ETV Bharat / bharat

ಭಾರತೀಯ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ!.. - ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ಸೂಚನೆ

ಅಸ್ಸೋಂದ ಬಾರ್ಪೇಟಾ ಜಿಲ್ಲೆಯಲ್ಲಿ ನಿವೃತ್ತ ಸೇನಾಧಿಕಾರಿಯಾದ ಅಬ್ದುಲ್ ಹಮೀದ್ ಅವರಿಗೆ ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಬಾರ್ಪೇಟಾದ ವಿದೇಶಿ ನ್ಯಾಯಮಂಡಳಿ ನೋಟಿಸ್ ಸಹ ಜಾರಿ ಮಾಡಿದೆ

ex-indian-army-man-in-assam-who-fought-kargil-asked-to-prove-citizenship
ಭಾರತೀಯ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ
author img

By

Published : Jan 6, 2023, 8:56 PM IST

ಬಾರ್ಪೇಟಾ (ಅಸ್ಸೋಂ): ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್​ಆರ್​ಸಿ) ಕಾಯ್ದೆಯು ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೂ ಕಾರಣವಾಗಿತ್ತು. ಎರಡು ವರ್ಷಗಳ ಹಿಂದೆ ಈ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ಹೋರಾಟಗಳು ನಡೆದಿದ್ದವು. ಇದೇ ವೇಳೆ, ಈ ಕಾಯ್ದೆಗಳು ಪರವಾಗಿಯೂ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಇದರಲ್ಲೂ ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್​ಆರ್​ಸಿ)ಯು ಈಶಾನ್ಯ ರಾಜ್ಯವಾದ ಅಸ್ಸೋಂದಲ್ಲಿ ಮೊದಲಿಗೆ ಜಾರಿಯಾಗಿದ್ದು, ಅನೇಕ ಜನರಿಗೆ ತಮ್ಮ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಮತ್ತೊಬ್ಬ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಗೂ ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಆದೇಶಿಸಲಾಗಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಜಾರಿಗೆ ತರುವುದಿಲ್ಲ: ಅಮಿತ್​ ಶಾಗೆ ಪಿಣರಾಯಿ ತಿರುಗೇಟು

ಅಸ್ಸೋಂದ ಬಾರ್ಪೇಟಾ ಜಿಲ್ಲೆಯಲ್ಲಿ ನಿವೃತ್ತ ಸೇನಾಧಿಕಾರಿಯಾದ ಅಬ್ದುಲ್ ಹಮೀದ್ ಅವರಿಗೆ 'ಸಂಶಯಾಸ್ಪದ ನಾಗರಿಕ' ಎಂದು ಗುರುತನ್ನು ಟ್ಯಾಗ್ ಮಾಡಲಾಗಿದೆ. ಇದರಿಂದ 28 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದ ಅವರು ಅವಮಾನಕ್ಕೆ ಒಳಗಾಗುವಂತೆ ಆಗಿದೆ. ಭಾರತೀಯ ಪೌರತ್ವವನ್ನು ಸಾಬೀತುಪಡಿಸುವಂತೆ ತಮಗೆ ನೋಟಿಸ್ ಬಂದ ತಕ್ಷಣ ಅವರು ಆಶ್ಚರ್ಯಕ್ಕೂ ಒಳಗಾಗಿದ್ದಾರೆ. ಅಲ್ಲದೇ, ಈ ವಿಷಯವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸದಂತೆಯೂ ಮಾಜಿ ಸೇನಾಧಿಕಾರಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಯಾರು ಈ ಅಬ್ದುಲ್​ ಹಮೀದ್​?: ಭಾರತೀಯ ಸೇನೆಯಲ್ಲಿ ಸುದೀರ್ಘವಾದ 28 ವರ್ಷಗಳ ಕಾಲ ಸೇವೆಯನ್ನು ಬಾರ್ಪೇಟಾ ಜಿಲ್ಲೆಯ ಅಬ್ದುಲ್ ಹಮೀದ್ ಸಲ್ಲಿಸಿದ್ದಾರೆ. 1992ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಇವರು, 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧದಲ್ಲಿಯೂ ಹೋರಾಡಿದ್ದಾರೆ. ಸದ್ಯ ಸೇನೆಯಿಂದ ಅಬ್ದುಲ್ ಹಮೀದ್ ನಿವೃತ್ತಿ ಹೊಂದಿದ್ದಾರೆ. ಇದೀಗ ಅಬ್ದುಲ್ ಹಮೀದ್ ಅವರಿಗೆ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಬಾರ್ಪೇಟಾದ ವಿದೇಶಿ ನ್ಯಾಯಮಂಡಳಿ ನೋಟಿಸ್ ನೀಡಿದೆ. 2003ರಲ್ಲಿ ಬಾರ್ಪೇಟಾ ಗಡಿ ಪೊಲೀಸರು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಈ ನೋಟಿಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 15 ವರ್ಷಗಳಲ್ಲಿ ಭಾರತದ ಪೌರತ್ವ ಪಡೆದ ಚೀನಿಯರೆಷ್ಟು? ಕೇಂದ್ರದ ಮಾಹಿತಿ ಹೀಗಿದೆ..

