ETV Bharat / bharat

ಅಪ್ರಾಪ್ತೆ ಮೇಲೆ 10 ಕಾಮುಕರಿಂದ ಅತ್ಯಾಚಾರ.. ಆರೋಪಿಗಳ ಬಂಧಿಸಿದ ಪೊಲೀಸರು - ನಾಗ್ಪುರದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ

8ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ಬಾಲಕಿಯೊಬ್ಬರ ಮೇಲೆ 10 ಕಾಮುಕರು ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

gang rape in Nagpur
gang rape in Nagpur
author img

By

Published : Jul 28, 2022, 8:25 PM IST

ನಾಗ್ಪುರ (ಮಹಾರಾಷ್ಟ್ರ): ದೇಶದಲ್ಲಿ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣ ಮುಂದುವರೆದಿದ್ದು, ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲೂ ಇಂತಹದೊಂದು ಹೇಯ ಘಟನೆ ನಡೆದಿದೆ. 11 ವರ್ಷದ ಬಾಲಕಿ ಮೇಲೆ 10 ಮಂದಿ ಕಾಮುಕರು ದುಷ್ಕೃತ್ಯವೆಸಗಿದ್ದು, ಎಲ್ಲ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗ್ಪುರ ಜಿಲ್ಲೆಯ ಉಮ್ರೆಡ್‌ನಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಎಸಗಿದ ಆರೋಪದ ಮೇಲೆ ಹತ್ತು ಆರೋಪಿಗಳನ್ನ ಉಮ್ರೆಡ್ ಪೊಲೀಸರು ನಿನ್ನೆ ಬಂಧನ ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ!?: ನಾಗ್ಪುರ ಜಿಲ್ಲೆಯ ಉಮ್ರೆಡ್​ನಲ್ಲಿ ನಡೆದ ಶುಭಂ ದಮ್ದು ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ಮೂವರು ಆರೋಪಿಗಳು 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಇತರ ಆರೋಪಿಗಳು ಬಾಲಕಿ ಮೇಲೆ ದುಷ್ಕೃತ್ಯವೆಸಗಿ, ಅವರಿಗೆ ಬೆದರಿಕೆ ಹಾಕಿದ್ದಾರೆ.

ಪೊಲೀಸರ ಮುಂದೆ ಹೇಳಿಕೊಂಡ ಸಂತ್ರಸ್ತೆ: 8ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯನ್ನ ರೋಷನ್​ ಮನೆಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಬೆದರಿಕೆ ಹಾಕಿದ್ದು, 300 ರೂ ನೀಡಿ ಮನೆಗೆ ಕಳುಹಿಸಿದ್ದಾರೆ. ಇದರ ಬಗ್ಗೆ ಬಾಲಕಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿರಿ: ವರ್ಷಕ್ಕೆ ₹3 ಕೋಟಿಯ ಪ್ಯಾಕೇಜ್​​.. ಕೇರಳ ವಿದ್ಯಾರ್ಥಿಗೆ ಬಹುರಾಷ್ಟ್ರೀಯ ಕಂಪನಿಯಿಂದ ಬಿಗ್​ ಆಫರ್​!

ಅತ್ಯಾಚಾರದಲ್ಲಿ ಕೊಲೆ ಆರೋಪಿ ಆರೋಪಿ ರೋಷನ್, ಗಜಾನನ ದಾಮೋಧರ್ ಮುರುಸ್ಕರ್, ಪ್ರೇಮದಾಸ್ ಜಾಗೋಬ ಗತಿಬಂಧೆ, ರಾಕೇಶ್ ಶಂಕರ್ ಮಹಾಕಾಲ್ಕರ್, ಮಯೂರ್ ಭಾಸ್ಕರ್ ದಲಾಲ್, ಗೋವಿಂದ್ ಗುಲಾಬ್ ನಾಟೆ, ನಿಖಿಲ್ ವಿನಾಯಕ್ ನರುಳೆ, ಸೌರಭ್ ಉತ್ತಮ್ ರಿಥೆ, ನಿತೇಶ್ ಅರುಣ್ ಫುಕಾಟ್, ಪ್ರದ್ಯುಮ್ನ ದಿಲೀಪ್ ಕರುತ್ಕರ್ ಭಾಗಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.