ನವದೆಹಲಿ: ದೇಶಾದ್ಯಂತ ಹಿಟ್ ಅಂಡ್ ರನ್ ಕೇಸ್ಗಳು ಹೆಚ್ಚಾಗುತ್ತಿವೆ. ಹೊಸ ವರ್ಷದಂದು ಮಧ್ಯರಾತ್ರಿ ಯುವತಿಗೆ ಡಿಕ್ಕಿಯಾಗಿ 4 ಕಿಮೀ ದೂರ ಕಾರಿನಡಿ ಎಳೆದೊಯ್ಯಲಾಗಿತ್ತು. ಬೆಂಗಳೂರಿನಲ್ಲಿ 2 ದಿನಗಳ ಹಿಂದೆ ಕಾರಿಗೆ ಬೈಕ್ ಗುದ್ದಿದ್ದಲ್ಲದೇ, ತಪ್ಪಿಸಿಕೊಳ್ಳಲು 70 ವರ್ಷದ ವೃದ್ಧನನ್ನು ಯುವಕನೊಬ್ಬ 1 ಕಿಮೀ ದೂರ ಧರಧರನೇ ಎಳೆದೊಯ್ದಿದ್ದ. ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ ಸ್ವತಃ ಪರೀಕ್ಷಿಸಲು ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯನ್ನೇ ಕಿಡಿಗೇಡಿಗಳು 15 ಮೀಟರ್ ಕಾರಿನಲ್ಲಿ ಎಳೆದೊಯ್ದ ಆಘಾತಕಾರಿ ದೆಹಲಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
-
कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए।
— Swati Maliwal (@SwatiJaiHind) January 19, 2023 " class="align-text-top noRightClick twitterSection" data="
">कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए।
— Swati Maliwal (@SwatiJaiHind) January 19, 2023कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए।
— Swati Maliwal (@SwatiJaiHind) January 19, 2023
ಹೌದು, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಲಿವಾಲ್ ಅವರನ್ನು ಪಾನಮತ್ತ ಕಿಡಿಗೇಡಿಗಳು ಕಾರಿನಲ್ಲಿ ಎಳೆದೊಯ್ದಿದ್ದಾರೆ ಎಂದು ಅವರೇ ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ನೀವೇ ಗಮನಿಸಿ ಎಂದು ಅವರು ಪ್ರಶ್ನಿಸಿದ್ದಾರೆ. ಘಟನೆಯ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನಾಯ್ತು?: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು, ಬುಧವಾರ ತಡರಾತ್ರಿ ಮಫ್ತಿಯಲ್ಲಿದ್ದು, ನಗರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪರಿಶೀಲನೆಗೆ ಆಗಮಿಸಿದ್ದರು. ಈ ವೇಳೆ, ಪಾನಮತ್ತನಾಗಿದ್ದ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ತನ್ನನ್ನು ಸನ್ನೆ ಮಾಡಿ ಕರೆದ. ಬಳಿಕ ನಾನು ಕಾರಿನ ಪಕ್ಕದಲ್ಲಿ ಹೋದಾಗ ಕಾರಿನಡಿ ಕೂರಲು ಹೇಳಿದರು. ಇದಕ್ಕೆ ನಾನು ನಿರಾಕರಿಸಿದಾಗ, ಆತ ನನ್ನ ಕೈಹಿಡಿದು ಎಳೆದೊಯ್ಯಲು ಯತ್ನಿಸಿದ.
ಕಾರಿನ ಪಕ್ಕದ ಕನ್ನಡಿಗಳಿಂದ ನನ್ನ ಕೈಯನ್ನು ಆತ ಲಾಕ್ ಮಾಡಿದ. ಕಾರು ಚಲಾಯಿಸಿಕೊಂಡು 15 ಮೀಟರ್ ಓಡಿಸಿದ. ನಾನು ಕೂಡ ಕಾರಿನ ಜೊತೆಗೇ ಓಡಿದೆ. ಅದೃಷ್ಟವಶಾತ್ ಆತನಿಂದ ತಪ್ಪಿಸಿಕೊಂಡೆ. ದೆಹಲಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯ ಪ್ರಾಣಕ್ಕೇ ಭದ್ರತೆಯಿಲ್ಲ ಎಂದಾದರೆ, ಸಾಮಾನ್ಯರ ಬದುಕು ಹೇಗಿರಬಹುದು ನೀವೇ ಊಹಿಸಿ ಎಂದು ಮಲಿವಾಲ್ ಅವರು ಪ್ರಶ್ನಿಸಿದ್ದಾರೆ.
