ನವದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟಿಸುತ್ತಿರುವ ಸ್ಥಳಗಳಲ್ಲಿ ಗೃಹ ಸಚಿವಾಲಯವು ಜನವರಿ 29ರ ರಾತ್ರಿ 11ರಿಂದ ಅಂತರ್ಜಾಲ ಸ್ಥಗಿತಗೊಳಿಸಿದ್ದು, ಜನವರಿ 31ರ ರಾತ್ರಿ 11ರವರೆಗೂ ಅಂತರ್ಜಾಲ ಸೇವೆ ಸ್ಥಗಿತವಿರಲಿದೆ ಎಂದು ಮೂಲಗಳು ತಿಳಿಸಿವೆ.
ಸಿಂಘು, ಗಾಜಿಪುರ, ಟಿಕ್ರಿ ಮತ್ತು ಅವುಗಳ ಪಕ್ಕದ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ.
![farmers-stir-live-farmers-to-observe-day-long-fast-today](https://etvbharatimages.akamaized.net/etvbharat/prod-images/10431398_g.jpg)
ಎಲ್ಲ ಆಂದೋಲನ ತಾಣಗಳಿಗೆ ಅಂತರ್ಜಾಲ ಸೇವೆಗಳನ್ನು ಪುನಃಸ್ಥಾಪಿಸುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರತಿಭಟಿಸುತ್ತಿರುವ ರೈತರು ಇಂದು 'ಸದ್ಭಾವನಾ ದಿನ' ಆಚರಿಸುತ್ತಿದ್ದು, ದಿನವಿಡೀ ಉಪವಾಸ ನಡೆಸುತ್ತಿದ್ದಾರೆ. ಇದರಿಂದ ತಮ್ಮ ಆಂದೋಲನದ ಬಲ ಹೆಚ್ಚಾಗುತ್ತದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.