ಭುಜ್ (ಗುಜರಾತ್) : ಭುಜ್‌ನ ದಂಡಾ ಬಜಾರ್‌ನಲ್ಲಿ ಶ್ರೀನಾಥಜಿ ಸ್ವೀಟ್ಸ್ ಎಂಬ ಅಂಗಡಿ ಇದೆ. ಈ ಅಂಗಡಿ 75 ವರ್ಷಕ್ಕಿಂತ ಹಳೆಯದು. ಮೂಲ ಮಾಲೀಕ ಜಯಂತಿಲಾಲ್ ರತಂಶಿ ಜೋಶಿ ಮತ್ತು ಅವರ ಅಳಿಯ ಪ್ರದೀಪ್ ಈಸ್ವರಲಾಲ್ ಜೋಶಿ ಕಳೆದ 40 ವರ್ಷಗಳಿಂದ ಅಂಗಡಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇದರಲ್ಲೇನು ವಿಶೇಷ ಇದೆ ಎಂದುಕೊಳ್ಳಬಹುದು. ಹೌದು, ಇದರಲ್ಲಿ ಒಂದು ವಿಶಿಷ್ಟತೆ ಇದೆ.
40 ವರ್ಷಗಳಿಂದ ಪ್ರದೀಪ ಜೋಶಿ ಬೆಳಗ್ಗೆಯಿಂದ ಸಂಜೆಯವರೆಗೆ ಯಾವುದೇ ಭಿಕ್ಷುಕ ಬಂದರೆ ಅವರಿಗೆ ಬೇಕಾದಷ್ಟು ತಿನಿಸು ಕೊಟ್ಟು ಕಳುಹಿಸುತ್ತಾರೆ.ಪ್ರದೀಪ್ ಜೋಶಿ ಅವರು ಬೆಳಗ್ಗೆ ಅಂಗಡಿ ತೆರೆಯುತ್ತಾರೆ ಇವರಿಗೆ ಮೊದಲ ಗ್ರಾಹಕರು ಹೆಚ್ಚಾಗಿ ಭಿಕ್ಷುಕರೇ ಆಗಿರುತ್ತಾರೆ. ಅವರ ಸೇವೆ ಮಾಡುವ ಮೂಲಕ ಜೋಶಿ ವ್ಯವಹಾರವನ್ನು ಪ್ರಾರಂಭಿಸುತ್ತಾರೆ.
ಬೆಳಗ್ಗೆ ಬೂಂದಿ, ಜಿಲೇಬಿ, ಮೋಹನ್ ತಾಲ್, ಸಾಟ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಏಕಕಾಲಕ್ಕೆ ಭಿಕ್ಷುಕರು ಸಮಯಕ್ಕೆ ತಕ್ಕಂತೆ ಬಂದು ತಮಗೆ ಬೇಕಾದಷ್ಟು ಸಿಹಿತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಬೆಳಗ್ಗೆಯಿಂದ ರಾತ್ರಿವರೆಗೆ 50 ರಿಂದ 60 ಭಿಕ್ಷುಕರು ಅಂಗಡಿಗೆ ಭೇಟಿ ನೀಡುತ್ತಾರಂತೆ. ಪ್ರಮುಖ ವಿಷಯ ಎಂದರೆ ಒಮ್ಮೆ ಒಂದು ದಿನದಲ್ಲಿ ಭಿಕ್ಷುಕ ಬಂದರೆ ಮತ್ತೆ ಎರಡನೇ ಬಾರಿಗೆ ಬರುವುದಿಲ್ಲವಂತೆ. ಇನ್ನೇನಿದ್ದರು ಮಾರನೇ ದಿನವೇ ಬರುತ್ತಾರೆ. ನಿರಂತರವಾಗಿ ಕಾರ್ಯನಿರತವಾಗಿರುವ ಈ ಸಿಹಿತಿಂಡಿ ಅಂಗಡಿಯಲ್ಲಿ ಹಗಲಿನಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ.
ಈ ಸೇವೆಯ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಪ್ರದೀಪ್ ಜೋಶಿ, 40 ವರ್ಷಗಳಿಂದ ಈ ಅಂಗಡಿಯನ್ನು ಮೂಲತಃ ತನ್ನ ಮಾವ ಅವರ ಮೂಲಕ ನಡೆಸುತ್ತಿದ್ದೇನೆ. ಈ ಸೇವೆಯ ಹಿಂದಿನ ಮುಖ್ಯ ಉದ್ದೇಶ ಎಂದರೆ ಅವರ ಆತ್ಮವನ್ನು ತೃಪ್ತಿಪಡಿಸುವುದು. ಭಿಕ್ಷುಕರನ್ನು ತೃಪ್ತಿಪಡಿಸುವುದೇ ನಮ್ಮ ಮಾವರನ್ನು ತೃಪ್ತಿ ಪಡಿಸಿದಂತೆ ಎನ್ನುತ್ತಾರೆ ಜೋಶಿ.
ಇದನ್ನೂ ಓದಿ: ಮಾನ್ಯಾ ಎಂಬ ಹೆಣ್ಣು ಹುಲಿ ದತ್ತು ಪಡೆದ ಸಚಿವ ಮುರುಗೇಶ್ ನಿರಾಣಿ