ತಕ್ಷಣವೇ ಮಲಿವಾಲ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿ ಗಸ್ತಿನಲ್ಲಿದ್ದ ಗರುಡಾ ಪಡೆ ಸಿಬ್ಬಂದಿ ಆರೋಪಿಯ ಕಾರನ್ನು ಬೆನ್ನತ್ತಿ ಹಿಡಿದಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ದೂರಿನ ಮೇರೆಗೆ ಪ್ರಕರಣ ದಾಖಲಿಸಿಳ್ಳಲಾಗಿದೆ. ಬಂಧಿತ ಕಾರು ಚಾಲಕನನ್ನು ದೆಹಲಿಯ ಸಂಗಮ್ ವಿಹಾರ್ ನಿವಾಸಿ ಹರೀಶ್ ಚಂದ್ರ ಎಂದು ಗುರುತಿಸಲಾಗಿದೆ. ಈತ ಲೆಫ್ಟಿನೆಂಟ್ ದುರ್ಜನ್ ಸಿಂಗ್ ಅವರ ಪುತ್ರ ಎಂದು ಹೇಳಲಾಗಿದೆ.
ಹಿಟ್ ಅಂಡ್ ರನ್ ಕೇಸ್ಗಳು: ಪಂಜಾಬ್ನಲ್ಲಿ ರಸ್ತೆ ಬದಿಯಲ್ಲಿ ಬೀದಿ ನಾಯಿಗೆ ಆಹಾರ ಹಾಕುತ್ತಿದ್ದಾಗ ವೇಗವಾಗಿ ಬಂದ ಜೀಪ್ ಯುವತಿಯನ್ನು ಗುದ್ದಿಕೊಂಡು ಹೋಗಿತ್ತು. ಗಾಯಗೊಂಡ ಯುವತಿಯನ್ನು ಪೊಲೀಸ್ ಕಂಟ್ರೋಲ್ ರೂಮ್ನ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಚೇತರಿಸಿಕೊಳ್ಳುತ್ತಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಹುಡುಕುತ್ತಿದ್ದಾರೆ. ರಾತ್ರಿ ವೇಳೆ ಎಸ್ಯುವಿ ಕಾರು ಗುದ್ದಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿ ತೇಜಶ್ವಿತಾ ಮತ್ತು ಅವರ ತಾಯಿ ಎಂದಿನಂತೆ ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಅಪಘಾತ ಮಾಡಿ ಪರಾರಿಯಾಗಿದ್ದರು.
ಕಾಂಜಾವಾಲಾ ಪ್ರಕರಣ: ದೆಹಲಿಯಲ್ಲಿ ಡಿಸೆಂಬರ್ 31ರಂದು ಕುಡಿದ ಮತ್ತಿನಲ್ಲಿದ್ದ ಐವರು ಸುಲ್ತಾನ್ಪುರದಲ್ಲಿ 4 ಕಿಲೋ ಮೀಟರ್‌ಗಳವರೆಗೆ ಯುವತಿಯನ್ನು ಕಾರಿನಡಿ ಎಳೆದೊಯ್ದು ಪ್ರಕರಣ ದೇಶವನ್ನು ಬೆಚ್ಚಿಬೀಳಿಸಿತ್ತು. ರಾತ್ರಿ ವೇಳೆ ಕಾರು ಸ್ಕೂಟಿಗೆ ಗುದ್ದಿದೆ. ಸ್ಕೂಟಿಯಲ್ಲಿದ್ದ ಯುವತಿ ಕಾರಿನ ಚಕ್ರಕ್ಕೆ ಸಿಲುಕಿದ್ದರು. ಪಾನಮತ್ತರಾಗಿದ್ದ ಆರೋಪಿಗಳು ಯುವತಿ ಕಾರಿನಡಿ ಸಿಲುಕಿದ್ದ ತಿಳಿಯದೇ ಎಳೆದೊಯ್ದಿದ್ದರು.
ಬೆಂಗಳೂರಿನಲ್ಲಿ ನಡೆದಿತ್ತು ಘಟನೆ: 2 ದಿನಗಳ ಹಿಂದೆ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತವಾಗಿತ್ತು. ನಂತರ ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಕಾರಿನ ಚಾಲಕ ಬೈಕ್ ಹಿಂಬದಿ ಜೋತು ಬಿದ್ದಿದ್ದ. 1 ಕಿಲೋಮೀಟರ್ವರೆಗೂ ಆತನನ್ನು ಯುವಕ ಎಳೆದೊಯ್ದಿದ್ದ.
ಓದಿ: ಬೆಂಗಳೂರು ಅಪಘಾತ ಪ್ರಕರಣ: ’ಭಯದಿಂದ ಹೀಗೆ ಮಾಡಿದ್ದೇ.. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಬಿಡಲಿಲ್ಲ’