ಮೇಷ: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಅದೃಷ್ಟವು ಬಲಗೊಳ್ಳುತ್ತದೆ. ಹಳೆಯ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಗೌರವದಲ್ಲಿ ವೃದ್ಧಿ ಉಂಟಾಗಲಿದೆ. ವಿದ್ಯಾರ್ಥಿಗಳು ಯಶಸ್ಸು ಗಳಿಸಲಿದ್ದಾರೆ ಹಾಗೂ ಏನಾದರೂ ಹೊತಸತನ್ನು ಕಲಿಯಲು ಉತ್ತೇಜನ ಪಡೆಯಲಿದ್ದಾರೆ. ಮಕ್ಕಳ ಪಾಲಿಗೆ ಇದು ಸಮೃದ್ಧ ಸಮಯ ಎನಿಸಲಿದೆ. ಈ ತಿಂಗಳಿನಲ್ಲಿ ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ತಂದೆಯ ಆರೋಗ್ಯದ ಕುರಿತು ಗಮನ ಹರಿಸಿ. ಪರಿಹಾರ: ಪ್ರತಿ ದಿನವೂ ಗಾಯತ್ರಿ ಮಂತ್ರವನ್ನು ಪಠಿಸಿ.
ವೃಷಭ: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ವೃಷಭ ರಾಶಿಯವರ ಕೌಟುಂಬಿಕ ಬದುಕಿನಲ್ಲಿ ಏನಾದರೂ ವಿವಾದ ಉಂಟಾಗಬಹುದು. ಸದ್ಯಕ್ಕೆ ನೀವು ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತಡೆಹಿಡಿಯಬೇಕು. ಸದ್ಯಕ್ಕೆ ಕಾನೂನಿಗೆ ಸಂಬಂಧಿಸಿದ ವಿಷಯಗಳಿಂತ ಅಂತರ ಕಾಪಾಡಿ. ಈ ತಿಂಗಳಿನಲ್ಲಿ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸನ್ನು ಪಡೆಯಲಿದ್ದೀರಿ. ಪರಿಹಾರ: ಸೂರ್ಯ ದೇವರಿಗೆ ಪ್ರತಿ ದಿನವೂ ಪ್ರಸಾದ ಅರ್ಪಿಸಿ.
ಮಿಥುನ:ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಒತ್ತಡ ಉಂಟಾಗಬಹುದು. ನಿಮ್ಮ ಸಂಗಾತಿಯ ಜೊತೆ ಮಾತನಾಡುವಾಗ ನೀವು ಅಹಂಕಾರದಿಂದ ವರ್ತಿಸಬಹುದು. ಇನ್ನೊಂದೆಡೆ, ವ್ಯವಹಾರದ ವಿಚಾರದಲ್ಲಿ ನೀವು ಯಶಸ್ಸು ಗಳಿಸಬಹುದು. ನಿಮ್ಮ ವ್ಯವಹಾರ ಪಾಲುದಾರರೊಂದಿಗೆ ಮಾತನಾಡುವಾಗ ನೀವು ಕೋಪಗೊಳ್ಳಬಹುದು. ಕೆಲಸದಲ್ಲಿ ಹೆಚ್ಚಳ ಉಂಟಾಗಬಹುದು. ಪ್ರಯಾಣದ ಯೋಜನೆ ಮಾಡಬಹುದು. ಪರಿಹಾರ - ಸೂರ್ಯಾಷ್ಟಕ ಪಠಿಸಿ.
ಕರ್ಕಾಟಕ:ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ಈ ತಿಂಗಳಿನಲ್ಲಿ ನಿಮ್ಮ ವ್ಯವಹಾರದಲ್ಲಿ ಗಣನೀಯ ವೃದ್ಧಿ ಉಂಟಾಗಲಿದೆ. ನಿಮ್ಮ ಶತ್ರು ನಿಮ್ಮ ಮೇಲೆ ಮೇಲುಗೈ ಸಾಧಿಸಬಹುದು. ಉದ್ಯೋಗದಲ್ಲಿರುವವರಿಗೆ ಸ್ವಲ್ಪ ನಿರಾಳತೆ ಸಿಗಬಹುದು. ವಿದೇಶದಲ್ಲಿ ಕೆಲಸಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಲಾಭ ಗಳಿಸಲಿದ್ದೀರಿ. ನೀವು ಸರ್ಕಾರಿ ಕೆಲಸದಲ್ಲಿ ಲಾಭ ಪಡೆಯಲಿದ್ದೀರಿ. ಹೊಸ ಕಾಮಗಾರಿಯಲ್ಲಿ ಕೆಲಸ ಮಾಡಲು ನೀವು ಅವಕಾಶ ಪಡೆಯಲಿದ್ದೀರಿ. ಪರಿಹಾರ - ಪ್ರತಿ ದಿನ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
ಸಿಂಹ:ಸೂರ್ಯನು ಈಗ ಧನು ರಾಶಿಗೆ ಪ್ರವೇಶಿಸುವುದರಿಂದ ವಿದ್ಯಾರ್ಥಿಗಳಿಗೆ ಇದು ಲಾಭದಾಯಕ ಸಮಯ. ನಿಮ್ಮ ಸುತ್ತಲಿನ ಜನರಿಂದ ನೀವು ಗೌರವ ಪಡೆಯಲಿದ್ದೀರಿ. ನಿಮ್ಮ ಸಾಮಾಜಿಕ ವರ್ತುಲದಲ್ಲಿ ವೃದ್ಧಿಯಾಗಲಿದೆ. ಪ್ರೇಮ ವ್ಯವಹಾರಕ್ಕೆ ಇದು ಸ್ವಲ್ಪ ಸವಾಲಿನ ಸಮಯ. ಈ ಸಮಯದಲ್ಲಿ ನಿಮ್ಮ ಪ್ರೇಮ ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಪರಿಹಾರ - ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
ಕನ್ಯಾ: ಧನು ಸಂಕ್ರಾಂತಿಯ ನಂತರ ಒಂದು ತಿಂಗಳ ಕಾಲ ಕನ್ಯಾ ರಾಶಿಯವರು ಕೌಟುಂಬಿಕ ಬದುಕಿನಲ್ಲಿ ಒತ್ತಡ ಎದುರಿಸಬಹುದು. ಈ ಸಂದರ್ಭದಲ್ಲಿ ನೀವು ಕಾರ್ಯಸ್ಥಳದಲ್ಲಿ ಪ್ರಯೋಜನ ಗಳಿಸಲಿದ್ದೀರಿ. ಆದರೆ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲಸದಲ್ಲಿ ಒಂದಷ್ಟು ಸಮಸ್ಯೆ ಉಂಟಾಗಲಿದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯ ಚೆನ್ನಾಗಿರಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕಾದ ಅಗತ್ಯವಿದೆ. ಪರಿಹಾರ - ಸೂರ್ಯಾಷ್ಟಕ ಪಠಿಸಿ.
ತುಲಾ: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಶುಭ ಫಲ ದೊರೆಯಲಿದೆ. ಈ ಹಂತದಲ್ಲಿ ಬಾಕಿ ಇರುವ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಈ ತಿಂಗಳಿನಲ್ಲಿ ನೀವು ನಿಮ್ಮ ಅನೇಕ ಹಳೆಯ ಸಮಸ್ಯೆಗಳಿಂದ ಹೊರ ಬರಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಈ ತಿಂಗಳಿನಲ್ಲಿ ನೀವು ಪ್ರಯಾಣಕ್ಕೆ ಯೋಜನೆ ರೂಪಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳ ಜೊತೆಗಿನ ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ಪರಿಹಾರ - ಸೂರ್ಯ ದೇವರಿಗೆ ಪ್ರಸಾದ ಅರ್ಪಿಸಿ.
ವೃಶ್ಚಿಕ: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಸಾಮಾನ್ಯ ಸಂದರ್ಭಕ್ಕಿಂತಲೂ ಹೆಚ್ಚಿನ ಶುಭ ಫಲ ದೊರೆಯಲಿದೆ. ಈ ಸಂದರ್ಭದಲ್ಲಿ ನಿಮ್ಮ ಮಾತು ಒರಟಾಗುವುದಲ್ಲದೆ ಕುಟುಂಬದ ಸದಸ್ಯರ ಜೊತೆಗೆ ಒಂದಷ್ಟು ವಾದ ವಿವಾದ ಉಂಟಾಗಬಹುದಾದರೂ ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಗಳಿವೆ. ನಿಮ್ಮ ಕೈಗೆ ಹಣ ಸೇರಲಿದೆ. ಪರಿಹಾರ - ಪ್ರತಿ ದಿನ ಗಾಯತ್ರಿ ಚಾಲೀಸಾ ಪಠಿಸಿ.
ಧನು: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಅಹಂ ಹೆಚ್ಚಲಿದೆ. ಜೀವನ ಸಂಗಾತಿಯ ಜೊತೆಗೆ ಅಭಿಪ್ರಾಯ ಭೇದ ಉಂಟಾಗಬಹುದು. ಈ ಸಂದರ್ಭದಲ್ಲಿ ನಿಮಗೆ ಅದೃಷ್ಟದ ಬೆಂಬಲ ದೊರೆಯಲಿದ್ದು ನಿಮ್ಮ ಉತ್ಸಾಹವನ್ನು ಎತ್ತಿ ಹಿಡಿಯಲಿದೆ. ಈ ತಿಂಗಳಿನಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಈ ಆತ್ಮವಿಶ್ವಾಸದೊಂದಿಗೆ ನೀವು ಅನೇಕ ಕೆಲಸವನ್ನು ಸುಲಭದಲ್ಲಿ ಪೂರ್ಣಗೊಳಿಸಲಿದ್ದೀರಿ. ಪರಿಹಾರ - ಪ್ರತಿ ದಿನವೂ ಸೂರ್ಯ ದೇವರ ಹನ್ನೆರಡು ಹೆಸರುಗಳನ್ನು ಪಠಿಸಿ.
ಮಕರ: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಈ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚಿನಲ್ಲಿ ಹೆಚ್ಚಳ ಉಂಟಾಗಲಿದೆ. ಈ ಸಂದರ್ಭದಲ್ಲಿ ದೊಡ್ಡ ಸ್ಥಳದಲ್ಲಿ ಹೂಡಿಕೆ ಮಾಡುವುದು ನಿಮ್ಮ ಪಾಲಿಗೆ ಅಪಾಯಕಾರಿ ಎನಿಸಲಿದೆ. ಕೆಲಸದ ಸ್ಥಳದಲ್ಲಿ ಈ ವೇಳೆ ಬಿರುಸು ಕಾಣಿಸಿಕೊಳ್ಳಲಿದೆ. ಪರಿಹಾರ - ಪ್ರತಿ ದಿನವೂ ಗಾಯತ್ರಿ ಮಂತ್ರವನ್ನು ಪಠಿಸಿ.
ಕುಂಭ: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ಕುಂಭ ರಾಶಿಯವರು ಅದ್ಭುತ ಲಾಭ ಗಳಿಸಲಿದ್ದಾರೆ. ಸರ್ಕಾರಿ ಕ್ಷೇತ್ರದಲ್ಲಿ ಮಾಡಿದ ಕೆಲಸದಿಂದ ಅತ್ಯುತ್ತಮ ಲಾಭ ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸದಲ್ಲಿಯೂ ವೃದ್ಧಿ ಉಂಟಾಗಲಿದೆ. ಆದಾಯದಲ್ಲೂ ಹೆಚ್ಚಳ ಉಂಟಾಗಲಿದೆ. ವ್ಯವಹಾರದಲ್ಲಿ ನೀವು ಲಾಭ ಗಳಿಸಲಿದ್ದೀರಿ. ಈ ಸಂದರ್ಭದಲ್ಲಿ ನಿಮ್ಮ ಪೋಷಕರನ್ನು ನೀವು ಗೌರವಿಸಬೇಕು ಮತ್ತು ಅವರ ಸೂಚನೆಯಂತೆ ನಡೆದುಕೊಳ್ಳಬೇಕು. ಪರಿಹಾರ - ಸೂರ್ಯ ದೇವರಿಗೆ ಪ್ರಸಾದ ಅರ್ಪಿಸಿ.
ಮೀನ: ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಭಡ್ತಿ ದೊರೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಕಚೇರಿ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಅದೃಷ್ಟ ನಿಮ್ಮ ಪಾಲಿಗೆ ಇರಲಿದೆ. ಈ ಸಂದರ್ಭದಲ್ಲಿ ಪ್ರಯಾಣವನ್ನೂ ಕೈಗೆತ್ತಿಕೊಳ್ಳಬಹುದು. ಪರಿಹಾರ - ಆದಿತ್ಯ ಹೃದಯ ಸ್ತೋತ್ರ ಪಠಿಸಿದರೆ ನಿಮಗೆ ಒಳ್ಳೆಯದಾಗುತ್ತದೆ.