ETV Bharat / bharat

ಸಂಸ್ಥೆಯೊಂದರಿಂದ 729 ಕೋಟಿ ರೂ. ತೆರಿಗೆ ವಂಚನೆ: ಡಿಜಿಜಿಐ ತನಿಖೆಯಲ್ಲಿ ಬಯಲು

author img

By

Published : Sep 1, 2022, 6:13 PM IST

ನೋಯ್ಡಾ ಸಂಸ್ಥೆಯೊಂದರ ಮೇಲೆ ಡಿಜಿಜಿಐ ಕಠಿಣ ಕ್ರಮವೊಂದನ್ನು ಕೈಗೊಂಡಿದೆ. ಈ ಕ್ರಮದಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಬಯಲಾಗಿದೆ. ಗುಜರಾತ್‌ನಿಂದ ದೆಹಲಿ - ಎನ್‌ಸಿಆರ್‌ಗೆ ಇ-ವೇ ಬಿಲ್ ಇಲ್ಲದೇ ತಂಬಾಕು ಸರಬರಾಜು ಮಾಡಲಾಗುತ್ತಿತ್ತು.

ಡಿಜಿಜಿಐ ತನಿಖೆ
ಡಿಜಿಜಿಐ ತನಿಖೆ

ಜೈಪುರ: ರಾಜಸ್ಥಾನದ ಡಿಜಿಜಿಐ ಜೈಪುರ ಘಟಕವು ನೋಯ್ಡಾ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ 729 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಬಯಲಾಗಿದೆ. ಚೂಯಿಂಗ್ ತಂಬಾಕನ್ನು ತುಂಬಿದ್ದ ಎರಡು ಟ್ರಕ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇ-ವೇ ಬಿಲ್ ಇಲ್ಲದೆಯೇ ಗುಜರಾತ್‌ನಿಂದ ದೆಹಲಿಗೆ ತಂಬಾಕು ಪೂರೈಕೆಯಾಗುತ್ತಿತ್ತು.

ನೋಯ್ಡಾದಿಂದ ಗುಜರಾತ್​ವರೆಗೆ ತಂಬಾಕು ಸಂಸ್ಥೆಯ ಲಿಂಕ್​ ವ್ಯಾಪಿಸಿದೆ. ತಂಬಾಕು ಫಾರ್ಮ್ ಸ್ಥಳದಲ್ಲೇ ಒಂದು ಕೋಟಿ ರೂಪಾಯಿ ಆದಾಯವನ್ನು ಜಮಾ ಮಾಡಿದೆ. ಡಿಜಿಜಿಐ ಈ ಸಂಪೂರ್ಣ ಮಾಹಿತಿಯನ್ನು ಗುರುವಾರ ಬಹಿರಂಗಪಡಿಸಿದೆ.

ತೆರಿಗೆ ವಂಚನೆ: ಮಾಹಿತಿಯ ಪ್ರಕಾರ, ಈ ಸಂಪೂರ್ಣ ವಿಷಯಕ್ಕೆ ಸಂಬಂಧಿಸಿದಂತೆ ಡಿಜಿಜಿಐಯ ಜೈಪುರ ಘಟಕದ ಮೇಲೂ ಹಲವು ಆರೋಪಗಳು ಕೇಳಿಬಂದಿವೆ. ಉನ್ನತ ಮಟ್ಟದ ಅಧಿಕಾರಿಗಳು ಕ್ರಮದ ಬಗ್ಗೆ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಪ್ರಾಥಮಿಕ ತನಿಖೆಯಲ್ಲಿ 729 ಕೋಟಿ ರೂ.ಗಳ ತೆರಿಗೆ ವಂಚನೆ ಬಯಲಿಗೆ ಬಂದಿದೆ. ಮುಂಬರುವ ತನಿಖೆಯಲ್ಲಿ ತೆರಿಗೆ ವಂಚನೆಯ ವ್ಯಾಪ್ತಿ ಇನ್ನಷ್ಟು ಹೆಚ್ಚಾಗಬಹುದು.

