ETV Bharat / bharat

ನೋಟು ಎಣಿಕೆ ಮಾಡಲಾಗದ ಮದುಮಗ: ಈತನ ಸಹವಾಸವೇ ಸಾಕು, ಈ ಮದುವೆ ಬೇಡವೆಂದ ವಧು! - ಹುಡುಗ ಅನಕ್ಷರಸ್ಥ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಎಂಬ ಮಾತಿದೆ. ಆದರೆ, ಉತ್ತರ ಪ್ರದೇಶದಲ್ಲಿ ವರ ಅನಕ್ಷರಸ್ಥ ಎಂಬ ವಿಷಯ ಮುಚ್ಚಿಟ್ಟು ಮದುವೆ ಮಾಡಿಸಲು ಹೊರಟವರಿಗೆ ವಧು ಶಾಕ್​ ನೀಡಿದ್ದಾಳೆ.

farrukhabad-wedding-news-bride-refused-to-marry-illiterate-groom-in-farrukhabad
ಹಣದ ನೋಟು ಎಣಿಕೆ ಮಾಡಲಾಗದ ಗಂಡು: ಈತನ ಸಹವಾಸವೇ ಬೇಡ ಎಂದು ಮದುವೆ ಮುರಿದ ವಧು
author img

By

Published : Jan 21, 2023, 8:33 PM IST

Updated : Jan 22, 2023, 12:17 PM IST

ಫರೂಕಾಬಾದ್‌ (ಉತ್ತರ ಪ್ರದೇಶ): ಇತ್ತೀಚೆಗೆ ವಿಚಿತ್ರ ಕಾರಣಗಳಿಂದ ಮದುವೆಗಳು ಮಧ್ಯದಲ್ಲೇ ನಿಂತು ಹೋಗುವ ಪ್ರಸಂಗ ನಡೆಯುತ್ತಲೇ ಇವೆ. ವಿವಾಹ ವೇದಿಕೆ ಮೇಲೆ ವರ ಮುತ್ತು ಕೊಟ್ಟಿದ್ದಕ್ಕೆ, ಗುಟ್ಕಾ ಜಗಿಯುವ ಮತ್ತು ಮದ್ಯ ಸೇವನೆ ಮಾಡುವ ಕಾರಣ ನೀಡಿ ವಧುಗಳು ಮದುವೆಗಳನ್ನು ಅರ್ಧಕ್ಕೆ ಮೊಟಕುಗೊಳಿರುವ ಘಟನೆಗಳು ಈ ಹಿಂದೆ ವರದಿಯಾಗಿದೆ. ಇದೀಗ ವರನೋರ್ವನಿಗೆ ಹಣದ ನೋಟುಗಳನ್ನು ಎಣಿಕೆ ಮಾಡಲು ಆಗದಿದ್ದಕ್ಕೆ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ.

ಇದನ್ನೂ ಓದಿ: ಕಿಸ್​ಗೆ ಬೇಸತ್ತ ವಧು: ಮಾವನ ಮನೆಯಿಂದ ಬರಿಗೈಯಲ್ಲಿ ವರ ವಾಪಸ್​

ಹೌದು, ಉತ್ತರ ಪ್ರದೇಶದ ಫರೂಕಾಬಾದ್‌ ಜಿಲ್ಲೆಯಲ್ಲಿ ಹಣ ನೋಟುಗಳನ್ನು ಎಣಿಸಲು ವಿಫಲವಾದ ವರನಿಂದಾಗಿ ಮದುವೆ ಮುರಿದು ಬಿದ್ದಿರುವ ಕುತೂಹಲಕಾರಿ ಪ್ರಕರಣ ಬೆಳಕಿಗೆ ಬಂದಿದೆ. ವಧುವಿನ ಸಹೋದರ ವರನಿಗೆ ಎಣಿಕೆ ಮಾಡುವಂತೆ ನೋಟುಗಳ ಬಂಡಲ್​ಗಳನ್ನು ನೀಡಿದ್ದ. ಆದರೆ, ಈ ನೋಟುಗಳನ್ನು ಎಣಿಸಲು ವರ ತಾಪತ್ರಯ ಪಟ್ಟಿದ್ದಾನೆ. ಈ ವಿಷಯ ತಿಳಿದ ವಧುವಿಗೆ ತಾನು ಮದುವೆ ಆಗಲು ಹೊರಟಿರುವ ಹುಡುಗ ಅನಕ್ಷರಸ್ಥ ಎಂದು ಮನವರಿಕೆಯಾಗಿದೆ. ಆದ್ದರಿಂದ ಈತನ ಸಹವಾಸವೇ ಬೇಡ ಎಂದು ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ.

