ETV Bharat / bharat

ಕಾನೂನಿನ ಕಣ್ಣಿಗೆ ಮಣ್ಣೆರಚಿದ ಯುವತಿ.. ಸುಳ್ಳು ರೇಪ್​ ಕೇಸ್​ ಹಾಕಿದ ಮೂವರಿಗೆ ಜೈಲು ಶಿಕ್ಷೆ - sentence for rape victim in Madhya Pradesh

ಮಧ್ಯಪ್ರದೇಶದಲ್ಲಿ ಹೈಕೋರ್ಟ್​ ಮತ್ತು ಪೊಲೀಸ್​ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಸುಳ್ಳು ಅತ್ಯಾಚಾರ ಆರೋಪ ಮಾಡಿದ್ದ ಯುವತಿ, ಆಕೆಯ ತಂದೆ ಮತ್ತು ಸಹೋದರನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

fake-rape-case-in-madhya-pradesh
ಸುಳ್ಳು ರೇಪ್​ ಕೇಸ್​ ಹಾಕಿದ ಮೂವರಿಗೆ ಜೈಲು ಶಿಕ್ಷೆ
author img

By

Published : Nov 3, 2022, 8:37 PM IST

ಗ್ವಾಲಿಯರ್(ಮಧ್ಯಪ್ರದೇಶ): ಸುಳ್ಳು ಅತ್ಯಾಚಾರ ಆರೋಪ ಮಾಡಿ, ಪೋಕ್ಸೋ ಕಾಯ್ದೆಯಡಿ ಯುವಕನ ಬಂಧನ ಮತ್ತು ಕಾನೂನು ದುರ್ಬಳಕೆ ಮಾಡಿಕೊಂಡ ಗರ್ಭಪಾತ ಮಾಡಿಸಿಕೊಂಡಿದ್ದ ಯುವತಿ, ಆಕೆಯ ತಂದೆ ಮತ್ತು ಸಹೋದರನಿಗೆ ಮಧ್ಯಪ್ರದೇಶದ ಗ್ವಾಲಿಯರ್​ ಹೈಕೋರ್ಟ್​ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪೊಲೀಸರು, ಹೈಕೋರ್ಟ್​ ಕಣ್ಣಿಗೆ ಮಣ್ಣೆರಚಿದ ಈ ಕೇಸ್​ ಮಧ್ಯಪ್ರದೇಶದಲ್ಲಿ ಭಾರಿ ಸದ್ದು ಮಾಡಿದೆ.

ಪ್ರಕರಣವೇನು?: 2021 ರ ಮಾರ್ಚ್​ನಲ್ಲಿ ಗ್ವಾಲಿಯರ್​ನ ದಾತಿಯಾದಲ್ಲಿ ಅತ್ಯಾಚಾರ ಕೇಸ್​ ದಾಖಲಾಗಿತ್ತು. ತನ್ನ ಮಗಳನ್ನು ಯುವಕನೊಬ್ಬ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದಾನೆ. ಆಕೆ ಅಪ್ರಾಪ್ತೆಯಾಗಿದ್ದು ಭವಿಷ್ಯದ ದೃಷ್ಟಿಯಿಂದ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವ್ಯಕ್ತಿ ನೀಡಿದ ದೂರಿನ ಮೇಲೆ ಸೋನು ಎಂಬ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು. ಬಳಿಕ ವಿಚಾರಣೆಯಲ್ಲಿ ಹೈಕೋರ್ಟ್​, ಅಪ್ರಾಪ್ತ ಬಾಲಕಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಗರ್ಭಪಾತಕ್ಕೆ ಅನುಮತಿ ನೀಡಿತ್ತು.

ಗರ್ಭಪಾತ ಬಳಿಕ ಉಲ್ಟಾ ಹೊಡೆದ ಕೇಸ್​: ನ್ಯಾಯಾಲಯದ ಆದೇಶದ ಮೇರೆಗೆ ಬಾಲಕಿಗೆ ಗರ್ಭಪಾತ ಮಾಡಿಸಲಾಗಿದೆ. ಬಳಿಕ ಪ್ರಕರಣ ತಿರುವು ಪಡೆದುಕೊಂಡಿದ್ದು, ಕೇಸ್​​ನಲ್ಲಿ ಬಂಧಿತನಾದ ವ್ಯಕ್ತಿಗೂ ಬಾಲಕಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ. ಬಾಲಕಿಯ ಡಿಎನ್​ಎ ಪರೀಕ್ಷೆ ನಡೆಸಿದಾಗ ಆರೋಪಿ ಯುವಕ ಇದರಲ್ಲಿ ಭಾಗಿಯಾಗಿಲ್ಲ ಎಂಬುದು ಗೊತ್ತಾಗಿದೆ.

