ETV Bharat / bharat

ಒಟಿಟಿ, ವೆಬ್​​ ಚಾನೆಲ್​ಗಳಿಗೂ ಸೆನ್ಸಾರ್​ ಮಾಡಿ: ರಾಜ್ಯಸಭೆಯಲ್ಲಿ ಹೀಗೊಂದು ಚರ್ಚೆ - ಸೆನ್ಸರ್​ಶಿಪ್​​​ ಅಗತ್ಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ಹಾಗೂ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರುವುದಕ್ಕೆ ನಾವು ಪ್ರೋತ್ಸಾಹಿಸಲು ಆಗುವುದಿಲ್ಲ. ಇದನ್ನೆಲ್ಲ ತಡೆಯಲು ಒಟಿಟಿ ಮತ್ತು ವೆಬ್​​ ಚಾನೆಲ್​ಗಳಿಗೂ ಸೆನ್ಸಾರ್​ ಶಿಪ್​ ಮಾಡಲೇಬೇಕೆಂದು ಬಿಜೆಡಿ ಸಂಸದ ಪ್ರಸನ್ನ ಆಚಾರ್ಯ ಒತ್ತಾಯಿಸಿದ್ದಾರೆ.

ಒಟಿಟಿ ಮತ್ತು ವೆಬ್​​ ಚಾನೆಲ್​ಗಳಿಗೆ ಸೆನ್ಸರ್​
censorship of ott platforms
author img

By

Published : Mar 30, 2022, 6:25 PM IST

Updated : Mar 30, 2022, 6:47 PM IST

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಚಲನಚಿತ್ರಗಳು ಅತಿ ಹೆಚ್ಚಾಗಿ ಆನ್​ಲೈನ್​ ಪ್ಲಾಟ್​ ಫಾರಂಗಳಾದ ಒಟಿಟಿ ಮತ್ತು ವೆಬ್​ ಚಾನೆಲ್​ಗಳನ್ನೇ ನೆಚ್ಚಿಕೊಂಡಿವೆ. ಇದೇ ವಿಷಯವಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಒಟಿಟಿ ಮತ್ತು ವೆಬ್​​ ಚಾನೆಲ್​ಗಳಿಗೂ ಸೆನ್ಸಾರ್​ಶಿಪ್​​​ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.

ರಾಜ್ಯಸಭೆಯಲ್ಲಿ ಬಿಜು ಜನತಾ ದಳದ ಸದಸ್ಯ ಪ್ರಸನ್ನ ಆಚಾರ್ಯ ಈ ವಿಷಯವನ್ನು ಎತ್ತಿದ್ದಾರೆ. ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಇದೆ. ಒಟಿಟಿ ಹಾಗೂ ವೆಬ್​ ಚಾನೆಲ್​ಗಳಿಗೆ ಯಾವ ಸೆನ್ಸಾರ್ ಮಂಡಳಿಯೂ ಅನ್ವಯವಾಗಲ್ಲ. ಹೀಗಾಗಿ ಅಶ್ಲೀಲ ದೃಶ್ಯಗಳು ಮತ್ತು ಧಾರ್ಮಿಕ ದ್ವೇಷ ಭಾವನೆ ಹರಡುವ ವಿಷಯಗಳನ್ನು ತೆಗೆದುಹಾಕಲು ಸೆನ್ಸಾರ್​ಶಿಪ್ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಒಟಿಟಿ ನೋಡುಗರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಅದು ಕೋವಿಡ್​ ಕಾರಣದಿಂದ ಆಗಿರಬಹುದು ಮತ್ತು ಮನೋರಂಜನೆಗಾಗಿಯೂ ಆಗಿರಬಹುದು, ವೀಕ್ಷಕರು ಅಧಿಕವಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ವೆಬ್​ ಚಾನೆಲ್​ಗಳಲ್ಲಿ ಅತ್ಯಂತ ಅಶ್ಲೀಲ ಚಿತ್ರಗಳನ್ನು ತೋರಿಸಲಾಗುತ್ತದೆ. ತೀರ ಕೆಟ್ಟ ಭಾಷೆಯನ್ನೂ ಉಪಯೋಗಿಸಲಾಗುತ್ತಿದೆ. ಇದರಿಂದ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಯುವ ಜನಾಂಗದ ಮೇಲೆ ಇದರ ದುಷ್ಪರಿಣಾಮವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಲ್ಲದೇ, ಕೋಮು ಸಾಮರಸ್ಯವನ್ನೂ ಕಡೆಸುವ ಕೆಲ ಕಾರ್ಯಕ್ರಮಗಳ ಕೂಡ ವೆಬ್​ ಚಾನೆಲ್​ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇಂತಹದ್ದನ್ನೆಲ್ಲಾ ತಡೆಯಲು ಸೆನ್ಸಾರ್​ಶಿಪ್ ಅಗತ್ಯ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ಹಾಗೂ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರುವುದನ್ನು ನಾವು ಪ್ರೋತ್ಸಾಹಿಸಲು ಆಗುವುದಿಲ್ಲ ಎಂದು ಪ್ರತಿಪಾದಿಸಿದರು.

ಜತೆಗೆ ಟ್ವಿಟರ್​ನಲ್ಲಿ ಧಾರ್ಮಿಕತೆ ಬಗ್ಗೆ ಕೆಟ್ಟ ಕಾಮೆಂಟ್​ಗಳಿಗೆ ಅವಕಾಶ ನೀಡಿರುವ ವಿಷಯವಾಗಿ ದೆಹಲಿ ಹೈಕೋರ್ಟ್​ ಟೀಕಿಸಿದೆ ಎಂಬುವುದನ್ನೂ ಸದನದ ಗಮನಕ್ಕೆ ತಂದ ಅವರು, ಒಟಿಟಿ ಮತ್ತು ವೆಬ್​​ ಚಾನೆಲ್​ಗಳಿಗೆ ಸೆನ್ಸಾರ್​ಶಿಪ್ ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಇದನ್ನೂ ಓದಿ: ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡೇ ಉಗ್ರರೊಂದಿಗೆ ನಂಟು: ಶಿಕ್ಷಕ, ಪೊಲೀಸ್​ ಸೇರಿ ಐವರು ವಜಾ

Last Updated : Mar 30, 2022, 6:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.