ಮುಂಬೈ( ಮಹಾರಾಷ್ಟ್ರ): ಇಲ್ಲಿನ ತಲೋಜಾ ಎಂಐಡಿಸಿಯಲ್ಲಿರುವ ಕೆಮಿಕಲ್ ಫಾರ್ಮಾ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಒಟ್ಟು ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿವೆ. ಈ ನಡುವೆ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ವರುಣ ದೇವ ಸಾಥ್ ನೀಡಿದ್ದಾನೆ.
ತಲೋಜಾದಲ್ಲಿರುವ ಮೋದಿ ಕೆಮಿಕಲ್ ಫಾರ್ಮಾ ಲಿಮಿಟೆಡ್‌ನಲ್ಲಿ ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದಿಂದ ಕಂಪನಿಗೆ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಎರಡು ವರ್ಷಗಳ ಹಿಂದೆ ಇದೇ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಇಲ್ಲಿನ ನಾಗರಿಕರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ತುರ್ಭೆ ಬೋನ್ಸಾರಿ ಗ್ರಾಮದ ಬಳಿಯ ಬಾಯ್ಲರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ನವಿ ಮುಂಬೈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಬೆಂಕಿಯನ್ನು ಶೀಘ್ರವೇ ನಂದಿಸಲಾಗಿದೆ.
ಇದನ್ನು ಓದಿ:ಬಿಷಪ್ ಮನೆ ಮೇಲೆ EOW ಅಧಿಕಾರಿಗಳ ದಾಳಿ.. ಕೋಟಿ ಕೋಟಿ ನಗದು ವಶ, ಯಂತ್ರಗಳ ಮೂಲಕ ಹಣ ಎಣಿಕೆ