ಡಿಎನ್​ಎಯಲ್ಲಿ ಸತ್ಯ ಬಯಲು: ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾದ ಬಾಲಕಿಗೆ ಗರ್ಭಪಾತ ಮಾಡಲಾಗಿತ್ತು. ಬಳಿಕ ಆರೋಪಿ ಯುವಕನ ಕುಟುಂಬಸ್ಥರು ಆಕೆಯ ಡಿಎನ್​ಎ ಪರೀಕ್ಷೆಗೆ ಒತ್ತಾಯಿಸಿದ್ದರು. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ತದ್ವಿರುದ್ಧ ಫಲಿತಾಂಶ ಬಂದಿದೆ. ಅಲ್ಲದೇ, ಯುವತಿ ಮತ್ತು ಆಕೆಯ ಕುಟುಂಬಸ್ಥರು ತಮ್ಮ ಹೇಳಿಕೆಗಳನ್ನು ಬದಲಿಸಿದ್ದಾರೆ. ಇನ್ನೊಂದು ಗಂಭೀರ ಸಂಗತಿಯೆಂದರೆ ಬಾಲಕಿ ಅಪ್ರಾಪ್ತೆಯಲ್ಲ ಎಂಬುದು ದೃಢಪಟ್ಟಿದೆ.

ಹೈಕೋರ್ಟ್​ನಿಂದ ಮರು ತನಿಖೆಗೆ ಆದೇಶ: ವೈದ್ಯಕೀಯ ಫಲಿತಾಂಶ ಮತ್ತು ಹೇಳಿಕೆಗಳ ಬದಲಿಸಿದ ಕಾರಣಕ್ಕಾಗಿ ಪ್ರಕರಣದ ಮರು ತನಿಖೆಗೆ ಕೋರ್ಟ್​ ಸೂಚಿಸಿ, ಬಾಲಕಿ ಮತ್ತು ಕುಟುಂಬಸ್ಥರಿಗೆ ಸಮನ್ಸ್​ ನೀಡಿತ್ತು. ಅದರಂತೆ ತನಿಖೆ ನಡೆಸಿದಾಗ ಬಾಲಕಿ ತನ್ನ ಮೇಲೆ ಬಂಧಿತ ಯುವಕ ಅತ್ಯಾಚಾರ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಇದಲ್ಲದೇ ಕುಟುಂಬಸ್ಥರು ಹೇಳಿಕೆ ಬದಲಿಸಿದ್ದಾರೆ.

ಪ್ರಕರಣ ತಿರುವು ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ, ಯುವತಿ ತನ್ನ ಸಹೋದರ ಸಂಬಂಧಿಯೊಂದಿಗೆ ಸಖ್ಯ ಬೆಳೆಸಿಕೊಂಡು ಗರ್ಭಿಣಿಯಾಗಿದ್ದಳು. ಇದು ಕುಟುಂಬ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ಬೇರೊಬ್ಬನ ಮೇಲೆ ಆತ್ಯಾಚಾರ ಆರೋಪಿ ಹೊರೆಸಿ ಕೇಸ್​ ದಾಖಲಿಸಿದ್ದು ತಿಳಿದು ಬಂದಿದೆ.

ಯುವತಿಯ ಗರ್ಭಪಾತಕ್ಕೆ ಅನುಮತಿ ಸಿಗುವುದಿಲ್ಲ ಎಂದು ಅತ್ಯಾಚಾರ ಆರೋಪ ಹೆಣೆದ ಕುಟುಂಬ ಅದೇ ಗ್ರಾಮದ ಯುವಕನ ಮೇಲೆ ಆರೋಪಿಸಿ ಕೇಸ್​ ದಾಖಲಿಸಿತ್ತು. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಕುಟುಂಬ ಆತನ ಬಂಧನವಾಗಿ, ಯುವತಿಯ ಗರ್ಭಪಾತವಾಗುವಂತೆ ನೋಡಿಕೊಂಡಿದ್ದರು.

ಸಹೋದರ ಸಂಬಂಧಿಯ ಜೊತೆಗಿನ ಸಖ್ಯದಿಂದಾಗಿ ಯುವತಿ ಗರ್ಭಿಣಿಯಾಗಿದ್ದನ್ನು ತಪ್ಪಿಸಲು ಕಾನೂನನ್ನು ದುರ್ಬಳಕೆ ಮಾಡಿಕೊಂಡ ಯುವತಿ, ಆಕೆಯ ತಂದೆ ಮತ್ತು ಸಹೋದರನ ವಿರುದ್ಧ ಕಿಡಿಕಾರಿದ ಹೈಕೋರ್ಟ್​ ಮೂವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಓದಿ: ಹತ್ಯೆ ಆರೋಪಿ ಭಾರತೀಯನ ತಲೆಗೆ ₹5.25 ಕೋಟಿ ಕಟ್ಟಿದ ಆಸ್ಟ್ರೇಲಿಯಾ ಪೊಲೀಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.