ETV Bharat / bharat

ತಾಯಿಯ ಎದೆ ಹಾಲು ಕುಡಿಯುವ ಮಗುವಿಗೆ ಮದ್ಯ ಕುಡಿಸಿದ ಭೂಪ! - ಭೋಪಾಲ್​ ಸುದ್ದಿ

ತಾಯಿಯ ಎದೆ ಹಾಲು ಕುಡಿಯುವ ಎರಡು ವರ್ಷದ ಮಗುವಿಗೆ ಯುವಕನೊಬ್ಬ ಮದ್ಯ ಕುಡಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ವರದಿಯಾಗಿದೆ.

Ashoka Garden Police Station  Bhopal News  Two-year-old boy drinks liquor in Bhopal  bhopaal mein do saal ke bachche ko pilaee sharaab  Two-year-old child drinks liquor  do saal ke bachche ko pilaee sharaab  Rajdhani Bhopal  raajadhaanee bhopaal  ತಾಯಿಯ ಎದೆ ಹಾಲು ಕುಡಿಯುವ ಮಗುವಿಗೆ ಮದ್ಯ ಕುಡಿಸಿದ ಭೂಪ  ಭೋಪಾಲ್​ನಲ್ಲಿ ತಾಯಿಯ ಎದೆ ಹಾಲು ಕುಡಿಯುವ ಮಗುವಿಗೆ ಮದ್ಯ ಕುಡಿಸಿದ ಭೂಪ  ಭೋಪಾಲ್​ ಸುದ್ದಿ  ಭೋಪಾಲ್​ ಅಪರಾಧ ಸುದ್ದಿ
ತಾಯಿಯ ಎದೆ ಹಾಲು ಕುಡಿಯುವ ಮಗುವಿಗೆ ಮದ್ಯ ಕುಡಿಸಿದ ಭೂಪ
author img

By

Published : May 31, 2021, 10:04 AM IST

ಭೋಪಾಲ್‌ (ಮಧ್ಯಪ್ರದೇಶ): ಎದೆ ಹಾಲು ಕುಡಿಯುವ ಎರಡು ವರ್ಷದ ಮಗುವಿಗೆ 22 ವರ್ಷದ ಯುವಕನೊಬ್ಬ ಮದ್ಯ ಕುಡಿಸಿದ್ದಾನೆ. ಈ ಘಟನೆ ಇಲ್ಲಿನ ಅಶೋಕ್​ ಗಾರ್ಡನ್​ ನಗರದಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಪೊಲೀಸ್‌ ಅಧಿಕಾರಿಯಿಂದ ಮಾಹಿತಿ

ಅಶೋಕ್​ ಗಾರ್ಡನ್​ ಪೊಲೀಸ್​ ಠಾಣಾ ವ್ಯಾಪ್ತಿಯ ರೂಪನಗರದಲ್ಲಿ ವಾಸಿಸುವ ಸಂದೀಪ್​ ಭಾಟಿಯಾ ಅಲಿಯಾಸ್​ ಛೋಟು ಲಂಗಾ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಪಕ್ಕದ ಮನೆಯ ಎರಡು ವರ್ಷದ ಮಗುವನ್ನು ತಿಂಡಿ ತಿನಿಸುವ ನೆಪದಲ್ಲಿ ಹೊರಗೆ ಕರೆದೊಯ್ದಿದ್ದಾನೆ. ಈ ವೇಳೆ ಆತ ಮಗುವಿಗೆ ಮದ್ಯ ಕುಡಿಸಿದ್ದಾನೆ. ಬಳಿಕ ಮಗುವಿನ ಆರೋಗ್ಯ ಕ್ಷೀಣಿಸುತ್ತಾ ಹೋಗಿದೆ. ಇದರಿಂದ ಹೆದರಿದ ಆರೋಪಿ ಮಗುವನ್ನು ತಾಯಿಯ ಬಳಿ ಬಿಟ್ಟು ಪರಾರಿಯಾಗಿದ್ದ.

ಮಗು ವಾಂತಿ ಮಾಡಿದ್ದು ಮದ್ಯಪಾನ ಮಾಡಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಗುವಿನೊಂದಿಗೆ ತಾಯಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಳಿಕ ಮಗುವನ್ನು ಕಮಲಾ ನಗರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಜೆ.ಜೆ ಕಾಯ್ದೆಯಡಿ ಆರೋಪಿ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧನದ ವೇಳೆ ಆರೋಪಿ ಛೋಟು ಮದ್ಯಪಾನ ಸೇವಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.