗಾರರಾಗಿರಬೇಕು. ಇವರುಗಳ ವಯಸ್ಸು 45 ಕ್ಕಿಂತ ಕಡಿಮೆ ಇದ್ದರೂ ಸಹ ಲಸಿಕೆ ಹಾಕಬಹುದು ಎಂದು ಸೂಚಿಸಿದ್ದಾರೆ.

ಲಸಿಕೆ ಉತ್ಪಾದಕರಿಗೆ ಹಣ ಮತ್ತು ಇತರ ರಿಯಾಯಿತಿಗಳನ್ನು ನೀಡುವ ಮೂಲಕ ತಮ್ಮ ಉತ್ಪಾದನಾ ಸೌಲಭ್ಯಗಳನ್ನು ತ್ವರಿತವಾಗಿ ವಿಸ್ತರಿಸಲು ಪೂರ್ವಭಾವಿಯಾಗಿ ಬೆಂಬಲ ನೀಡುವಂತೆ ಸಿಂಗ್ ಪ್ರಧಾನಿಯನ್ನು ಕೇಳಿಕೊಂಡಿದ್ದಾರೆ.

ದೇಶೀಯ ಲಸಿಕೆಗಳ ಸರಬರಾಜು ಸೀಮಿತವಾಗಿರುವುದರಿಂದ, ಯುರೋಪಿಯನ್ ಮೆಡಿಕಲ್ ಏಜೆನ್ಸಿ ಅಥವಾ 'ಯುಎಸ್‌ಎಫ್‌ಡಿಎ' ಯಂತಹ ವಿಶ್ವಾಸಾರ್ಹ ಸಂಸ್ಥೆಗಳು ಅನುಮತಿ ನೀಡಿರುವ ಯಾವುದೇ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿಸಬೇಕು. ನಾವು ಅಭೂತಪೂರ್ವ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದೇವೆ ಈ ಸಂದರ್ಭದಲ್ಲಿ ಕೆಲವು ಕಾನೂನು ಸಡಿಲಿಕೆ ಸಮರ್ಥಿಸಲ್ಪಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಗಳಲ್ಲಿ ಸಂಬಂಧಿತ ಪ್ರಾಧಿಕಾರವು ನೀಡುವ ಅನುಮೋದನೆಯ ಆಧಾರದ ಮೇಲೆ ಈ ಲಸಿಕೆಗಳನ್ನು ಬಳಕೆಗೆ ಅನುಮತಿಸಬಹುದು ಎಂದಿದ್ದಾರೆ.

ಪ್ರಸ್ತುತ, ಭಾರತವು ತನ್ನ ಜನಸಂಖ್ಯೆಯ ಒಂದು ಸಣ್ಣ ಭಾಗಕ್ಕೆ ಮಾತ್ರ ಲಸಿಕೆ ನೀಡಿದೆ. ಸರಿಯಾದ ನೀತಿ, ವಿನ್ಯಾಸದೊಂದಿಗೆ, ನಾವು ಹೆಚ್ಚು ಉತ್ತಮವಾಗಿ ಮತ್ತು ತ್ವರಿತವಾಗಿ ಲಸಿಕೆ ನೀಡಬಹುದು ಎಂದು ನನಗೆ ಖಚಿತವಾಗಿದೆ. ಸರ್ಕಾರ ಈ ಸಲಹೆಗಳನ್ನು ತಕ್ಷಣ ಸ್ವೀಕರಿಸುತ್ತದೆ ಮತ್ತು ತ್ವರಿತವಾಗಿ ಅವುಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ, ”ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಮನಮೋಹನ್​ ಸಿಂಗ್​ ಉಲ್ಲೇಖಿಸಿದ್ದಾರೆ.

Last Updated : Apr 18, 2021, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.