ನವದೆಹಲಿ: ಕೋವಿಡ್ ನಿರ್ವಹಣೆಯ ಸಂಬಂಧ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಪರಿಹಾರ ಕ್ರಮವಾಗಿ ಪಂಚಾಯತ್ಗಳಿಗೆ 8,923.8 ಕೋಟಿ ರೂ ಬಿಡುಗಡೆ ಮಾಡಿದೆ.
25 ರಾಜ್ಯದ ಪಂಚಾಯತ್ಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ. 2020-21ನೇ ಸಾಲಿನ ಯುನೈಟೆಡ್ ಗ್ರ್ಯಾಂಟ್ನ ಮೊದಲ ಕಂತಿನ ಭಾಗವಾಗಿ ಈ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮೂರು ಹಂತದ ಪಂಚಾಯತ್ ಭಾಗಗಳಾದ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ಗಳಿಗೆ ಸಮನಾಗಿ ಹಂಚಿಕೆಯಾಗಲಿದೆ.
-
✅Centre releases Rs. 8923.8 crore to Panchayats in 25 States
— Ministry of Finance (@FinMinIndia) May 9, 2021 " class="align-text-top noRightClick twitterSection" data="
✅Release of grant advanced in view of COVID-19 pandemic
Read More➡️ https://t.co/tnBYurqdaG
(1/4) pic.twitter.com/XIBdeliFua
">✅Centre releases Rs. 8923.8 crore to Panchayats in 25 States
— Ministry of Finance (@FinMinIndia) May 9, 2021
✅Release of grant advanced in view of COVID-19 pandemic
Read More➡️ https://t.co/tnBYurqdaG
(1/4) pic.twitter.com/XIBdeliFua✅Centre releases Rs. 8923.8 crore to Panchayats in 25 States
— Ministry of Finance (@FinMinIndia) May 9, 2021
✅Release of grant advanced in view of COVID-19 pandemic
Read More➡️ https://t.co/tnBYurqdaG
(1/4) pic.twitter.com/XIBdeliFua
25 ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಅತೀ ಹೆಚ್ಚು ಅನುದಾನ ಪಡೆದಿದೆ (1,441.6 ಕೋಟಿ) ಇದರ ನಂತರ ಮಹಾರಾಷ್ಟ್ರ (861.4 ಕೋಟಿ) ಪಡೆದರೆ ಸಿಕ್ಕಿಂ ಅತೀ ಕಡಿಮೆ (6.2 ಕೋಟಿ) ಪಡೆದಿದೆ. ಇತ್ತ ಕರ್ನಾಟಕಕ್ಕೆ 475.4 ಕೋಟಿ ರೂಪಾಯಿ ಅನುದಾನವಾಗಿ ದೊರಕಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಜೂನ್1 ರಂದು ಮೊದಲ ಅನುದಾನ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ಪರಿಸ್ಥಿತಿ ಮನದಲ್ಲಿಟ್ಟುಕೊಂಡು ಹಾಗೂ ಪಂಚಾಯತ್ ರಾಜ್ ಸಚಿವಾಲಯದ ಶಿಫಾರಸಿನ ಮೇರೆಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಲಾಗಿದೆ.