ETV Bharat / bharat

ವರದಕ್ಷಿಣೆಯಾಗಿ ಅಳಿಯನಿಗೆ ಬುಲ್ಡೋಜರ್ ಕೊಟ್ಟ ಮಾವ! - ಮಾವ ಕೊಟ್ಟ ಬುಲ್ಡೋಜರ್

ಮಗಳು ಮತ್ತು ಅಳಿಯನಿಗೆ ನಿವೃತ್ತ ಯೋಧರೊಬ್ಬರು ವರದಕ್ಷಿಣೆಯಾಗಿ ಬುಲ್ಡೋಜರ್ ಕೊಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

bulldozer
ಅಳಿಯನಿಗೆ ಬುಲ್ಡೋಜರ್ ಕೊಟ್ಟ ಮಾವ
author img

By

Published : Dec 17, 2022, 10:56 AM IST

ಹಮೀರ್​ಪುರ್(ಉತ್ತರ ಪ್ರದೇಶ): ಸಾಮಾನ್ಯವಾಗಿ ಮದುವೆ ಸಮಾರಂಭಕ್ಕೆ ಹೋದಾಗ ಗೋಡೆ ಗಡಿಯಾರ, ರಿಂಗ್, ಚಿನ್ನದ ಸರ, ಫೋಟೋ​ ಇತ್ಯಾದಿಗಳನ್ನು ಕೊಡುವುದು ಸಾಮಾನ್ಯ. ಆದ್ರೆ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವರದಕ್ಷಿಣೆಯಾಗಿ ಅಳಿಯನಿಗೆ ಮಾವ ಬುಲ್ಡೋಜರ್ ಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ವರದಕ್ಷಿಣೆಯಾಗಿ ಬುಲ್ಡೋಜರ್ ಪಡೆದ ಮೊದಲ ಪ್ರಸಂಗ ಇದಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬುಲ್ಡೋಜರ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯುಪಿ ಬುಲ್ಡೋಜರ್‌ಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್​ ಪ್ರಚಾರ ಸಂದರ್ಭದಲ್ಲಿ ಬುಲ್ಡೋಜರ್​ ಬಾಬು ಎಂದು ಕಿಚಾಯಿಸಿದ್ದು, ಭಾರಿ ಸದ್ದು ಮಾಡಿತ್ತು. ಇದೀಗ ವರದಕ್ಷಿಣೆಯಾಗಿ ಬುಲ್ಡೋಜರ್‌ ಸಿಕ್ಕಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸುಮೇರ್‌ಪುರ ಡೆವಲಪ್‌ಮೆಂಟ್ ಬ್ಲಾಕ್‌ನ ದೇವಗಾಂವ್ ಗ್ರಾಮದ ನಿವಾಸಿ, ನಿವೃತ್ತ ಯೋಧ ಪರಶುರಾಮ್ ಎಂಬುವರು ತಮ್ಮ ಪುತ್ರಿ ನೇಹಾಳನ್ನು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವ ಸೌಂಖಾರ್ ನಿವಾಸಿ ಯೋಗೇಂದ್ರ ಅಲಿಯಾಸ್ ಯೋಗಿ ಪ್ರಜಾಪತಿ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು.

ಇದನ್ನೂ ಓದಿ: ವರದಕ್ಷಿಣೆಗೆ ಗಂಡನ ಮನೆಯವರು ಬಲಿ ಪಡೆದ ಮಗಳ ಅರೆಬೆಂದ ಕಾಲು ಹಿಡಿದು ಠಾಣೆಗೆ ಬಂದ ಅಪ್ಪ!

ಮಾವ ಕೊಟ್ಟ ಬುಲ್ಡೋಜರ್: ಸುಮೇರ್‌ಪುರದ ಅತಿಥಿ ಗೃಹದಲ್ಲಿ ಡಿ.15ರಂದು ವಿವಾಹ ಸಮಾರಂಭ ಜರುಗಿತು. ಈ ವೇಳೆ ವರದಕ್ಷಿಣೆಯಾಗಿ ಮಗಳಿಗೆ ಮತ್ತು ಅಳಿಯನಿಗೆ ನಿವೃತ್ತ ಯೋಧ ಯಾವುದೇ ಐಷಾರಾಮಿ ಕಾರು ನೀಡದೆ ಬುಲ್ಡೋಜರ್ ನೀಡಿದ್ದಾರೆ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಪರಶುರಾಮ್, ಮಗಳು ಪ್ರಸ್ತುತ ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದಾಳೆ. ಒಂದು ವೇಳೆ ಕೆಲಸ ಸಿಗದಿದ್ದರೆ ನಾನು ಕೊಟ್ಟ ಬುಲ್ಡೋಜರ್ ಉದ್ಯೋಗ ಕೊಡುತ್ತದೆ. ಬುಲ್ಡೋಜರ್ ನೀಡಿರುವುದನ್ನು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.