ಈ ಹಿಂದೆ ಕೂಡ ಭಾರತೀಯ ಸೇನೆಯ ಮಾಜಿ ಯೋಧರಿಗೆ ತಮ್ಮ ಪೌರತ್ವ ಸಾಬೀತು ಪಡಿಸಲು ಸೂಚಿಸಿರುವ ಬಗ್ಗೆ ವರದಿಯಾಗಿದ್ದವು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಮೊಹಮ್ಮದ್ ಅಜ್ಮಲ್ ಹಕ್ ಮತ್ತು ಮೊಹಮ್ಮದ್ ಸನಾವುಲ್ಲಾ ಎಂಬುವವರಿಗೂ ತಮ್ಮ ಪೌರತ್ವ ಸಾಬೀತು ಮಾಡುವಂತೆ ಸೂಚನೆ ನೀಡಲಾಗಿತ್ತು. ಮಾಜಿ ಯೋಧರಿಗೆ ಇಂತಹ ನೋಟಿಸ್​ಗಳು ಜಾರಿಯಾದ ಕಾರಣಕ್ಕೆ ಪ್ರತಿಪಕ್ಷಗಳಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕೋವಿಡ್​ನಂತರ ಹೋರಾಟ ಶಾಂತಿ: ದೇಶ ವ್ಯಾಪ್ತಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ನಡೆಯುತ್ತಿದ್ದ ಹೋರಾಟ ಕೋವಿಡ್​ ಹಾವಳಿ ಶುರುವಾದ ನಂತರದಲ್ಲಿ ಶಾಂತವಾಗಿತ್ತು. ಇದರ ನಡುವೆ ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್​ ಶಾ, ಕೋವಿಡ್​ ಲಸಿಕೆ ಕಾರ್ಯ ಸಂಪೂರ್ಣವಾದ ಬಳಿಕ ಪೌರತ್ವ ಕಾಯ್ದೆದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದಿದ್ದರು. ಅಲ್ಲದೇ, ಕಳೆದ ನವೆಂಬರ್​ನಲ್ಲಿ ನಡೆದ ಗುಜರಾತ್​ ಚುನಾವಣೆ ಸಂದರ್ಭದಲ್ಲೂ ಪೌರತ್ವದ ವಿಷಯ ಮುನ್ನಲೆಗೆ ಬಂದಿತ್ತು.

ಆಗ ಮಾತನಾಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಗುಜರಾತ್​ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿಎಎ ಜಾರಿಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಆದರೆ, ನಮ್ಮ ಪಶ್ಚಿಮ ಬಂಗಾಳದಲ್ಲಿ ಇದನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಮಮತಾ ಹೇಳಿಕೆ ನೀಡಿದ್ದರು. ಕೇರಳ ಮುಖ್ಯಮಂತ್ರಿ ಸಹ ಪಿಣರಾಯಿ ವಿಜಯನ್ ಸಹ ತಮ್ಮ ಸರ್ಕಾರ ಸಿಎಎ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಸಿಎಎ ಕಾಯ್ದೆ: ಇನ್ನೂ ಸಿದ್ಧವಾಗದ ನಿಯಮಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.