ETV Bharat / bharat

ಭಾರತೀಯ ರೈಲ್ವೆ ಲಾಭದ ಮನಸ್ಥಿತಿಯಿಂದ ಹೊರಬರಲಿ; ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಿರಲಿ - ಪ್ಯಾಸೆಂಜರ್​ ರೈಲುಗಳಿಗೆ ಎಸಿ ಕೋಚ್‌

ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರ ಪ್ರಯೋಜನಗಳಿಗೆ ನಿಜವಾಗಿಯೂ ಆದ್ಯತೆ ನೀಡಬೇಕಾದರೆ, ತನ್ನ ಗಮನವನ್ನು ಲಾಭದಿಂದ ದೂರವಿರಿಸಬೇಕು, ದರಗಳನ್ನು ಸಂಪೂರ್ಣವಾಗಿ ತರ್ಕಬದ್ಧಗೊಳಿಸಬೇಕು ಹಾಗು ಸುರಕ್ಷತೆಗೆ ವಿಶೇಷ ಒತ್ತು ನೀಡಬೇಕಿದೆ.

ಭಾರತೀಯ ರೈಲ್ವೆ
ಭಾರತೀಯ ರೈಲ್ವೆ
author img

By

Published : Jul 12, 2023, 8:54 AM IST

ಹೆಚ್ಚಿದ ಪ್ರಯಾಣ ಶುಲ್ಕದ ಪರಿಣಾಮ ಭಾರತೀಯ ರೈಲ್ವೆ ಸೇವೆಗಳಿಂದ ಬಡವರು ಮತ್ತು ದೀನ-ದಲಿತರು ವಂಚಿತರಾಗುವ ಸಾಧ್ಯತೆಯ ಬಗ್ಗೆ ಲೋಕಸಭೆಯಲ್ಲಿ ತಮಿಳುನಾಡಿನ ಸಂಸದ ಡಿ.ಎಂ.ಕತಿರ್ ಆನಂದ್ ಅವರು ಪ್ರಶ್ನೆ ಕೇಳಿದ್ದರು. ಕೇಂದ್ರ ಸರ್ಕಾರವು ಅಂಥ ಪರಿಸ್ಥಿತಿಯನ್ನು ನಿರಾಕರಿಸಿತ್ತು. ಆದರೆ, ವಾಸ್ತವವಾಗಿ ರೈಲುಗಳನ್ನು 'ಎಕ್ಸ್‌ಪ್ರೆಸ್' ಎಂದು ಬದಲಾಯಿಸಿರುವ ರೈಲ್ವೆ ಇಲಾಖೆ, ಪರೋಕ್ಷವಾಗಿ ಟಿಕೆಟ್ ದರಗಳನ್ನು ಹೆಚ್ಚಿಸಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಪ್ರಯಾಣ ಕಷ್ಟವಾಗುತ್ತಿದೆ.

ಬಡವರು, ವಲಸೆ ಕಾರ್ಮಿಕರು ಮತ್ತು ಕೆಳ, ಮಧ್ಯಮ ವರ್ಗದವರು ಬಳಸುವ ಸಾಮಾನ್ಯ ಸ್ಲೀಪರ್ ಕೋಚ್‌ಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಇದಕ್ಕೆ ಬದಲಾಗಿ ಅನೇಕ ಪ್ಯಾಸೆಂಜರ್​ ರೈಲುಗಳಿಗೆ ಎಸಿ ಕೋಚ್‌ಗಳನ್ನು ಸೇರಿಸಲಾಗುತ್ತಿದೆ. ಇದು ದೀರ್ಘ ಪ್ರಯಾಣದಲ್ಲಿ ಸಾಮಾನ್ಯ ಜನರಿಗೆ ಅನನುಕೂಲತೆ ಉಂಟುಮಾಡಬಲ್ಲದು. 'ತತ್ಕಾಲ್' ಯೋಜನೆಯ ಮೂಲಕ ಟಿಕೆಟ್ ದರದಲ್ಲಿ 30-90 ಪ್ರತಿಶತ ಹೆಚ್ಚು ಶುಲ್ಕ ವಿಧಿಸುವ ಮೂಲಕ ಪ್ರಯಾಣಿಕರ ಶೋಷಣೆ ನಡೆಯುತ್ತಿದೆ. ಬೇಡಿಕೆಗನುಗುಣವಾಗಿ ದರಗಳನ್ನು ಸರಿಹೊಂದಿಸುವ "ಫ್ಲೆಕ್ಸಿ ಫೇರ್" ನೀತಿಯು ಭಾರತೀಯ ರೈಲ್ವೆಯ ವಾಣಿಜ್ಯ ಸ್ವರೂಪವನ್ನು ಮತ್ತಷ್ಟು ಪ್ರತಿಬಿಂಬಿಸುತ್ತದೆ. ವಿಷಯಗಳನ್ನು ಸಂಕೀರ್ಣಗೊಳಿಸಲು ರೈಲ್ವೆ ಇಲಾಖೆಯು ವಾಡಿಕೆಯಂತೆ ಗಮನಾರ್ಹ ಸಂಖ್ಯೆಯ ವೇಟಿಂಗ್ ಲಿಸ್ಟ್ ಟಿಕೆಟ್‌ಗಳನ್ನು ನೀಡುತ್ತದೆ. ಮತ್ತು ವಿಪರೀತ ರದ್ದತಿ ಶುಲ್ಕಗಳನ್ನೂ ವಿಧಿಸುತ್ತದೆ ಎಂಬುದು ದೂರು.

