ETV Bharat / bharat

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭೇಟಿ ಮಾಡಿದ ಯುರೋಪಿಯನ್​ ನಿಯೋಗ - European Delegation met LG Manoj Sinha at kashmira

ಎರಡು ದಿನಗಳ ಪ್ರವಾಸದಲ್ಲಿರುವ ಯುರೋಪಿಯನ್​ ನಿಯೋಗವು ರಾಜ ಭವನಕ್ಕೆ ತೆರಳಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿದೆ.

European Delegation met LG Manoj Sinha
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರನ್ನು ಭೇಟಿ ಮಾಡಿದ ಯುರೋಪಿಯನ್​ ನಿಯೋಗ
author img

By

Published : Feb 18, 2021, 4:43 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಎರಡು ದಿನಗಳ ಪ್ರವಾಸದಲ್ಲಿದ್ದ ಯುರೋಪಿಯನ್​​ ನಿಯೋಗ ಗುರುವಾರ ಬೆಳಗ್ಗೆ ಶ್ರೀನಗರದಿಂದ ಹೊರಟು ಜಮ್ಮು ತಲುಪಿ, ನಂತರ ರಾಜ ಭವನಕ್ಕೆ ತೆರಳಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿದೆ.

ಯುರೋಪಿಯನ್​ ನಿಯೋಗದ ಭೇಟಿ ಕುರಿತು ಮಾಹಿತಿ

ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡುವ ಮೊದಲು, ನಿಯೋಗದ ಸದಸ್ಯರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನು ಭೇಟಿ ಮಾಡಿದರು.

ಗುರುವಾರ ಸಂಜೆ ದೆಹಲಿಗೆ ತೆರಳುವ ಮೊದಲು ನಿಯೋಗವು ಡಿಡಿಸಿ ಅಧ್ಯಕ್ಷರು, ಪಂಚಾಯಿತಿ ಪ್ರತಿನಿಧಿಗಳು ಮತ್ತು ಆಡಳಿತದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

European Delegation met LG Manoj Sinha
ನಿಯೋಗದ ಸದಸ್ಯರು

ಓದಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಂಜನ್ ಗೊಗೊಯ್ ನಿರ್ದೋಷಿ ಎಂದ ಸುಪ್ರೀಂ!

ಬುಧವಾರ ರಾಜತಾಂತ್ರಿಕರ ನಿಯೋಗವು ಶ್ರೀನಗರ ಮತ್ತು ಬುಡ್ಗಾಮ್‌ನ ಆಯ್ದ ರಾಜಕೀಯ ಪಕ್ಷಗಳ ಮುಖಂಡರು, ಹೊಸದಾಗಿ ಆಯ್ಕೆಯಾದ ಡಿಡಿಸಿ ಅಧ್ಯಕ್ಷರು, ಪಂಚಾಯತ್ ಸದಸ್ಯರು, ಮೇಯರ್ ಮತ್ತು ಶ್ರೀನಗರ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಇತರ ಸಾರ್ವಜನಿಕ ನಿಯೋಗಗಳನ್ನು ಭೇಟಿಯಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.