ವರವನ್ನು ಹುಡುಕಿ ಕೊಟ್ಟಿದ್ದ ಮಧ್ಯವರ್ತಿ: ಇಲ್ಲಿನ ದುರ್ಗಾಪುರ ಗ್ರಾಮದ ಯುವತಿಯ ವಿವಾಹವು ಸುಮಾರು ಮೂರು ತಿಂಗಳ ಹಿಂದೆ ಮೈನ್‌ಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಬಿನಾ ಸಾರಾ ಗ್ರಾಮದ ಯುವಕನೊಂದಿಗೆ ನಿಶ್ಚಯವಾಗಿತ್ತು. ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಬಬಿನಾ ಸಾರಾ ಗ್ರಾಮದ ಮಧ್ಯವರ್ತಿಯೋರ್ವ ವರನ ಕಡೆಯವರು ದುರ್ಗಪುರಕ್ಕೆ ಕರೆತಂದು ಮದುವೆ ಸಂಬಂಧ ಬೆಳೆಸಲು ಕಾರಣವಾಗಿದ್ದ.

ಇದಾದ ಬಳಿಕ ಯುವತಿ ಮತ್ತು ಯುವಕ ಕಡೆಯ ಎರಡೂ ಕುಟುಂಬಗಳ ಮಧ್ಯೆ ಮಾತುಕತೆ ನಡೆದಿತ್ತು. ಇದರ ನಂತರ ವರ ಕಡೆಯವರು ಹುಡುಗಿಯನ್ನು ನೋಡಲು ಬಂದಿದ್ದರು. ವಧುವಿನ ಕಡೆಯವರು ಸಹ ಹುಡುಗನನ್ನು ನೋಡಲು ಹೋಗಿದ್ದರು. ಇಷ್ಟೆಲ್ಲ ನಡೆದ ಬಳಿಕ ಇಬ್ಬರಿಗೂ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಿದ್ದರು. ಅಲ್ಲದೇ, ಮಧ್ಯವರ್ತಿಯ ನಂಬಿಕೆಯ ಮೇಲೆಯೇ ಮದುವೆಯ ದಿನಾಂಕವನ್ನೂ ನಿಗದಿ ಪಡಿಸಲಾಗಿತ್ತು.

ಮದುವೆ ಮುನ್ನ ದಿನ ವರನ ಬಂಡವಾಳ ಬಯಲಿಗೆ: ಎರಡು ಕುಟುಂಬಗಳ ಒಪ್ಪಿಕೊಂಡು ನಿಶ್ಚಿತಾರ್ಥ ನಂತರ ಮದುವೆ ಸಹ ನಿಗದಿಯಂತೆ ಇದೇ ಶುಕ್ರವಾರ ನಡೆಯಬೇಕಿತ್ತು. ಆದರೆ, ಮದುವೆಯ ಮುನ್ನ ದಿನವಾದ ಗುರುವಾರ ರಾತ್ರಿ ವರನ ಬಂಡವಾಳ ಬಯಲಿಗೆ ಬಂದಿದೆ. ಮದುವೆಗೆ ವಧು ಸಜ್ಜಾಗುತ್ತಿದ್ದಳು. ಇತ್ತ, ವರ ಮೆರವಣಿಗೆ ಮೂಲಕ ಬಂದಿದ್ದ. ರಾತ್ರಿ 12 ಗಂಟೆ ಸುಮಾರಿಗೆ ಮದುವೆಯ ಪೂರ್ವದ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ವಧುವಿನ ಸಹೋದರನಿಗೆ ವರ ಅನಕ್ಷರಸ್ಥ ಎಂಬ ಅನುಮಾನ ಮೂಡಿತ್ತು.

