ETV Bharat / bharat

ಪ್ರೇಮವಿವಾಹ ಮಾಡಿಕೊಂಡ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: 5 ಲಕ್ಷ ರೂ. ದಂಡ - ರಾಜಸ್ಥಾನ

ಪ್ರೇಮ ವಿವಾಹ ಮಾಡಿಕೊಂಡ ಕಾರಣಕ್ಕೆ ಯುವಕನ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಿ 5 ಲಕ್ಷ ರೂ.ಗಳ ದಂಡ ವಿಧಿಸಿರುವ ವಿಲಕ್ಷಣ ಪ್ರಕರಣ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.

love marriage case
ಯುವಕನ ಕುಟುಂಬ ಬಹಿಷ್ಕಾರ
author img

By

Published : Mar 24, 2021, 10:06 AM IST

ಬಾರ್ಮರ್​( ರಾಜಸ್ಥಾನ): ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಭುಂಖ ಭಗತ್ ಸಿಂಗ್ ಗ್ರಾಮದ ವ್ಯಕ್ತಿಯೊಬ್ಬರ ಮಗ ಪ್ರೇಮ ವಿವಾಹ ಮಾಡಿಕೊಂಡ ಕಾರಣಕ್ಕೆ ಇಡೀ ಕುಟುಂಬವನ್ನು ಜಾತಿ ಪಂಚಾಯತ್ ಬಹಿಷ್ಕಾರ ಮಾಡಿದೆ. ಜೊತೆಗೆ ಈ ಕುಟುಂಬಕ್ಕೆ 5 ಲಕ್ಷ ರೂ. ದಂಡವನ್ನೂ ವಿಧಿಸಿದೆ.

ಭುಂಖ ಭಗತ್ ಸಿಂಗ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ಜಾತಿ ಪಂಚಾಯಿತಿಯು ಬಹಿಷ್ಕೃತ ಕುಟುಂಬಕ್ಕೆ 5 ಲಕ್ಷ ರೂ. ದಂಡ ಕಟ್ಟುವಂತೆ ಹೇಳಿದ್ದಾರೆ. ಕುಟುಂಬವು ದಂಡ ಕಟ್ಟಲು ನಿರಾಕರಿಸಿದ್ದರಿಂದ , ಈ ಕುಟುಂಬದ ಸದಸ್ಯರು ಊರಿನ ರಸ್ತೆಗಳು ಮತ್ತು ಸಾರ್ವಜನಿಕರು ಬಳಸುವ ನಳ, ಕೆರೆ, ಮುಂತಾದವುಗಳ ನೀರನ್ನು ಬಳಸುವುದನ್ನು ನಿಷೇಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕುಟುಂಬದ ಸಂತ್ರಸ್ತೆಯೊಬ್ಬರು ದಂಡವನ್ನು ಪಾವತಿಸಲು ಸಾಧ್ಯವಾಗದ ಕಾರಣ ನಮ್ಮನ್ನು ಗ್ರಾಮವು ಸಾಮಾಜಿಕವಾಗಿ ಬಹಿಷ್ಕರಿಸಿದೆ. ಅಂಗಡಿಯವರು ಸಹ ನಮಗೆ ದಿನಸಿ ಸಾಮಗ್ರಿಗಳನ್ನು ನೀಡುವುದಿಲ್ಲ ಎಂದು ಹೇಳಿದರು.

ಈ ಹಿನ್ನೆಲೆ ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಂತ್ರಸ್ತೆಯ ಕುಟುಂಬ ವಿಭಾಗೀಯ ಆಯುಕ್ತ ಡಾ.ರಾಜೇಶ್ ಶರ್ಮಾ, ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.