ಐಜ್ವಾಲ್: ಮಾದಕ ವಸ್ತು ನಿಗ್ರಹ ದಳ, ಮಿಜೋರಾಂ ಅಬಕಾರಿ- ಮಾದಕ ವಸ್ತು ನಿಗ್ರಹ ಇಲಾಖೆ ಮತ್ತು ಅಸ್ಸಾಂ ರೈಫಲ್ಸ್ನ 46 ಬೆಟಾಲಿಯನ್ನಿಂದ ಐಜ್ವಾಲ್ನ ಬಾವ್ಗ್ಕಾನ್ ಶಾಲೋಂನಲ್ಲಿ ಕಾರ್ಯಾಚರಣೆ ನಡೆಸಿ 128 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ.
ಈ ಮಾದಕ ವಸ್ತುವಿನ ಮೌಲ್ಯ ಸುಮಾರು 57 ಲಕ್ಷದ 60 ಸಾವಿರ ರೂಪಾಯಿ ಎಂದು ಅಂದಾಜು ಮಾಡಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಚಂಪಾಯ್ ವೆಂಗ್ತಾರ್ ಟ್ಲಾಂನೌಮ್ ನಿವಾಸಿಯಾದ 25 ವರ್ಷ ವಯಸ್ಸಿನ ಲಾಲ್ಕಿಮಾ, ನಗೌರ್ ಗ್ರಾಮದ 38 ವರ್ಷದ ಮಂಗ್ಕನ್ಪೌವಾ ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆ್ಯಕ್ಟ್-1985ರ ಅಡಿಯಲ್ಲಿ ದೂರು ದಾಖಲಾಗಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.