ಡಿಜಿಜಿಐ ಅಧಿಕಾರಿಗಳ ಪ್ರಕಾರ, ಡಿಜಿಜಿಐ ಜೈಪುರ ಘಟಕವು ಚೂಯಿಂಗ್ ತಂಬಾಕು ರಹಸ್ಯ ತಯಾರಿಕೆ ಮತ್ತು ಪೂರೈಕೆಯ ಪ್ರಮುಖ ಪ್ರಕರಣವನ್ನು ಬಹಿರಂಗಪಡಿಸಿದೆ. ಸುಮಾರು 729 ಕೋಟಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ. ದೆಹಲಿ-ಎನ್‌ಸಿಆರ್ ಮತ್ತು ಗುಜರಾತ್‌ನಲ್ಲಿ ಕೆಲವು ಸಂಸ್ಥೆಗಳು ನಕಲಿ ಸಂಸ್ಥೆಗಳ ಸೋಗಿನಲ್ಲಿ ತಯಾರಿಸಿದ ಕಚ್ಚಾ ತಂಬಾಕಿನ ರಹಸ್ಯ ಸಂಗ್ರಹಣೆ ಮತ್ತು ಪೂರೈಕೆಯಲ್ಲಿ ತೊಡಗಿವೆ ಎಂದು ಡಿಜಿಜಿಐ ಮಾಹಿತಿ ಪಡೆದಿದೆ.

ಡಿಜಿಜಿಐನ ಜೈಪುರ ಘಟಕದ ಅಧಿಕಾರಿಗಳು ಅನುಮಾನಾಸ್ಪದ ವಾಹನಗಳ ಚಲನವಲನದ ಮೇಲೆ ನಿಗಾ ವಹಿಸಿದ್ದರು. ಈ ಸಮಯದಲ್ಲಿ ಯಾವುದೇ ಇ-ವೇ ಬಿಲ್ ಮತ್ತು ಚಲನ್ ಇಲ್ಲದೆ ತಂಬಾಕು ಸಾಗಿಸುತ್ತಿದ್ದ ಎರಡು ಟ್ರಕ್‌ಗಳು ಸುಮಾರು 20 ದಿನಗಳ ಹಿಂದೆ ಬಗ್ರು ಪ್ರದೇಶದಲ್ಲಿ ಸಿಕ್ಕಿಬಿದ್ದವು. ನೋಯ್ಡಾ ಸಂಸ್ಥೆಯೊಂದು ಟ್ರಕ್‌ಗಳಲ್ಲಿ ತಯಾರಿಸಿದ ತಂಬಾಕನ್ನು ಗುಜರಾತ್‌ನಿಂದ ನೋಯ್ಡಾಗೆ ಕೊಂಡೊಯ್ಯುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸಿವಿಲ್, ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ಐಟಿ ದಾಳಿ: ಲೆಕ್ಕಕ್ಕೆ ಸಿಗದಷ್ಟು ನಗದು, 15 ಕೋಟಿ ರೂ. ಚಿನ್ನಾಭರಣ ವಶಕ್ಕೆ

ಗುಜರಾತ್ ಮತ್ತು ದೆಹಲಿ NCRನಲ್ಲಿ ಕೆಲವು ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲ, ಆದರೆ, ಈ ಸಂಸ್ಥೆಗಳ ನಡುವೆ ಕಚ್ಚಾ ತಂಬಾಕು ಸರಬರಾಜು ಮಾಡಲಾಗುತ್ತಿದೆ ಎಂದು DGGI ತನಿಖೆಯಿಂದ ತಿಳಿದು ಬಂದಿದೆ. ಕೆಲವು ಕಚ್ಚಾ ತಂಬಾಕು ಪೂರೈಕೆದಾರರನ್ನು ಗುರುತಿಸಲಾಗಿದೆ. ಅವರು ಕಚ್ಚಾ ತಂಬಾಕು ಪೂರೈಕೆಯಲ್ಲಿ ರಹಸ್ಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ನಕಲಿ ಸಂಸ್ಥೆಗಳ ಹೆಸರಿನಲ್ಲಿ ಕಚ್ಚಾ ತಂಬಾಕನ್ನು ದೆಹಲಿ ಎನ್‌ಸಿಆರ್‌ಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ನಕಲಿ ಸಂಸ್ಥೆಗಳ ಹೆಸರಿನಲ್ಲಿ ಕಚ್ಚಾ ತಂಬಾಕು ಸಾಗಣೆಯಲ್ಲಿ ತೊಡಗಿರುವುದನ್ನು ಸಾರಿಗೆ ಸಂಸ್ಥೆಯ ನೌಕರರು ಒಪ್ಪಿಕೊಂಡಿದ್ದಾರೆ. ರಹಸ್ಯವಾಗಿ ಕಚ್ಚಾ ತಂಬಾಕು ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.