ಬೆಂಗಳೂರು: ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಮತೀಯ ರಾಜಕಾರಣದ ವಿರುದ್ಧ ಹೋರಾಡುತ್ತಿರುವ ಟಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರಿಗೆ ಬಹುಮತದ ನಾಯಕರ ಬೆಂಬಲ ಸಿಗುತ್ತಿದೆ.
ಮಾಜಿ ಪ್ರಧಾನಿ, ಜನತಾದಳ (ಜಾತ್ಯತೀತ) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಕೆಸಿಆರ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ದೇಶದಲ್ಲಿ ಬಿಜೆಪಿ ಮತೀಯ ಆಡಳಿತ ವಿಧಾನಗಳ ವಿರುದ್ಧ ಹೋರಾಡುತ್ತಿರುವ ಸಿಎಂ ಕೆಸಿಆರ್ ಅವರನ್ನು ಅಭಿನಂದಿಸಿದರು.
ದೇವೇಗೌಡರು ಸಿಎಂ ಕೆಸಿಆರ್‌ಗೆ ದೂರವಾಣಿ ಕರೆ ಮಾಡಿ, ರಾವ್ ಸಾಬ್... ಅದ್ಭುತವಾಗಿ ಹೋರಾಟ ಮಾಡುತ್ತಿದ್ದೀರಿ. ಮತೀಯ ಶಕ್ತಿಗಳ ವಿರುದ್ಧದ ಹೋರಾಟವನ್ನು ಎಲ್ಲರೂ ಮುಂದುವರಿಸಬೇಕಾಗಿದೆ. ದೇಶದ ಜಾತ್ಯತೀತ ಸಂಸ್ಕೃತಿಯನ್ನು ರಕ್ಷಿಸಿ ನಾಡು ಉಳಿಸಲು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ಮುಂದುವರಿಯಿರಿ. ನಾವು ನಿಮ್ಮೊಂದಿಗಿದ್ದೇವೆ, ನಾವು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಬೇಕಾಗುತ್ತದೆ ಎಂದು ದೇವೇಗೌಡರು ಹೇಳಿದರು.
ಬೆಂಗಳೂರಿನಲ್ಲಿ ಆದಷ್ಟು ಬೇಗ ಈ ಕುರಿತು ಸಭೆ ನಡೆಸುತ್ತೇನೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಹೇರ್ ಕಟ್ ಮಾಡಲ್ಲ ಎಂದ ತೆಲಂಗಾಣ ಕ್ಷೌರಿಕರ ಸಂಘ.. ಕಾರಣ ಇಲ್ಲಿದೆ.