ಇದನ್ನೂ ಓದಿ: ಲೆಹಂಗಾ ಸರಿಯಿಲ್ಲವೆಂದು ಮದುವೆಗೆ ಒಲ್ಲೆ ಎಂದ ವಧು..!

ಅಂತೆಯೇ, ಮದುವೆ ಮಾಡಿಸಲು ಬಂದಿದ್ದ ಪಂಡಿತರನ್ನು ಕರೆದು ವರನಿಗೆ ಹಣದ ನೋಟುಗಳನ್ನು ಎಣಿಕೆ ಮಾಡಲು ಹೇಳುವಂತೆ ಕೇಳಿದ್ದಾನೆ. ಇದಕ್ಕಾಗಿ ವರನಿಗೆ 10 ರೂಪಾಯಿ ನೋಟುಗಳು ಮತ್ತು 10 ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ನೀಡಲಾಗಿದೆ. ಆದರೆ, ಇವುಗಳನ್ನು ಎಣಿಸಲು ಸಾಧ್ಯವಾಗದೆ ವರ ಪೆಚ್ಚು ಮೊರೆ ಹಾಕಿಕೊಂಡಿದ್ದಾನೆ. ಈ ವಿಷಯವನ್ನು ಸಹೋದರ ಹೋಗಿ ತನ್ನ ಸಹೋದರಿಗೆ ತಿಳಿಸಿದ್ದಾನೆ. ಈ ವಿಷಯ ತಿಳಿದು ವಧು ಇದು ಜೀವನದ ವಿಷಯವಾಗಿದೆ. ಅನಕ್ಷರಸ್ಥ ವರನನ್ನು ಮದುವೆಯಾಗುವುದಿಲ್ಲ ಎಂದು ಪೋಷಕರ ಮುಂದೆ ಕಡ್ಡಿ ಮುರಿದಂತೆ ಹೇಳಿದ್ದಾಳೆ.

ಫಲಿಸದ ರಾಜಿ ಪಂಚಾಯಿತಿ: ವಧುವಿನ ಈ ನಿರ್ಧಾರದಿಂದ ಗಾಬರಿಗೊಂಡ ವರ ಕಡೆಯುವರು ವಧುವಿನ ಮನೆಯವರೊಂದಿಗೆ ಮಾತುಕತೆ ನಡೆಸಲು ಯತ್ನಿಸಿದ್ದಾರೆ. ಇದು ಫಲ ಕೊಡದೇ ಇದ್ದಾಗ ವರನ ಕಡೆಯವರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್​ ಕಮತಾ ಪ್ರಸಾದ್ ಸ್ಥಳಕ್ಕೆ ಆಗಮಿಸಿ, ನಂತರ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಚರ್ಚಿಸಿದ್ದಾರೆ. ಹಲವು ಗಂಟೆಗಳ ಕಾಲ ರಾಜಿ ಪಂಚಾಯಿತಿ ನಡೆದರೂ ಅದು ಫಲಿಸಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವರನ ಮೆರವಣಿಗೆ ಹಿಂತಿರುಗಿದೆ. ಈ ಮಾಹಿತಿಯನ್ನು ಕಮತಾ ಪ್ರಸಾದ್ ಕೂಡ ಖಚಿತಪಡಿಸಿದ್ದಾರೆ. ಇನ್ನು, ವಧು ಹೈಸ್ಕೂಲ್ ಪಾಸ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಧು ರವಾನಿಸಿದ WhatsApp ಸಂದೇಶ: ಮದುವೆ ಮುರಿದ ಶಾಂಪೂ!

Last Updated : Jan 22, 2023, 12:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.