ಎಸಿ ಚೇರ್-ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್‌ ದರ: 2019- 2022ರ ನಡುವೆ ಇಲಾಖೆಯು 10,000 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ತಿಳಿದು ಬಂದಿದೆ. ರಿಯಾಯಿತಿಗಳು, ಹೆಚ್ಚಿನ ದರಗಳು ಮತ್ತು ಇತರ ಅಂಶಗಳ ಹಿಂಪಡೆಯುವಿಕೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದೆ. ಕೆಲವು ಮಾರ್ಗಗಳು ರೈಲು ಸಂಚಾರದ ಕೊರತೆ ಎದುರಿಸುತ್ತಿವೆ. ಕಳೆದ ಮೂವತ್ತು ದಿನಗಳಲ್ಲಿ ಶೇ 50ಕ್ಕಿಂತ ಕಡಿಮೆ ಪ್ರಯಾಣಿಕರಿರುವ ರೈಲುಗಳಲ್ಲಿ ಎಸಿ ಚೇರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್‌ಗಳ ಬೆಲೆಯನ್ನು ತಾತ್ಕಾಲಿಕವಾಗಿ ಶೇ 50ರಷ್ಟು ಕಡಿಮೆ ಮಾಡಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ.

ಸರ್ಕಾರಕ್ಕೆ ಬೇಕು ಸಾಮಾಜಿಕ ಜವಾಬ್ದಾರಿ: ಭಾರತೀಯ ರೈಲ್ವೇ ತನ್ನ ಗಮನವನ್ನು ಲಾಭದಿಂದ ದೂರವಿಡಲಿ. ದರಗಳನ್ನು ಸಂಪೂರ್ಣವಾಗಿ ತರ್ಕಬದ್ಧಗೊಳಿಸಲಿ. ಸುರಕ್ಷತೆಗೆ ಒತ್ತು ನೀಡುವುದು ಅತಿಮುಖ್ಯ. ರೈಲ್ವೆಯ ಸರಿಯಾದ ನಿರ್ವಹಣೆ ಸರ್ಕಾರದ ಪ್ರಮುಖ ಸಾಮಾಜಿಕ ಜವಾಬ್ದಾರಿ. ಇನ್ನೊಂದೆಡೆ, ವಂದೇ ಭಾರತ್ ರೈಲುಗಳ ಪರಿಚಯವು ಭಾರತೀಯ ರೈಲ್ವೆಗೆ ಹೊಸ ಯುಗದ ಸುಳಿವು ನೀಡಿದರೆ, ಒಡಿಶಾದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತವು ವ್ಯವಸ್ಥೆಯಲ್ಲಿರುವ ಗಂಭೀರ ನ್ಯೂನತೆಗಳನ್ನು ಸರಿಪಡಿಸುವಲ್ಲಿ ವಿಫಲವಾಗಿದೆ. ಸಮಯಪಾಲನೆಗೆ ಹೆಸರುವಾಸಿಯಾದ ಅತ್ಯಂತ ವೇಗ ಮತ್ತು ಸುರಕ್ಷಿತ ರೈಲುಗಳನ್ನು ನಿರ್ವಹಿಸುವಲ್ಲಿ ಜಪಾನ್ ಪ್ರಸಿದ್ಧವಾಗಿದೆ.

ಸುರಕ್ಷತಾ ಮಾನದಂಡ- ಹಿಂದುಳಿದ ರೈಲ್ವೆ ಇಲಾಖೆ: ರೈಲ್ವೆಯನ್ನು ಸಾರ್ವಜನಿಕ ವಲಯದಲ್ಲಿ ಇಟ್ಟುಕೊಳ್ಳುವುದು ಸಾರ್ವಜನಿಕ ಹಿತಾಸಕ್ತಿಗೆ ಕೊಡುಗೆ ನೀಡುತ್ತದೆ ಎಂದು ಫ್ರಾನ್ಸ್ ಮತ್ತು ಇಟಲಿಯಂತಹ ದೇಶಗಳ ಅನುಭವಗಳು ಸಾಬೀತುಪಡಿಸುತ್ತವೆ. ಅನಿರೀಕ್ಷಿತ ಅಡಚಣೆಗಳ ಸಂದರ್ಭದಲ್ಲಿಯೂ ಸುರಕ್ಷಿತ ರೈಲು ಪ್ರಯಾಣವನ್ನು ನಿರ್ವಹಿಸುವಲ್ಲಿ ಚೀನಾ ಗಮನಾರ್ಹ ಸಾಮರ್ಥ್ಯ ಪ್ರದರ್ಶಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ರೈಲ್ವೆ ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ಹಿಂದುಳಿದಿದೆ ಎಂದು ಒಡಿಶಾ ಘಟನೆಯ ತನಿಖಾ ವರದಿಯಿಂದ ಸಾಬೀತಾಗಿದೆ. 2017 ರಿಂದ 2021 ರವರೆಗೆ, ರೈಲು ಹಳಿತಪ್ಪಿ 1,127 ಅಪಘಾತಗಳು ಸಂಭವಿಸಿವೆ. ಇದರಲ್ಲಿ ಶೇ 26 ಅಪಘಾತಗಳು ಟ್ರ್ಯಾಕ್​ ತಪ್ಪಿದ್ದರಿಂದಲೇ ನಡೆದಿವೆ.

ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಇರಲಿ : ಸಿಎಜಿ ವರದಿಯು ರೈಲ್ವೇ ಲೈನ್ ಆಧುನೀಕರಣದ ನಿಧಿಯ ಭೀಕರ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದು, ಸಮಸ್ಯೆಯ ಮೂಲ ಕಾರಣವನ್ನು ಸೂಚಿಸುತ್ತದೆ. ಟ್ರ್ಯಾಕ್ ಸುಧಾರಣೆಗೆ ಮೀಸಲಿಟ್ಟ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲತೆಯನ್ನೂ ಸಹ ಇದು ಬಹಿರಂಗಪಡಿಸಿತು. ಇಂತಹ ವ್ಯವಸ್ಥಿತ ಸಮಸ್ಯೆಗಳು ಪ್ರಯಾಣಿಕರ ಜೀವಕ್ಕೆ ಅಪಾಯವ ಉಂಟುಮಾಡುತ್ತವೆ. ಇದಲ್ಲದೆ, ರೈಲ್ವೆ ಸುರಕ್ಷತೆಯನ್ನು ಖಾತ್ರಿಪಡಿಸುವ ನಿರ್ಣಾಯಕ ಸ್ಥಾನಗಳನ್ನು ಭರ್ತಿ ಮಾಡುವಲ್ಲಿ ವಿಳಂಬವಾಗಿದೆ. ಪ್ರಯಾಣಿಕರಿಗೆ ಹೊರೆಯಾಗದಂತೆ ಹೆಚ್ಚುವರಿ ಆದಾಯ ಗಳಿಸಲು, ರೈಲ್ವೆ ತನ್ನ ದೇಶಿ ಸರಕು ಸಾಗಣೆಯ ಪಾಲನ್ನು ಹೆಚ್ಚಿಸಬೇಕು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಸಿಬ್ಬಂದಿಗೆ ಆವರ್ತಕ ತರಬೇತಿ ನೀಡುವುದು ಮತ್ತು ಹೊಣೆಗಾರಿಕೆ ಬೆಳೆಸುವುದು ತಕ್ಷಣದ ಅಗತ್ಯತೆಗಳಾಗಿವೆ. ಆಗ ಮಾತ್ರ ರೈಲ್ವೇ ನಿಜವಾಗಿಯೂ ದೇಶದ ಪ್ರಗತಿಯತ್ತ ಪಯಣಿಸುವ ಪ್ರಮುಖ ಸಾಧನವಾಗಬಲ್ಲದು.

ಇದನ್ನೂ ಓದಿ: ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಕ್ಲಾಸ್​ಗೆ ಶೇ.25 ರಷ್ಟು ರಿಯಾಯಿತಿ: ವಂದೇ ಭಾರತ್, ವಿಸ್ಟಾಡೋಮ್​ಗೂ ಅನ್ವಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.